ರೋಟರಿ ಸಂಸ್ಥೆಯಿಂದ ಲ್ಯಾಪ್‌ಟಾಪ್ ಕೊಡುಗೆ
ಕೋಲಾರ,ಸೆ,೫- ಮಂಗಳೂರಿನ ಪುತ್ತೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿನಿ ಕೋಲಾರ ತಾಲ್ಲೂಕಿನ ಬೆಳಮಾರನಹಳ್ಳಿಯ ಬಿ.ಎಲ್.ಕಾವ್ಯ ಬಿನ್ ಲೋಕೇಶ್ ಅವರಿಗೆ ರೋಟರಿ ಬೆಂಗಳೂರು ಹಲಸೂರು ಶಾಖೆಯ ರೋಟೇರಿಯನ್ ಬಿ.ವಿ.ರಾಜೇಶ್ ಅವರು ಲ್ಯಾಪ್ ಟಾಪ್ ಕೊಡುಗೆಯಾಗಿ ನೀಡಿ,ಶೈಕ್ಷಣಿಕ ಸಾಧನೆ ಮಾಡಲು ಶುಭ ಕೋರಿದರು.
ವಿದ್ಯಾರ್ಥಿನಿ ಕಾವ್ಯ ಅವರ ಮನವಿಗೆ ಸ್ಪಂದಿಸಿದ ಅವರು ರೋಟರಿಯಿಂದ ಲ್ಯಾಪ್ ಟಾಪ್ ಕೊಡುಗೆಯಾಗಿ ವಿತರಿಸಿದ್ದು, ರೋಟರಿ ಶಿಕ್ಷಣ,ಆರೋಗ್ಯ,ಸ್ವಚ್ಚತೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಿಗೆ ನಿರಂತರವಾಗಿ ನೆರವು ನೀಡುತ್ತಾ ಬಂದಿದೆ ಎಂದು ತಿಳಿಸಿದರು.
ನೀವು ರೋಟರಿ ಸದಸ್ಯರಾಗಿ ರಕ್ತದಾನಶಿಬಿರ, ಹೃದಯಶಸ್ತ್ರಚಿಕಿತ್ಸಾ ಶಿಬಿರ ಸೇರಿದಂತೆ ಆರೋಗ್ಯಕ್ಕೂ ಒತ್ತು ನೀಡಲಾಗಿದೆ, ಇಂದು ಭಾರತ ಪೋಲಿಯೋ ಮುಕ್ತವಾಗಲು ರೋಟರಿ ನೀಡಿರುವ ಸಹಕಾರವೂ ಮುಖ್ಯವಾಗಿದೆ ಎಂದರು.
ವಿದ್ಯಾರ್ಥಿನಿ ಕಾವ್ಯ, ತನ್ನ ಬಡತನ ಓದಿಗೆ ಅಡ್ಡಿಯಾಗಿದ್ದು, ಇಂತಹ ಸಂದರ್ಭದಲ್ಲಿ ನನ್ನ ಶೈಕ್ಷಣಿಕ ಸಾಧನೆಗೆ ಲ್ಯಾಪ್‌ಟಾಪ್ ನೀಡುವ ಮೂಲಕ ನೆರವಾಗಿರುವ ರೋಟರಿ ಸಂಸ್ಥೆಗೆ ಧನ್ಯವಾದ ಹೇಳಿದರು.
ಈ ಸಂದರ್ಭದಲ್ಲಿ ರೋಟರಿ ಪದಾಧಿಕಾರಿಗಳು ಹಾಗೂ ಅರಾಭಿಕೊತ್ತನೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತ ಬಸವರಾಜ್ ಮತ್ತಿತರರಿದ್ದರು.