ಬಬಲೇಶ್ವರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹಲಗಣಿ, ಶೇಗುಣಸಿ ಗ್ರಾಮ ಪಂಚಾಯತಿಗೆ ಭೇಟಿ, ಪರಿಶೀಲನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೫:ಜಿಲ್ಲೆಯ ಬಬಲೇಶ್ವರ ತಾಲೂಕಿನ ಹಲಗಣಿ ಮತ್ತು ಶೇಗುಣಿಸಿ ಗ್ರಾಮಕ್ಕೆ ಬಬಲೇಶ್ವರ ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ವಿ.ಎಸ್. ಹಿರೇಮಠ ದಿಢೀರ್À ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿದ ಹಿರೇಮಠ ಅವರು, ವೈಯಕ್ತಿಕ ಶೌಚಾಲಯ ನಿರ್ಮಾಣದ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿ ಶೌಚಾಲಯಕ್ಕಾಗಿ ಅರ್ಜಿಗಳನ್ನು ಪರಿÀಶೀಲಿಸಿ ಜಿ.ಪಿ.ಎಸ್ ಮಾಡಿ ಹಣಪಾವತಿ ಮಾಡಿಸಿ ಎಂದು ಕಾರ್ಯದರ್ಶಿಗೆ ಸೂಚಿಸಿದರು.
ಕರ ವಸೂಲಾತಿ ಮಾಸಿಕ ಅಂತ್ಯಕ್ಕೆ ಏರಿಕೆಯಾಗಬೇಕು. ಕಳೆದ ತಿಂಗಳಕ್ಕಿAತÀ ಸರಾಸರಿ ಪ್ರಮಾಣ ಹೆಚ್ಚಾಗಿರಬೇಕೆಂದು ತಿಳಿಸಿದರು.
ಗ್ರಾಮದಲ್ಲಿರುವ ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಭೇಟಿ ಮಾಡಿ ಈ ಕೇಂದ್ರದಲ್ಲಿ ಸಿಗುವ ಸೇವೆಗಳ ಬಗ್ಗೆ ಸಮುದಾಯ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಅಲ್ಲಿನ ಸಿಬ್ಬಂದಿಗಳ ಹಾಜರಾತಿ ಮಾಡಿ ಮೂಲಭೂತ ಸೌಕರ್ಯಗಳ ಅವಶ್ಯಕತೆ ಬಗ್ಗೆ ತಿಳಿಸಲು ಸೂಚಿಸಿದರು. ಶೇಗುಣಿಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ಮಾಡಿ ಕಂಪೌAಡ ಆಟದ ಮೈದಾನ ಬಿಸಿಊಟದ ಕೋಣೆಯನ್ನು ವೀಕ್ಷಣೆ ಮಾಡಿ ಶಾಲಾ ವಾತಾವರಣ ಶುಚಿತ್ವ ಇಟ್ಟಿಕೊಳ್ಳಬೇಕೆಂದು ಮುಖ್ಯ ಗುರುಗಳಿಗೆ ನಿರ್ದೆಶನ ನೀಡಿದರು.
ಮಕ್ಕಳ ಜೊತೆ ಸಂವಾದ ಮಾಡಿ ಮಕ್ಕಳಿಗೆ ವಿತರಣೆ ಮಾಡಿದ ಸಮವಸ್ತç ಮತ್ತು ಪುಸ್ತಕಗಳನ್ನು ಸರಿಯಾಗಿಟ್ಟುಕೊಳ್ಳುವಂತೆ ಹೇಳಿದರು. ಶಿಕ್ಷಕರಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳಿಗೆ ಆದ್ಯತೆ ಕೊಡಬೇಕೆಂದು ಸಲಹೆ ನೀಡಿದರು. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಪೌಷ್ಟಿಕ ಆಹಾರ ದಿನಚರಿಯ ಪರಿಶೀಲನೆಮಾಡಿ ಪ್ರತಿನಿತ್ಯ ನೀಡುವ ಮಕ್ಕಳಿಗೆ ನೀಡುವ ಆಹಾರ ಮೆನುವಿನ ಬಗ್ಗೆ ಚರ್ಚೆ ಮಾಡಿದರು. ಈ ಸಂದರ್ಭದಲ್ಲಿ ವಿಷಯ ನಿರ್ವಾಹಕ ಸಹಿಸ್ತಾ ಸನದಿ, ಶಾಂತಪ್ಪ ಸಾವಳಗಿ, ನಾರಾಯಣ ಬಡಿಗೇರ, ಯಲ್ಲಪ್ಪ ವಾಲೀಕಾರ, ಮುಖ್ಯೋಪಾಧ್ಯಾಯರು, ಶಿಕ್ಷಕರು, ಅಂಗನವಾಡಿ ಶಿಕ್ಷಕರು ಹಾಜರಿದ್ದರು.