ಆಧ್ಯಾತ್ಮ ಶಕ್ತಿಶಾಲಿಯಾದಂತಹದ್ದು:ಜಗದ್ಗುರು
ತಾಳಿಕೋಟೆ:ಸೆ.೫: ಬಳಗಾನೂರ ಗ್ರಾಮದಲ್ಲಿ ಮಂಜುಳಾ ತಾಯಿಯವರು ಶ್ರಾವಣ ಮಾಸದ ನಿಮಿತ್ಯವಾಗಿ ೧ ತಿಂಗಳ ರ‍್ಯಂತ ಅನುಷ್ಠಾನ ಕೈಕೊಂಡು ಇಂದು ಅನುಷ್ಠಾನ ಮಂಗಲೋತ್ಸವವನ್ನು ಏರ್ಪಡಿಸಿರುವದನ್ನು ನೋಡಿದರೆ ಇದೊಂದು ಜಾತ್ರೆಯ ಸಂಭ್ರಮವೇ ಎದ್ದು ಕಾಣುತ್ತಲಿದೆ ಎಂದು ಹುಬ್ಬಳ್ಳಿಯ ಮಹಾ ಸಂಸ್ಥಾನ ಮೂರು ಸಾವಿರ ಮಠದ ಜಗದ್ಗುರುಗಳಾದ ಡಾ.ಗುರುಸಿದ್ದ ರಾಜಯೋಗೇಂದ್ರ ಮಹಾಸ್ವಾಮಿಗಳು ನುಡಿದರು.
ಬುಧವಾರರಂದು ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಪೂಜ್ಯ ಶ್ರೀ ಶಿವಶರಣೆ ಮಂಜುಳಾತಾಯಿಯವರು ಲೋಕಕಲ್ಯಾಣಾರ್ಥವಾಗಿ ಶ್ರಾವಣ ಮಾಸದಲ್ಲಿ ಕೈಕೊಂಡ ೧೧ನೇ ಮೌನಾನುಷ್ಠಾನ ಮಂಗಲ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಶ್ರೀಗಳು ಮಂಜುಳಾತಾಯಿಯವರು ಯಾವ ಗರ್ಭಗುಡಿಯಲ್ಲಿ ಕುಳಿತುಕೊಳ್ಳದೇ ಅನುಷ್ಠಾನವನ್ನು ಮಾಡಿದ್ದಾರೆ ತಮ್ಮ ಮನೆಯ ಪೂಜಾ ಕೋಣೆಯನ್ನೇ ಗರ್ಭಗುಡಿಯನ್ನಾಗಿ ಮಾಡಿಕೊಂಡು ಲೋಕಕಲ್ಯಾಣಕ್ಕಾಗಿ ಅನುಷ್ಠಾನ ಕೈಕೊಂಡಿರುವದು ಸಂತಸ ತಂದಿದೆ ಎಂದರು. ಈಗಾಗಲೇ ಅವರು ಕೈಕೊಂಡ ಅನುಷ್ಠಾನಗಳಲ್ಲಿ ೧೧ನೇ ಅನುಷ್ಠಾನ ಇದಾಗಿದೆ ಆದ್ಯಾತ್ಮ ಅನ್ನುವಂತಹದ್ದು ಶಕ್ತಿಶಾಲಿಯಾದಂತಹದ್ದು ಆಗಿದೆ ಅದು ವಿಕಾಸಕ್ಕೆ ಕೊಂಡೊಯುತ್ತದೆ ಭಜನೆ ಇರಲಿ ದ್ಯಾನವು ಇರಲಿ, ಪ್ರವಚನವು ಇರಲಿ, ಮೌನಸ್ಥಾನದೊಂದಿಗೆ ಎತ್ತರಕ್ಕೆ ಒಯುತ್ತದೆ ಎಂದರು. ದೈವತ್ವದ ಭಾವನೆಗಳಿಗೆ ಕರೆದುಕೊಂಡು ಹೋಗುವದೇ ಅನುಷ್ಠಾನವಾಗಿದ್ದು ದೇಶದ ಭಹುದೊಡ್ಡ ಶಕ್ತಿ ಮೌನದ ದ್ಯಾನ, ಹಠಯೋಗ, ಶಿವಯೋಗ, ಕ್ರೀಯಾಯೋಗ ಇರಬಹುದು ಇವೇಲ್ಲವೂ ಆದ್ಯಾತ್ಮಕ ಶಕ್ತಿಯನ್ನು ವಿಕಾಸಗೊಳಿಸುತ್ತಾ ಭಾರತದಲ್ಲಿ ಅನೇಕ ವರ್ಷಗಳಿಂದ ನಡೆದುಬಂದಿದೆ ಎಂದರು. ಇಂತಹ ಯೋಗ ಮಾಡಿದವರಿಗೆ ಅನುಷ್ಠಾನ ಕುಳಿತುಕೊಂಡಿದ್ದಾರೆನ್ನಲಾಗುತ್ತಿದೆ ಅನು ಅಂದರೆ ಅನುಸರಿಸಿ ಇರುವದು ಅವಸರಿ ಕಿಷ್ಠಾ ಇರುವದಕ್ಕೆ ಅನುಷ್ಠಾನ ಅನ್ನುವದ್ದಾಗಿದೆ ಎಂದರು. ಮನುಷ್ಯವ ವ್ಯವಹಾರದಲ್ಲಿ ಒತ್ತಡವನ್ನು ಬದಿಗಿಟ್ಟು ಮಾಡಿಕೊಂಡು ಹೊರಟ ಪರಿಹಾರವೇ ಅನುಷ್ಠಾನವಾಗಿದೆ ಮಂಜುಳಾ ತಾಯಿಯವರು ಊಟವನ್ನು ಮರೆತು ಕುಳಿತಿದ್ದಾರೆ ೧ ತಿಂಗಳಲ್ಲಿ ಯಾರಿಗಾದರೂ ವಯಸ್ಸಿಗೆ ತಕ್ಕಂತೆ ಊಟ ದೊರೆಯದಿದ್ದರೆ ಅದನ್ನು ತಡೆಯುವ ಶಕ್ತಿ ಯಾಗುವದಿಲ್ಲಾ ಅಂತಹ ಶಕ್ತಿಯನ್ನು ಪಡೆದುಕೊಂಡು ಆದ್ಯಾತ್ಮದ ಶರೀರವನ್ನು ನಿಮ್ಮೂರಲ್ಲಿ ಪಡೆದಿದ್ದ ನೀವೇಲ್ಲರೂ ಪುಣ್ಯವಂತರೆAದು ಬಳಗಾನೂರ ಗ್ರಾಮದ ಗ್ರಾಮಸ್ಥರಿಗೆ ತಿಳಿ ಹೇಳಿದ ಜಗದ್ಗುರುಗಳು ಈ ಹಿಂದೆ ಶಿವಶರಣೆ ಮಂಜುಳಾತಾಯಿಯವರು ಹುಬ್ಬಳ್ಳಿಯಲ್ಲಿ ಒಂದೂವರೆ ತಿಂಗಳು ಮಾಡಿದ ಅನುಷ್ಠಾನ ಕುರಿತು ಹೇಳಿದ ಶ್ರೀಗಳು ಬಸವಣ್ಣನವರು ಹೇಳಿದನ್ನು ಕೆಲವು ಹಿತನುಡಿಗಳನ್ನು ಶ್ರೀಗಳು ವಿವರಿಸಿದರು.
ಇನ್ನೋರ್ವ ಸಿಂಧಗಿ ಸಾರಂಗಮಠದ ಶ್ರೀ ಷ.ಬ್ರ. ಪ್ರಭುಸಾರಂಗ ದೇವ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಅಷ್ಠಾಂಗಯೋಗವೆAಬುದು ಮಾಡುವದು ಸಾಮಾನ್ಯ ಜನರಿಗೆ ಬಹಳೇ ಕಷ್ಟವಾಗಲಿ ಅಂತಹ ಯೋಗವನ್ನು ಬಳಗಾನೂರಿನ ಮಂಜುಳಾತಾಯಿ ಅವರು ಮಾಡಿದ್ದಾರೆಂದರು. ಮಂಜುಳಾತಾಯಿ ಯವರು ಅನೇಕ ಸಲ ಅನುಷ್ಠಾನ ಮಾಡಿದ್ದಾರೆ ಇದಕ್ಕೆ ಕಾರಣ ಗುರುಕೃಪೆಯೇ ಕಾರಣವೆಂದರು. ಆತ್ಮೀಯತೆ ಎಂಬುದು ಬೇಕಾಗುತ್ತದೆ ಇದನ್ನು ಜೀವನದಲ್ಲಿ ಅಳವಡಿಸಿಕೊಂಡವರು ಇಂತಹ ಕಾರ್ಯಮಾಡುತ್ತಾರೆ ನೀರಾಪೇಕ್ಷೆಯಿಂದ ಮಾಡಿದರೆ ಅದರಲ್ಲಿ ಯಶಸ್ವಿ ಕಾಣಬಹುದಾಗಿದೆ ಎಂದ ಅವರು ನಿರಿಲಿಪ್ತವಾದ ಮನೋಭಾವನೆಯನ್ನು ಅಳವಡಿಸಿಕೊಂಡರೆ ಮಾತ್ರ ಇಂತಹ ಅನುಷ್ಠಾನವಾಗುತ್ತದೆ ಲಿಂಗ ಪೂಜೆ ಮಾಡಿದ ಶಕ್ತಿ ನಿನಗಾಗಿ, ನಿಮಗೋಸ್ಕರ ಮಾಡಿದ್ದಾರೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಜಗದ್ಗುರುಗಳು ಮಂಜುಳಾತಾಯಿಯವರಿಗೆ ಪ್ರಸಾದ ಕೊಟ್ಟು ಅನುಷ್ಠಾನವನ್ನು ಮಂಗಲ ಮಾಡಿದ್ದಾರೆ. ಈ ಊರಲ್ಲಿ ಅವರ ಅನುಷ್ಠಾನ ಕಾರ್ಯಕ್ರಮಕ್ಕೆ ಧಾರ್ಮಿಕ ಕಾರ್ಯಕ್ರಮಕ್ಕೆ ಅನುಕೂಲವಾಗಲೆಂಬ ಕಾರಣದಿಂದ ಗ್ರಾಮಸ್ತರೆಲ್ಲರೂ ಕೂಡಿ ಒಂದು ಜಾಗೆ ವ್ಯವಸ್ಥೆ ಮಾಡಿಕೊಡಿ ಆ ಸ್ಥಳದಲ್ಲಿ ಅನುಷ್ಠಾನ ಮಾಡಲು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾದ್ಯವಾಗಲಿದೆ ಎಂದರು.
ಇನ್ನೋರ್ವ ಮನಗೂಳಿ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ.ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಅನುಷ್ಠಾನ ಯಶಸ್ವಿಗೊಳಿಸಿದ ಶಿವಶರಣೆ ಮಂಜುಳಾತಾಯಿಯವರಿಗೆ ಜಗದ್ಗುರುಗಳು ಆಶಿರ್ವದಿಸಿದ್ದಾರೆ ಈ ಹಿಂದೆ ಮಂಜುಳಾತಾಯಿಯವರು ೩ ತಿಂಗಳವರೆಗೂ ಕೂಡಾ ಅನುಷ್ಠಾನ ಮಾಡಿದ್ದಾರೆ ಅವರ ಅನುಷ್ಠಾನ ಅವರ ವೈಯಕ್ತಿಕ ಹಿತಾಶಕ್ತಿಗಲ್ಲಾ ಎಲ್ಲರೂ ಸುಖದಿಂದ ಇರಲಿ ಎಲ್ಲರೂ ಚೆನ್ನಾಗಿ ಬಾಳ್ವೆ ಮಾಡಲಿ ಎಂಬ ಉದ್ದೇಶವಾಗಿದೆ ಎಂದ ಅವರು ಯಾವ ರೀತಿ ದೀಪ ತನ್ನನ್ನು ತಾನು ಸುಟ್ಟುಕೊಂಡು ಬೆಳಕು ಕೊಡುತ್ತದೆಯೋ ಅದೇ ರೀತಿ ಮಂಜುಳಾತಾಯಿಯವರು ಮಾಡಿದ ಅನುಷ್ಠಾನ ತಮಗೆ ಎಷ್ಟೇ ತೊಂದರೆಯಾಗಿದ್ದರೂ ೧೧ನೇ ಅನುಷ್ಠಾನ ಕೈಕೊಂಡು ಎಲ್ಲರೂ ಸುಖವಾಗಿರಲಿ ಎಂಬ ಉದ್ದೇಶ ಹೊತ್ತಿರುವ ಅವರ ಸೇವಾ ಕಾರ್ಯಕ್ಕೆ ಎಲ್ಲರೂ ಗಮನಕೊಟ್ಟು ಇನ್ನುಮುಂದೆ ಅವರಿಗೊಂದು ಜಾಗೆಯ ವ್ಯವಸ್ಥೆ ಮಾಡಿ ಮಂಗಲ ಕಾರ್ಯಕ್ಕೆ ಅನುಕೂಲವಾಗುವಂತೆ ಕಾರ್ಯ ಮಾಡಿದರೆ ಅನುಕೂಲವಾಗುತ್ತದೆ ಎಂದು ಪರಮಾತ್ಮ ಬಿಕ್ಷÄಕ ರೂಪದಲ್ಲಿ ಬಂದು ಪರಿಕ್ಷೀಸಿದ ಒಂದು ಚಿಕ್ಕ ಕಥೆಯೊಂದನ್ನು ಹೇಳಿ ಎಲ್ಲರಿಗೂ ಮನವರಿಕೆ ಮಾಡಿಕೊಟ್ಟರು.
ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ, ಅಸ್ಕಿ ಪೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಶಂಕರಗೌಡ ಹಿರೇಗೌಡರ, ನಿವೃತ್ತ ಶಿಕ್ಷಕ ಎಸ್.ಆಯ್.ಕಡಕೋಳ, ಬಾಗಲಕೋಟ ಜಿಪಂ ಮಾಜಿ ಅಧ್ಯಕ್ಷೆ ಶ್ರೀಮತಿ ವಿಣಾ ಕಾಶಪ್ಪನವರ, ದ್ಯಾಮನಗೌಡ ಪಾಟೀಲ, ಸಿದ್ದನಗೌಡ ಬಿರಾದಾರ, ಅವರು ಮಾತನಾಡಿ ಶ್ರಾವಣ ಮಾಸ ಮುಖ್ಯವಾಗಿ ಆದರ್ಶ ತಿಂಗಳು ಆದಂತಹದ್ದಾಗಿದೆ ಇಂತಹ ತಿಂಗಳಲ್ಲಿ ಮೌನತೆಯಲ್ಲಿ ಶಿವನನ್ನು ಜ್ಞಾಪಿಸುತ್ತಾ ಇಂದಿಗೆ ೧೧ ವಸಂತಗಳನ್ನು ಮಂಜುಳಾತಾಯಿಯವರು ಮುಗಿಸಿದ್ದಾರೆ ಅವರು ಶಿವನ ದ್ಯಾನದಲ್ಲಿ ಎಲ್ಲವನ್ನು ಕಳೆದುಕೊಂಡಿದ್ದಾರೆ ಈ ವೇದಿಕೆಯಲ್ಲಿದ್ದವರು ದೇವರಂತೆ ಇದ್ದಾರೆ ಅಂತಹ ದೇವರನ್ನು ನಾವು ನೋಡಬೇಕೆಂದು ಮಂಜುಳಾತಾಯಿಯವರು ಅರೀತುಕೊಂಡು ೧೧ ಅನುಷ್ಠಾನಗಳನ್ನು ಕೈಕೊಂಡಿದ್ದಾರೆ ಇನ್ನೂ ಮುಂದೆ ಅವರ ಅನುಷ್ಠಾನಗಳು ೧೧೧ ಆಗಿ ಮಾರ್ಪಡಲಿ ಈ ಭಾಗದ ಜನತೆಯ ಹಿತಕ್ಕಾಗಿ ಅವರು ಕೈಕೊಂಡ ಅನುಷ್ಠಾನ ಯಶಸ್ವಿಯಾಗಿ ಪರಿಣಮಿಸುತ್ತಾ ಸಾಗಲಿ ಕಾರಣ ಇನ್ನೂಮುಂದೆ ಅವರ ಅನುಷ್ಠಾನಕ್ಕಾಗಿಯೇ ಜಾಗೆಯನ್ನು ಎಲ್ಲರೂ ಒದಗಿಸಿಕೊಟ್ಟು ಅದಕ್ಕೆ ಕಟ್ಟಡವನ್ನು ಪ್ರಾರಂಬಿಸಿದರೆ ನಮ್ಮ ಕೈಲಾದ ಮಟ್ಟಿಗೆ ಸಹಾಯವನ್ನು ಸಲ್ಲಿಸುತ್ತೇವೆಂದರು.
ತಿAಗಳ ರ‍್ಯಂತ ಅನುಷ್ಠಾನ ಕೈಕೊಂಡು ಯಶಸ್ವಿಗಳಿಸಿದ ೧೧ನೇ ಅನುಷ್ಠಾನವನ್ನು ಪೂರ್ಣಗೊಳಿಸಿದ ಶಿವಶರಣೆ ಮಂಜುಳಾತಾಯಿಯವರು ಮಾತನಾಡಿ ಬಧುಕಿನ ಆನಂದಕ್ಕಾಗಿ ಆದ್ಯಾತ್ಮೀಕ ಚಿಂತನೆ ಅಗತ್ಯವಾಗಿದೆ ಇಡೀ ಜೀವನ ಅನ್ನುವದನ್ನು ಸಂಪೂರ್ಣ ಸಮಯ ಬಧುಕಿಗಾಗಿ ಕಳೆಯುತ್ತೇವೆ ಬಧುಕು ಪರಿಪೂರ್ಣಕ್ಕಾಗಿ ನಾವು ಸ್ವಲ್ಪಾದರೂ ಆದ್ಯಾತ್ಮೀಕ ಚಿಂತನೆಯ ಕಡೆಗೆ ಸಾಗಬೇಕಾಗಿದೆ ತಾಳಿಕೋಟೆಯ ಶ್ರೀ ಖಾಸ್ಗತ ಮಠದ ವಿರಕ್ತಶ್ರೀಗಳು ಹೇಳಿದಂತೆ ನಾನು ಬಳಗಾನೂರಿನಲ್ಲಿಯೇ ಅನುಷ್ಠಾನ ಮುಂದುವರೆಸುತ್ತಾ ಸಾಗಿದೆ ಕಾರಣ ಇದೇ ಊರಲ್ಲಿ ಉಳಿಯಲು ಕಾರಣವಾಗಿದೆ ಈ ಗ್ರಾಮದವರ ಎಲ್ಲರ ತುತ್ತು ನನ್ನಲ್ಲಿ ಅಡಗಿದೆ ನಾನು ಇಂದು ಬಳಗಾನೂರ ಗ್ರಾಮದವರ ಮಗಳಾಗಿದ್ದೇನೆ ಇದೊಂದು ಭಗವಂತನ ರೂಪದಲ್ಲಿ ಸಲ್ಲುತ್ತದೆ ಎಂದರು. ಗುರುವಿನ ದರ್ಶನಕ್ಕಾಗಿ ಇಂದು ನನಗೆ ಎಲ್ಲರೂ ಅನುವು ಮಾಡಿಕೊಟ್ಟಿರುವದು ಸಂತಸ ತಂದಿದೆ ಎಂದ ಅವರು ಭಗವಂತನ ದ್ಯಾನವಿದ್ದರೆ ಸಂಸ್ಕಾರ, ಸಂಸ್ಕೃತಿ ಉಳಿಯುತ್ತದೆ ಎಂದು ದೇಶಿ ಸಂಸ್ಕೃತಿ ಹಾಗೂ ವಿದೇಶಿ ಸಂಸ್ಕೃತಿ ಕುರಿತು ತಿಳಿ ಹೇಳಿ ಭಾರತದ ಪೂಣ್ಯಭೂಮಿಯಲ್ಲಿ ಜನ್ಮ ತಾಳಿದ ನಾವುಗಳು ಭಾಗ್ಯವಂತರು ಎಂದರು.
ಸಾನಿದ್ಯ ವಹಿಸಿದ ತಿಕೋಟಾ ಹಿರೇಮಠ ಶ್ರೀ ಚನ್ನಮಲ್ಲಿಕಾರ್ಜುನ ಮಹಾ ಸ್ವಾಮಿಗಳು, ಶಹಾಪೂರ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ.ಸೂಗೂರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹುಣಶ್ಯಾಳದ ಶ್ರೀ ಆನಂದ ದೇವರು, ಸಿದ್ದರೂಢ ಮಠದ ಜಮ್ಮಲದಿನ್ನಿ ಶ್ರೀಗಳು ಆಶಿರ್ವಚನ ವಿತ್ತರು.
ಇಂಗಳೇಶ್ವರ ವಿರಕ್ತಮಠದ ಶ್ರೀ ಚನ್ನಬಸವ ಮಹಾ ಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯ ಮೇಲೆ ಬಸವ ಸೈನ್ಯದ ಶಂಕರಗೌಡ ಬಿರಾದಾರ, ವಿರೇಶ ಕಳಸಗೊಂಡ, ಮಂಜುನಾಥಗೌಡ, ಬಸನಗೌಡ ದೋರನಳ್ಳಿ, ಗುತ್ತಿಗೆದಾರ ರವಿ ದೇಸಾಯಿ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ಕುಂಭಕಳಸದೊAದಿಗೆ ಹರಮೂರ್ತಿ ಚರಮೂರ್ತಿಗಳನ್ನು ಹಾಗೂ ಅನುಷ್ಠಾನ ಮೂರ್ತಿಯಾದ ಶಿವಶರಣೆ ಮಂಜುಳಾತಾಯಿಯವರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಯ್ದು ವೇದಿಕೆಗೆ ಅಹ್ವಾನಿಸಲಾಯಿತು.
ಶಿಕ್ಷಕಿ ಮಡಿವಾಳಮ್ಮ ನಾಡಗೌಡ ಸ್ವಾಗತಿಸಿದರು. ಶಿಕ್ಷಕ ವಾಲಿಕಾರ ನಿರೂಪಿಸಿ ವಂದಿಸಿದರು.