ವಿಶೇಷ ಚೇತನ ಮಕ್ಕಳಿಗೆ ಗೌರಿ ಗಣೇಶನ ಕುರಿತು ಅರಿವು ಕಾರ್ಯಕ್ರಮ
ಸಂಜೆವಾಣಿ ವಾರ್ತೆ,
ವಿಜಯಪುರ.ಸೆ.೫:ಇಲ್ಲಿನ ವಿಜಯಲಕ್ಷಿö್ಮÃ ಸರ್ವೋತ್ತಮ್ ದೇಶಪಾಂಡೆ ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆ ಮತ್ತು ಇನ್ನರ್ ವಿಲ್ ಸಂಸ್ಥೆಯ ಸದಸ್ಯರು ಹಾಗೂ ಅಗಸ್ತö್ಯ ಫೌಂಡೇಶನ್ ಸಂಸ್ಥೆಯ ಸಹಯೋಗದಲ್ಲಿ ವಿಶೇಷ ಚೇತನ (ದೇವರ ಮಕ್ಕಳಿಂದ) ನೈಸರ್ಗಿಕ ಪ್ರೇರೆಪಿಸುವ ಗಣೇಶ ಮೂರ್ತಿ ತಯಾರಿಸಲಾಯಿತು. ಮಣ್ಣಿನ ಗಣೇಶ ಮೂರ್ತಿ ತಯಾರಿಸುವುದರ ಜೊತೆ ಜೊತೆಗೆ ಸುಮಾರು ೯ ತರಹದ ಬೀಜಗಳು ಗಣೇಶನಲ್ಲಿ ಅಲಂಕಾರವಾಗಿ ಅಳವಡಿಸಲಾಯಿತು.
ಇನ್ನರ್ ವಿಲ್ ಸಂಸ್ಥೆಯ ಕಾರ್ಯದರ್ಶಿ ಗೀತಾ ಪಾಟೀಲ, ಸದಸ್ಯರಾದ ಸುಖಲತಾ ಬಿರಾದಾರ, ತೇಜಸ್ವಿನಿ ತಲÀಕೇರಿ, ಸುಭದ್ರಾ ನಾವದÀಗಿ ಮಕ್ಕಳಗೆ ಗಣೇಶ ಎಂದರೆ ಯಾರು ಅವನ ಆಕಾರ ವಿಕಾರಗಳನ್ನು ಮತ್ತು ಹಬ್ಬವನ್ನು ಹೇಗೆ ಆಚರಿಸಬೇಕೆಂದು ಮನದಟ್ಟು ಮಾಡಿದರು. ಅಗಸ್ತö್ಯ ಫೌಂಡೇಶನ್ ಶಿಕ್ಷಕರಾದ ಆಕಾಶ ಇಂಡಿ, ಸಂತೋಷ ಬಿರಾದಾರ, ಕೃಷ್ಣ ಮಾಯಾಚಾರಿ, ಸಂಗಮೇಶ ಅಂಗಡಿ ಅವರು ಗಣೇಶ ತಯಾರಿಸುವುದರಲ್ಲಿ ಮಣ್ಣು ಹದಗೊಳಿಸುವುದರ ಜೊತೆಗೆ ಮಕ್ಕಳಗೆ ಪ್ರೇರೆಪಿಸುತ್ತಾ ಗಣೇಶ ಆಕೃತಿಗೊಳಿಸುವಲ್ಲಿ ತುಂಬಾ ಸಹಕಾರ ನೀಡಿದರು.
ವಿ.ಎಸ್.ಡಿ.ಇ.ಎಸ್.ಡಬ್ಯೂ.ಎಸ್ ವಿಶೇಷ ಸಾಮರ್ಥ್ಯದ ಮಕ್ಕಳು ಗಣೇಶ ತಯಾರಿಸುವುದರಲ್ಲಿ ಬಹಳಷ್ಟು ಕ್ರಿಯಾತ್ಮಕ, ಕಾಲ್ಪನಿಕ, ಕಲಾತ್ಮಕ, ಮತ್ತು ನಿಸರ್ಗ ರಕ್ಷಣೆಯ ಉದ್ದೇಶದಿಂದ ದೇವರ ಮಕ್ಕಳು ದೇವರ ಸೃಷ್ಟಿಸುವುದರಲ್ಲಿ ಅತ್ಯಂತ ಹರ್ಷದಿಂದ ನಿಸರ್ಗಕ್ಕೆ ಗಣೇಶನ್ನು ತಯಾರಿಸಿದರು.
ವಿ.ಎಸ್.ಡಿ.ಇ.ಎಸ್.ಡಬ್ಯೂ.ಎಸ್ ಸಿಬ್ಬಂದಿಗಳಾದ ಪ್ರಶಾಂತ ದೇಶಪಾಂಡೆ ಸಂಸ್ಥೆಯ ಸಂಸ್ಥಾಪಕ ಕುಮಾರ ಅಶೋಕ ಹಿರೇಮಠ, ಕುಮಾರಿ ಪೂಜಾ ಜೇಡಗೆ, ಪ್ರತಿಭಾ ಅಲಗೂರ, ಕುಮಾರಿ ರೂಪಾ ಶೆಟ್ಟಿ, ಅಶ್ವಿನಿ ಬರಹಾನಪೂರ, ಕುಮಾರಿ ಕಸ್ತೂರಿ ಕಾಂಬಳೆ, ಕುಮಾರ ಮಂಜುನಾಥ ಕಾಂಬಳೆ, ಜ್ಯೋತಿ ತಾಡ, ಗುರು ಮತ್ತು ಮುದ್ದು ಮಕ್ಕಳು ಕಾರ್ಯಕ್ರದಲ್ಲಿ ಪಾಲ್ಗೊಂಡು ಹರ್ಷ ವ್ಯಕ್ತಪಡಿಸಿದರು.