ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಪ್ರತಿಭಾ ಕಾರಂಜಿ :ಬಿ ಎಸ್ ಅವಟಿ
ಕೊಲ್ಹಾರ:ಸೆ.೫:ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು,ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ ಪ್ರತಿಭಾ ಕಾರಂಜಿ ಆಯೋಜಿಸಲಾಗಿದ್ದು ಸೂಕ್ತ ಪ್ರತಿಭೆಗಳನ್ನು ಆಯ್ಕೆ ಮಾಡಿ ಪ್ರೋತ್ಸಾಹಿಸಬೇಕು ಎಂದು ಕೊಲ್ಹಾರ ಬಿ ಆರ್ ಪಿ ಬಸವರಾಜ ಅವಟಿ ಹೇಳಿದರು.
ತಾಲೂಕಿನ ತೆಲಗಿ ಗ್ರಾಮದ ಸದ್ಗುರು ಸದಾನಂದ ಪ್ರೌಢಶಾಲೆಯಲ್ಲಿ ಜರುಗಿದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳು ಪಠ್ಯ ಜೊತೆಗೆ ಸಹಪಠ್ಯಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು ಅಭಿನಯ,ಸಂಗೀತ,ನಾಟಕ, ಮಿಮಿಗ್ರಿ ಸೇರಿದಂತೆ ತಮ್ಮ ಎಲ್ಲ ಕಲೆ ಪ್ರತಿಭೆ ಪ್ರದರ್ಶಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಸದ್ಗುರು ಸದಾನಂದ ಪ್ರೌಢಶಾಲೆ ಅಧ್ಯಕ್ಷ ಸಿ ಎಂ ಹಂಡಗಿ ಮಾತನಾಡಿ ಮಕ್ಕಳು ಉತ್ಸಾಹದಿಂದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಬೇಕು, ಶಿಕ್ಷಕರು ಹಾಗೂ ಆಯೋಜಕರು ನಿಸ್ಪಕ್ಷಪಾತವಾಗಿ ಆಯ್ಕೆಮಾಡಬೇಕು ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಪ್ರಾಧ್ಯಾಪಕ ಎಲ್ ಎಚ್ ಪತ್ತಾರ ಮಾತನಾಡಿದರು ಅತಿಥಿಯಾಗಿ ವಾಯ್ ಕೆ ಪತ್ತಾರ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷರಾದ ವೇದಮೂರ್ತಿ ವಸ್ತ್ರದ,ರಾಘವೇಂದ್ರ ಕುಲಕರ್ಣಿ,ಎಸ್ ಡಿ ಎಂ ಸಿ ಅಧ್ಯಕ್ಷ ಹಣಮಂತ ಶಾಂತರೆಡ್ಡಿ,ಸಿಆರ್ ಪಿಗಳಾದ ಸಂಗಮೇಶ ಜಂಗಮಶೆಟ್ಟಿ,ಆನAದ ಪವಾರ,ವಾಣಿಶ್ರೀ ಕುಂದರಗಿ,ಮುಖ್ಯೋಪಾಧ್ಯಾಯ ಎಸ್ ಎಸ್ ಮುಂಡಾಸ, ಬಸವರಾಜ ಚಿಂಚೊಳ್ಳಿ,ಜಗದೀಶ ಸಾಲಳ್ಳಿ ಉಪಸ್ಥಿತರಿದ್ದರು.ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿಜೇತ ಎಲ್ಲ ಮಕ್ಕಳಿಗೆ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.ಎಸ್ ಎಸ್ ಎಸ್ ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಕೆ ಜಿ ಬಾಡಗಿ ಸ್ವಾಗತಿಸಿದರು.ಶಿಕ್ಷಕ ಎಸ್ ಎಂ ಜಾಲವಾದ ನಿರೂಪಿಸಿದರು.