ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಕೊಲ್ಹಾರ:ಸೆ.೫:ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ ಮಂಗಳವಾರ ಪಟ್ಟಣದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಪಟ್ಟಣದ ಬೂತ ಸಂಖ್ಯೆ ೭೫ ರಲ್ಲಿರುವ ಮಾರುತಿ ಕಂಬಾರ ಅವರ ಮನೆಯಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ತೆರಳಿ ಮನವರಿಕೆ ಮಾಡಿಕೊಡುವುದರ ಜೊತೆಗೆ ಸದಸ್ಯತ್ವ ನೊಂದಣಿ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದಿಲ್ಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಸಮ್ಮುಖದಲ್ಲಿ ಪಕ್ಷದ ಪ್ರಥಮ ಸದಸ್ಯತ್ವ ಪಡೆಯುವ ಮೂಲಕ ದೇಶಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ ಅಂತೆಯೇ ಪಟ್ಟಣದಲ್ಲೂ ಕೂಡ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ತಾವು ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಸಂದರ್ಭ ಬ.ಬಾಗೇವಾಡಿ ಮಂಡಲದಲ್ಲಿ ೬೫ ಸಾವಿರ ಹಾಗೂ ವಿಜಯಪುರ ಜಿಲ್ಲೆಯಲ್ಲಿ ೪ ಲಕ್ಷ ಬಿಜೆಪಿ ಸದಸ್ಯತ್ವ ನೊಂದಣಿ ಮಾಡುವ ಮೂಲಕ ದಾಖಲೆಯ ಸದಸ್ಯತ್ವ ನೊಂದಣಿ ಮಾಡಲಾಗಿತ್ತು ಎಂದು ಸ್ಮರಿಸಿಕೊಂಡರು. ಪ್ರಸ್ತುತ ಕೇಂದ್ರ ಬಿಜೆಪಿಯ ಸಾಧನೆಗಳು, ಅಭಿವೃದ್ಧಿ ಕಾರ್ಯಗಳು ಜನರಿಗೆ ತಿಳಿಹೇಳುವುದರ ಜೊತೆಗೆ ಸದಸ್ಯತ್ವ ನೊಂದಣಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಬಿಜೆಪಿ ಸದಸ್ಯತ್ವ ಪಡೆದ ಮಾರುತಿ ಕಂಬಾರ ಮಾತನಾಡಿ ಬಿಜೆಪಿ ಪಕ್ಷ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವ ದೇಶದ ಪ್ರಗತಿಗೆ ಅನಿವಾರ್ಯ ಎಂದು ಹೇಳಿದರು. ಬ.ಬಾಗೇವಾಡಿ ಮತಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿಯವರು ಅವಿರತವಾಗಿ ಶ್ರಮಿಸಿದ್ದಾರೆ, ಮಹತ್ತರ ಅಭಿವೃದ್ಧಿ ಕಾಮಗಾರಿಗಳನ್ನು ಬ.ಬಾಗೇವಾಡಿ ಮತಕ್ಷೇತ್ರಕ್ಕೆ ತರುವ ಮೂಲಕ ಶ್ರಮಿಸಿದ್ದಾರೆ ಅವರ ನಾಯಕತ್ವದಡಿ ಸದಾಕಾಲಕ್ಕೂ ಅವರ ಜೊತೆಯಾಗಿ ನಾವುಗಳು ನಿಲ್ಲುತ್ತೆವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಪ ಪಂ ಅಧ್ಯಕ್ಷರಾದ ಕಲ್ಲಪ್ಪ ಸೊನ್ನದ, ವಿರೂಪಾಕ್ಷಿ ಕೋಲಕಾರ, ಮುರಿಗೆಪ್ಪ ಬೆಳ್ಳುಬ್ಬಿ, ಸಂಗಪ್ಪ ಹುಚ್ಚಪ್ಪಗೋಳ, ಪ.ಪಂ ಸದಸ್ಯರಾದ ಬಾಬು ಬಜಂತ್ರಿ, ಅಪ್ಪಾಸಿ ಮಟ್ಚಿಹಾಳ, ಮಂಜುನಾಥ ತುಂಬರಮಟ್ಟಿ, ಸುಭಾಷ ಬಜಂತ್ರಿ, ಡೋಂಗರಿ ಕಟಬರ ಹಾಗೂ ಇನ್ನಿತರರು ಇದ್ದರು.