ಬಸವ ತತ್ವ ಮೈಗೂಡಿಸಿಕೊಳ್ಳಿ : ನಾಡೋಜ ಡಾ. ಪಟ್ಟದ್ದೇವರು
ಸಂಜೆವಾಣಿ ವಾರ್ತೆ
ಔರಾದ್ :ಸೆ.೫: ಮಕ್ಕಳಿಗೆ ತಾಯತ ಕಟ್ಟುವ ಬದಲು ಲಿಂಗ ಕಟ್ಟುವಂತಾಗಬೇಕು. ಅಂಗದ ಮೇಲೆ ಲಿಂಗ ಇಲ್ಲದಿದ್ದರೆ ಅಂಗಾAಗ ಸಾಮರಸ್ಯ ಬರುವುದಿಲ್ಲ ಬಸವ ತತ್ವ ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಬಸವಕಲ್ಯಾಣದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಅನುಭವ ಮಂಟಪದಲ್ಲಿ ಮಂಗಳವಾರ ಶ್ರಾವಣಮಾಸದ ನಿಮಿತ್ತ ಹಮ್ಮಿಕೊಂಡ ಬಸವತತ್ವ ದರ್ಶನ ಪ್ರವಚನದ ಸಮಾರೋಪ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆರ್ಶೀವಚನ ನೀಡಿದ ಅವರು ಬಸವಣ್ಣನವರು ಸೇರಿದಂತೆ ೧೨ನೇ ಶತಮಾನದ ಬಸವಾದಿ ಶರಣರ ಸಂದೇಶ ತಿಳಿಸಲು ಜಿಲ್ಲೆಯ ಅನೇಕ ಕಡೆಗಳಲ್ಲಿ ಪ್ರವಚನ ಹಮ್ಮಿಕೊಳ್ಳಲಾಗಿದೆ. ಇಡೀ ಜಗತ್ತಿನಲ್ಲಿ ಬಸವತತ್ವ ಪ್ರಚಾರಕ್ಕೆ ಬರಲಿದೆ. ಅದರ ಮಹತ್ವ ಮನಗಾಣಬೇಕು. ಉತ್ತಮ ಆಚರಣೆಗಳನ್ನು ಬಿಟ್ಟು ಮೂಡನಂಬಿಕೆಗಳ ಹಿಂದೆ ಬೆನ್ನು ಬೀಳುತ್ತಿರುವುದು ಸರಿಯಲ್ಲ’ ಎಂದರು.
ಬಸವಧರ್ಮವನ್ನು ಎಲ್ಲಡೆ ಪ್ರಚಾರ ಮಾಡಬೇಕಿದೆ, ಅದನ್ನು ಸಂಘಟನೆಯಿAದ ಉಳಿಸಿಕೊಳ್ಳಬೇಕು. ೧೨ನೇ ಶತಮಾನದಲ್ಲಿ ಸ್ಥಾಪಿಸಿದ ಬಸವಧರ್ಮ ನಮ್ಮದಾಗಬೇಕು. ಬಸವತತ್ವ ಪ್ರಚಾರ ಎಲ್ಲೆಡೆಯೂ ಸಾಗಬೇಕು. ಬಸವಾದಿ ಶಿವಶರಣರ ವಚನಗಳನ್ನು ಹೇಳುವ ಕೆಲವರು ಅಂಕಿತವನ್ನೇ ತೆಗೆದು ಹಾಕುತ್ತಾರೆ. ಅಂತಹವರ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಈ ವರ್ಷ ವಚನ ಕಂಠಪಾಠ ಸ್ಪರ್ಧೆ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಆಯೋಜಕ ಚಂದ್ರಕಾAತ ಘೂಳೆ ಕಾರ್ಯ ಶ್ಲಾಘನೀಯ ವ್ಯಕ್ತಪಡಿಸಿದರು. ಸುವರ್ಣಾ ಚಿಮಕೋಡೆ ಅವರು ಈಗಾಗಲೇ ಬೀದರ, ಸಂತಪೂರನಲ್ಲಿ ಪ್ರವಚನ ಹೇಳಿದ್ದು, ಈ ವರ್ಷ ಔರಾದನಲ್ಲಿಯೂ ಉತ್ತಮ ಪ್ರವಚನ ನೀಡಿದ್ದಾರೆ ಎಂದರು.
ಬೀದರನ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಸಂಚಾಲಕರಾದ ಸುವರ್ಣಾ ಚಿಮಕೋಡೆ ಮಾತನಾಡಿ, ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನಲ್ಲಿ ಪ್ರವಚನ ಹೇಳಿದ್ದೇನೆ. ದಯವಿಟ್ಟು ಕಳೆದ ಒಂದು ತಿಂಗಳಿAದ ಹೇಳಿರುವ ಶರಣರ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಕಾಶ ಘೂಳೆ, ಬಂಡೆಪ್ಪ ಕಂಟೆ, ಶಿವಕುಮಾರ ಘಾಟೆ, ರವಿಂದ್ರ ಮೀಸೆ, ಧನರಾಜ ರಾಗಾ, ಸೂರ್ಯಕಾಂತ ಘೂಳೆ, ಚಂದ್ರಕಾAತ ಘೂಳೆ, ಕಲ್ಯಾಣರಾವ ಶೆಂಬೆಳ್ಳಿ, ಅಮೃತರಾವ ಬಿರಾದಾರ್, ಶರಣಪ್ಪ ನಾಗಲಗಿದ್ದೆ ಸೇರಿದಂತೆ ಅನೇಕರಿದ್ದರು. ಮಹಾದೇವ ಘೂಳೆ ಸ್ವಾಗತಿಸಿ, ನಿರೂಪಿಸಿದರು. ಈ ವೇಳೆ ಮಹಿಳೆಯರು ಬಸವಣ್ಣನ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು.
ಮಕ್ಕಳಿಗೆ ಬಹುಮಾನ ವಿತರಣೆ
ವಚನಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ಎಲ್ ಕೆಜಿ, ಯುಕೆಜಿ ವಿಭಾಗದ ಸ್ಪರ್ಧೆಯಲ್ಲಿ ಸನ್ಶ್ರಯ್ ಮೊಕ್ತೆದಾರ್ (ಪ್ರಥಮ), ಅಮಿತ್ ದಾಮಾ (ದ್ವಿತೀಯ) ೧-೫ನೇ ತರಗತಿವರೆಗೆ ಪ್ರೀತಿ ಬಸವರಾಜ (ಪ್ರಥಮ), ವೈಷ್ಣವಿ ಸಂಜೀವ, ಭದ್ರಿನಾಥ ಸಿದ್ದಪ್ಪ (ದ್ವಿತೀಯ), ಧೃತಿ ಭಾಸ್ಕರಿ, ತರಂಗಿಣಿ ಸಂತೋಷ (ತೃತೀಯ), ೬-೧೦ ನೇ ತರಗತಿವರೆಗೆ ಸಾಧನಾ ಬಾಬುರಾವ (ಪ್ರಥಮ), ಸಾಕ್ಷಿ ಶಿವಾನಂದ, ಸುಪ್ರಿಯಾ ಹಣಮಂತ (ದ್ವಿತೀಯ), ರುಜುತಾ ಸಂತೋಷ, ವಿಜಯಲಕ್ಷ್ಮಿ ಜಗನ್ನಾಥ ಮೂಲಗೆ (ತೃತೀಯ) ಇವರನ್ನು ಆಯೋಜಕ ಚಂದ್ರಕಾAತ ಘೂಳೆ ಸತ್ಕರಿಸಿ ಬಹುಮಾನ ವಿತರಣೆ ಮಾಡಿದರು.