ಪಂಜದ ಬೊಳ್ಳಾಜೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ – ಅರಣ್ಯಾಧಿಕಾರಿಗಳ ಭೇಟಿ
ಸುಳ್ಯ:ಪಂಜದ ಕಂರ್ಬು ನೆಕ್ಕಿಲ ಎಂಬಲ್ಲಿ ಮತ್ತೆ ಚಿರತೆ ಪ್ರತ್ಯಕ್ಷಗೊಂಡ ಘಟನೆ ನಡೆದಿದೆ.
ಕೆಲವು ದಿನಗಳ ಹಿಂದೆಯಷ್ಟೇ ಪಂಜದ ನೆಕ್ಕಿಲದಲ್ಲಿ ಮೂರು ಸಾಕು ನಾಯಿಗಳು ನಾಪತ್ತೆಯಾಗಿತ್ತು. ಇದೀಗ ಸೆ.೧ ರಂದು ಇದೇ ಪರಿಸರದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಆ.೩೦ ರಂದು ರಾತ್ರಿ ಸುಮಾರು ೮.೩೦ ಹೊತ್ತಿಗೆ ಬೊಳ್ಳಾಜೆಯ ನವನೀತ್ ಎಂಬವರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಪಂಜ-ಕಡಬ ರಸ್ತೆಯ ಕಂರ್ಬು ನೆಕ್ಕಿಲ ಬಸ್ ತಂಗುದಾಣ ಬಳಿ ಚಿರತೆ ಪ್ರತ್ಯಕ್ಷವಾಗಿದೆ. ಸೆ.೧ ರಂದು ಸಂಜೆ ಬೊಳ್ಳಾಜೆ ತೀರ್ಥೇಶ್ ಎಂಬವರ ಮನೆ ಸಮೀಪದಲ್ಲೇ ಚಿರತೆ ಓಡಿ ಹೋಗಿರುದನ್ನು ಸ್ಥಳೀಯರು ನೋಡಿದ್ದಾರೆ. ವಿಷಯ ತಿಳಿದು ಅರಣ್ಯ ಇಲಾಖೆಯ ಅದಿಕಾರಿಗಳು ಸೋಮವಾರ ಬೊಳ್ಳಾಜೆಗೆ ಭೇಟಿ ನೀಡಿ ಹೆಜ್ಜೆ ಗುರುತು ಪರಿಶೀಲನೆ ನಡೆಸಿದ್ದಾರೆ.