ಗಾಂಧಿ ಜಯಂತಿ: ನಾಲ್ಕು ತಂಡಗಳಲ್ಲಿ ಭಾರತ ಯಾತ್ರೆ
ವಿಜಯಪುರ,ಅ.3:ಮಹಾತ್ಮಾಗಾಂಧಿ ಹಾಗೂ ಲಾಲಬಹಾದ್ದೂರ ಶಾಸ್ತ್ರೀ ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವದರೊಂದಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರು ಮಾತನಾಡಿ, ಕಾಂಗ್ರೆಸ್ ಅಧಿವೇಶನ ಕರ್ನಾಟಕದ ಬೆಳಗಾವಿಯಲ್ಲಿ 1924 ರಲ್ಲಿ ನಡೆದು ಇಂದಿಗೆ 100 ವರ್ಷಗಳಾಯಿತು. ಗಾಂಧೀಜಿ ಈ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಅದರ ನಿಮಿತ್ಯ ಅದರ ನೆನಪಿಗಾಗಿ ಈ ವರ್ಷ ಪೂರ್ತಿ ಸಂಭ್ರಮಾಚರಣೆಯನ್ನು ನಡೆಸಲು ಕೆ.ಪಿ.ಸಿ.ಸಿ ಆದೇಶದಂತೆ ಇಂದು ವಿಜಯಪುರ ನಗರದ ನಾಲ್ಕು ದಿಕ್ಕುಗಳಿಂದ ಗಾಂಧಿ ಭಾರತ ಯಾತ್ರೆ ನಡೆಸಲಾಯಿತು. ಅನಂತರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭಾರತ ಯಾತ್ರೆ ಆಗಮಿಸಿ ಕೊನೆಗೊಂಡಿತು.
ಈ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಮಹಾತ್ಮಾಗಾಂಧಿಯವರ ಅಭಿಮಾನಿಗಳು ಪಾಲ್ಗೊಂಡು ಗಾಂಧಿಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಕಛೇರಿಯಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮದ ನೇರ ಪ್ರಸಾರವನ್ನು ಎಲ್.ಸಿ.ಡಿ. ಪರದೆಯ ಮುಖಾಂತರ ಕಾರ್ಯಕರ್ತರು ವೀಕ್ಷಿಸಲು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಸಭೆಯಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ಅಧ್ಯಕ್ಷೆ ಕಾಂತಾ ನಾಯಕ, ಕಾಂಗ್ರೆಸ್ ಮುಖಂಡ ಹಮೀದ ಮುಶ್ರೀಫ, ಡಿ. ಎಲ್. ಚವ್ಹಾಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷÀ ವಿದ್ಯಾರಾಣಿ ತುಂಗಳ, ಅಬ್ದುಲರಜಾಕ ಹೊರ್ತಿ, ವಿಜಯಪುರ ಮಹಾನಗರಪಾಲಿಕೆ ಮಹಾಪೌರರಾದ ಮಾಹೆಜಬೀನ ಅಬ್ದುಲರಜಾಕ ಹೊರ್ತಿ, ಉಪಮಹಾಪೌರರಾದ ದಿನೇಶ ಹಳ್ಳಿ, ಬಿ.ಡಿ.ಎ. ಅಧ್ಯಕ ಕನ್ನಾನ ಮುಶ್ರೀಫ, ಉಪಾಧ್ಯಕ್ಷರುಗಳಾದ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಸುಭಾಷ ಕಾಲೇಬಾಗ, ಅಫ್ಜಲ ಜಾನವೇಕರ, ಗಂಗಾಧರ ಸಂಭಣ್ಣಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಜಾಕೀರ ಮುಲ್ಲಾ, ವಸಂತ ಹೊನಮೋಡೆ, ಎಂ. ಎಂ. ಮುಲ್ಲಾ (ದ್ಯಾಬೇರಿ) ದೇಸು ಚವ್ಹಾಣ, ಅಯಾಜ ರೋಜೆವಾಲೆ, ವಿಜಯಪುರ ನಗರ ಬ್ಲಾಕ್ ಅಧ್ಯಕ್ಷರಾದ ಜಮೀರಅಹ್ಮದ ಬಕ್ಷಿ, ನಾಗಠಾಣ ಬ್ಲಾಕ್ ಅಧ್ಯಕ್ಷರಾದ ಶಾಹಜಾನ ಮುಲ್ಲಾ, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷರಾದ ಶಬ್ಬೀರ ಜಾಗಿರದಾರ, ಜಲನಗರ ಬ್ಲಾಕ್ ಮುಖಂಡರಾದ ಹೊನಮಲ್ಲ ಸಾರವಾಡ, ಅಂಗಘಟಕದ ಅಧ್ಯಕ್ಷರುಗಳಾದ ರಮೇಶ ಗುಬ್ಬೇವಾಡ, ಲಾಲಸಾಬ ಕೋರಬು, ವಿಜಯಕುಮಾರ ಕಾಳೆ, ರಾಜೇಶ್ವರಿ ಚೊಳಕೆ, ಆನಂದ ಜಾಧವ, ಆರತಿ ಶಾಹಪೂರ, ಅಶ್ಪಾಕ ಮನಗೂಳಿ, ಅಪ್ಪು ಪೂಜಾರಿ, ಕೃಷ್ಣಾ ಕಾಮಟೆ, ಕಾಶಿಬಾಯಿ ಹಡಪದ, ರುಕ್ಮಿಣಿ ಲಮಾಣಿ, ಮಂಜುಳಾ ಗಾಯಕವಾಡ, ಸ್ನೇಹಲತಾ ಶೆಟ್ಟಿ, ಹನೀಫ ಮಕಾಂದಾರ, ಶಂಕರಸಿಂಗ ಹಜೇರಿ, ಹರೀಸ ಕೌಲಗಿ, ಬಾಪುಗೌಡ ಪಾಟೀಲ, ಸಲೀಮ ಕಲಾದಗಿ, ಅಮೀತ ಚವ್ಹಾಣ, ದಯಾನಂದ ಲಚ್ಯಾಣ, ರಾಘವೇಂದ್ರ ವಡವಡಗಿ, ಗಿರೀಶ ಇಟ್ಟಂಗಿ, ಎಂ. ಖ. ಮೆಂಡೆಗಾರ, ಸಲೀಮ ಪೀರಜಾದೆ, ಅಬ್ದುಲಪೀರಾ ಜಮಖಂಡಿ, ಇಲಿಯಾಸ ಸಿದೀಕ, ಐ. ಎಂ. ಇಂಡೀಕರ, ಗೌಸ ಮುಜಾವರ, ಸಮದ ಸುತಾರ, ಸಂತೋಷ ಬಾಲಗಾವಿ, ಲಕ್ಷ್ಮಣ ಇಲಕಲ್, ತಾಜುದ್ದೀನ ಖಲೀಫಾ ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು.