ಗಾಂಧೀಜಿ ತತ್ವ ಸಿದ್ಧಾಂತಗಳಿಗೆ ಬದ್ದರಾಗೋಣ: ಡಾ. ಆನಂದ ಕುಲಕರ್ಣಿ
ವಿಜಯಪುರ,ಅ.3: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ತತ್ವ ಸಿದ್ಧಾಂತಗಳಿಗೆ ಬದ್ದರಾಗಿ ಬದುಕೋಣ. ಅವರ ಸತ್ಯ, ಅಹಿಂಸೆ, ಸಮಾನತೆ, ಸಾಮರಸ್ಯ, ಸ್ವಾವಲಂಬನೆ ಹಾಗೂ ಗ್ರಾಮ ಸ್ವರಾಜ್ಯದ ಪರಿಕಲ್ಪನೆಗೆ ಮಹತ್ವ ಸಾರಿದ ಗಾಂಧಿಯವರ ಚಿಂತನೆಗಳು ಸರ್ವಕಾಲಿಕ ಎಂದು ವಿಜಯಪುರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಅನಂದ ಕುಲಕರ್ಣಿ ಅಭಿಪ್ರಾಯ ವ್ಯಕ್ತಪಡಿಸಿದರು
ಬುಧವಾರ ಜಿಲ್ಲಾ, ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿ ಭಾರತದ ಸ್ವಾತಂತ್ರ್ಯಕ್ಕಾಗಿ ಜೀವನವನ್ನೆ ಮುಡಿಪಾಗಿಟ್ಟರು. ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯವನ್ನು ದೊರಕಿಸಿರುವ ಕೀರ್ತಿ ಗಾಂಧಿಯವರಿಗೆ ಸಲ್ಲುತ್ತದೆ ಎಂದರು.
ತಿಕೋಟಾ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಮಾತನಾಡಿ, ಉದ್ಯೋಗಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ ಜಾರಿಗೆ ತಂದರು. ಸ್ವಾವಲಂಬಿ ಶಿಕ್ಷಣದ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಕರೆ ನೀಡಿದರು. ಖಾದಿ ನೂಲುವ ಮೂಲಕ ಸ್ವದೇಶಿ ಚಳವಳಿಯನ್ನು ಜನಪ್ರಿಯಗೊಳಿಸಿದರು ಎಂದರು.
ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ಅಹಿಂಸೆಯ ಅಸ್ತ್ರ ಹಿಡಿದು ಇಡೀ ರಾಷ್ಟ್ರವನ್ನೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸಿದವರು ಗಾಂಧೀಜಿ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿದರು.
ವೇದಿಕೆಯ ಮೇಲೆ ಕಸಾಪ ಗೌರವ ಕಾರ್ಯದರ್ಶಿ ಸುರೇಶ ಜತ್ತಿ. ಸಾಹಿತಿ ರಮೇಶ ಬಸರಗಿ . ಬಸವನ ಬಾಗೇವಾಡಿ ತಾಲೂಕ ಪಂಚಾಯತಿ ಮಾಜಿ ಅಧ್ಯಕ್ಷ ಬಂದೇನವಾಜ ದೋಲಚಿ. ನಾಗರಾಜ ಪಾಟೀಲ, ರಮೇಶ ಯಾಳವಾರ, ಎಸ್.ಎಮ್. ಜಾಲವಾದಿ ಉಪಸ್ಥಿತರಿದ್ದರು
ಅರ್ಜುನ ಶಿರೂರ. ಆಶಾ ಬಿರಾದಾರ, ಬಸವರಾಜ ಬಿರಾದಾರ, ರಾಹುಲ್ ಚವ್ವಾಣ. ಶ್ರೀಕಾಂತ ನಾಡಗೌಡ. ಹನಮಂತ ಹಣಮಾಣಿ, ಕಮಲಾ ಮುರಾಳ, ವಿಜಯಲಕ್ಷ್ಮಿ ಹಳಕಟ್ಟಿ, ಚೈತನ್ಯ ಮುದ್ದೇಬಿಹಾಳ, ಸರ್ವಾನಂದ ಕೂಬರಡ್ಡಿ. ಜಿ.ಎಸ್ ಬಳ್ಳೂರ. ಬಿ.ಎಮ್. ಅಜೂರ. ಶಾಂತಾ ವಿಭೂತಿ. ಓ.ಆರ್. ಹಾವಿನಾಳ ಮುಂತಾದವರು ಇದ್ದರು.