ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರಿಯವರ ಜನ್ಮದಿನಾಚರಣೆ
ಬೀದರ :ಅ.3: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜನ್ಮ ದಿನಾಚರಣೆ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರಿಯವರ ಜನ್ಮದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಮಾತನಾಡುತ್ತಾ ಮಹಾತ್ಮ ಗಾಂಧೀಜಿಯವರ ಜೀವನವೇ ಒಂದು ಆದರ್ಶ ಅವರು ಭಾರತ ಸ್ವಾತಂತ್ರ್ಯಕ್ಕಾಗಿ ಬ್ರೀಟಿಷರ ವಿರುದ್ಧ ಹತ್ತುಹಲವಾರು ಚಳುವಳಿಗಳನನ್ನು ನಡೆಸಿದರು ಅದರಲ್ಲಿ ವಿಶೇಷವಾಗಿ ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ, ಚಲೇಜಾವ್ ಚಳುವಳಿ, ಕಾನೂನು ಭಂಗ ಚಳುವಳಿ ಹಾಗೂ ಇವರ ಜೊತೆ ಹಲವಾರು ದೇಶ ಭಕ್ತರು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರ ಕರೆಯಾದ ಹಾಗೂ ಅವರ ಅಸ್ತ್ರಗಳಾದ ಸತ್ಯ ಮತ್ತು ಅಹಿಂಸೆ ಇವೆರಡು ತತ್ವಗಳ ಮೇಲೆ ಬ್ರೀಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಗಾಂಧೀಜಿಯವರು ಹೇಳಿದಂತೆ ನನ್ನ ಜೀವನವೇ ಒಂದು ಸಂದೇಶ ಮೈಯಲ್ಲಿ ಹರಕು ಬಟ್ಟೆ ಇದ್ದರು ಕೈಯಲ್ಲಿ ಒಂದು ಪುಸ್ತಕವಿರಲಿ ಎಂಬ ಹೇಳಿಕೆಯಂತೆ ಇಂದಿನ ವಿದ್ಯಾರ್ಥಿಗಳು ತಮ್ಮ ಜ್ಞಾನರ್ಜನೆಗೋಸ್ಕರ ಗ್ರಂಥಾಲಯದ ಉಪಯೋಗವನ್ನು ತೆಗೆದುಕೊಳ್ಳಬೇಕು ಉನ್ನತ ಅಂಕ ಪಡೆದು ಭಾರತದಲ್ಲಿರುವ ಐಎಎಸ್, ಐಪಿಎಸ್, ಐಆರ್‍ಎಸ್ ಇಂತಹ ಹುದ್ದೆಗಳನ್ನು ಪಡೆದುಕೊಂಡು ತಮ್ಮ ಗ್ರಾಮದ ಹಾಗೂ ಪಾಲಕರ ಮತ್ತು ಮಹಾವಿದ್ಯಾಲಯ ಹಾಗೂ ವಿದ್ಯಾರ್ಜನೆ ನೀಡಿದ ಗುರುಗಳ ಹೆಸರನ್ನು ಅಜರಾಮರಗೋಳಿಸಬೇಕು ಎಂದು ನುಡಿದರು ಹಾಗೂ ‘ಜೈ ಜವಾನ್, ಜೈ ಕಿಸಾನ್’ ಘೋಷಣೆ ನೀಡಿದ ಭಾರತದ ಎರಡನೇಯ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ ಶಾಸ್ತ್ರಿಯವರ ಸರಳ ಜೀವನದ ಬಗ್ಗೆ ಮಕ್ಕಳಿಗೆ ತಿಳಿಹೇಳಿದರು.
ಈ ಕಾರ್ಯಕ್ರಮದ ಅಂಗವಾಗಿ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆಯವರು ಸ್ವಚ್ಚತಾ ಆಂದೋಲನದ ಪ್ರತಿಜ್ಞಾ ವಿಧಿಯನ್ನು ಎನ್.ಸಿ.ಸಿ. ಹಾಗೂ ಎನ್.ಎಸ್.ಎಸ್. ವಿದ್ಯಾರ್ಥಿಗಳಿಗೆ ಜೊತೆಗೆ ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಭೋಧಿಸಿದರು.
ಕಾರ್ಯಕ್ರಮದ ವೇದಿಕಿಯ ಮೇಲೆ ಎನ್.ಎಸ್.ಎಸ್. ‘ಅ’ ಘಟಕದ ಅಧಿಕಾರಿಗಳಾದ ಡಾ. ದೀಪಾ ರಾಗರವರು ಹಾಗೂ ಎನ್.ಸಿ.ಸಿ. ಅಧೀಕಾರಿಗಳಾದ ಶ್ರೀ ಮಾರುತಿ ಭೀಮಣ್ಣಾ ಹಾಗೂ ಜಿಲ್ಲಾ ನೆಹರು ಯುವ ಕೇಂದ್ರ ಹಾಗೂ ಜಿಲ್ಲಾ ಯುವ ಕೇಂದ್ರದ ಅಧಿಕಾರಿಗಳಾದ ಶ್ರೀ ಮಯೂರಕುಮಾರ ಗೋರಮೆಯವರು ವಿದ್ಯಾರ್ಥಿಗಳಿಗೆ ಮೇರಾ ಭಾರತ ಮುದ್ರೆಯಿರುವ ಕೈಪಿಡಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕು. ಕುಂಕುಮ್ ಬಿ.ಎಸ್ಸಿ.6ನೇ ಸೆಮಿಸ್ಟರ್ ಪ್ರಾರ್ಥನೆ ಗೀತೆ ಹಾಡಿದರೆ ಎನ್.ಎಸ್.ಎಸ್. ‘ಬ’ ಘಟಕ ಅದಿಕಾರಿಗಳಾದ ಶ್ರೀ ಬಸವರಾಜ ಬಿರಾದಾರ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಯವರು ಹಾಜರಿದ್ದರು.