ವಲಯ ಮಟ್ಟದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಗಾರ
ಸಂಜೆವಾಣಿ ವಾರ್ತೆ
  ದಾವಣಗೆರೆ ಸೆ.5; ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಪೋಷಣ್ ಅಭಿಯಾನ ಯೋಜನೆಯಡಿ ಸೆಪ್ಟೆಂಬರ್ 3 ರಂದು ಕಡ್ಲೆಬಾಳು ಗ್ರಾಮದ ಆಯುಷ್ ಇಲಾಖೆಯಲ್ಲಿ ಪೋಷಣ್ ಮಾಸಾಚರಣೆ ಅಂಗವಾಗಿ ಕಾರ್ಯಗಾರ ಏರ್ಪಡಿಸಲಾಯಿತು.ಕಾರ್ಯಗಾರದ ಉದ್ಘಾಟನೆಯನ್ನು ಕಡ್ಲೆಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳಾ ಬಾಯಿ ನೆರವೇರಿಸಿದರು.ಕಾರ್ಯಗಾರದಲ್ಲಿ ಶಿಶು ಅಭಿವೃದ್ಧಿ ಸಹಾಯಕ ಯೋಜನಾಧಿಕಾರಿ ಪ್ರಿಯದರ್ಶಿನಿ, ಆಯುಷ್ ವೈದ್ಯಾಧಿಕಾರಿಗಳು ಕಿಶೋರಿ ,ಜಿಲ್ಲಾ ಮಿಷನ್ ಶಕ್ತಿ ಸಂಯೋಜಕರು ಜಗದೀಶ್,  ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪ್ರಭು ಎ.ಬಿ.,  ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು  ಹಾಗೂ   ಮುಂತಾದವರು ಭಾಗವಹಿಸಿದ್ದರು