ಸ್ವಾವಲಂಬಿ ಉದ್ಯೋಗಕ್ಕೆ ಆರ್ಥಿಕ ನೆರವು
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೫; ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವಸಹಾಯ ಸಂಘದ ಯೋಜನೆಯಡಿ ಮಹಿಳೆಯರಿಗೆ, ಬಡವರಿಗೆ, ರೈತರಿಗೆ ಮೂಲ ಸೌಕರ್ಯಕ್ಕೆ ಹೆಚ್ಚು ಉತ್ತೇಜನೆ ಕೊಡುವುದರ ಜೊತೆಗೆ ಸ್ವಾವಲಂಬಿ ಉದ್ಯೋಗಕ್ಕೆ ಆರ್ಥಿಕ ನೆರವು ನೀಡುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ನಿರ್ದೇಶಕ ಲಕ್ಷ್ಮಣ್ ತಿಳಿಸಿದರು.ನಗರದ ಎಸ್.ಓ.ಜಿ. ಕಾಲೋನಿಯ ಗ್ರಂಥಾಲಯದಲ್ಲಿ  ಆಯೋಜಿಸಿದ್ದ ಇತ್ತೀಚಿಗೆ ಸಿಲಿಂಡರ್ ಸ್ಫೋಟಗೊಡು ಮೃತಪಟ್ಟ ಪಾರ್ವತಮ್ಮ ಅವರ ಪುತ್ರ ಪ್ರವೀಣ್ ಅವರಿಗೆ ಪರಿಹಾರದ ಚೆಕ್ ವಿತರಿಸಿ ಅವರು ಮಾತನಾಡಿದರು. ಮಹಿಳೆಯರು ಮುಖ್ಯವಾಗಿ ಸಂಘವನ್ನು ಯಾವುದೇ ಅಡೆ-ತಡೆ ಬರದಂತೆ ಗಟ್ಟಿಯಾಗಿ ಮುನ್ನೆಡೆಸಿಕೊಂಡು ಹೋದರೆ ಸಂಘವು ಅಸ್ತಿತ್ವದಲ್ಲಿ ಇರಲು ಸಾಧ್ಯವಾಗುತ್ತದೆ. ಜೊತೆಗೆ ಬ್ಯಾಂಕಿನಿAದ ಆರ್ಥಿಕ ನೆರವು ನೀಡುವುದರ ಜೊತೆಗೆ ಮಹಿಳೆಯರ ಸ್ವಂತ ಉದ್ಯೋಗಕ್ಕೆ ಸಹಕಾರಿಯಾಗುತ್ತದೆ. ಜಿಲ್ಲೆಯಲ್ಲಿ ಸರ್ಕಾರದಿಂದ ಸಿಎಸ್‌ಸಿ ಕೇಂದ್ರ ಸ್ಥಾಪನೆಗೆ ನಮ್ಮ ಸಂಘವು ಎಲ್ಲಾ ರೀತಿಯ ಸಹಕಾರ ನೀಡುತ್ತದೆ ಎಂದು ತಿಳಿಸಿದರು. ಮಲೇಬೆನ್ನೂರಿನಲ್ಲಿ ಸುರಿದ ಭಾರೀ ಮಳೆಯಿಂದ ಸುಮಾರು 15 ಮನೆಗಳು ಕುಸಿತಗೊಂಡಿದ್ದು, ಸಂತ್ರಸ್ಥ ಕುಟುಂಬಗಳಿಗೆ ನಮ್ಮ ಸಂಘದ ವತಿಯಿಂದ ಪರಿಹಾರ ವಿತರಿಸಿ ಅವರಿಗೆ ಸಾಂತ್ವನ ಹೇಳಿದ್ದೇವೆ. ಈ ರೀತಿ ಸಂಘದ ಕಾರ್ಯಚಟುವಟಿಕೆಗಳ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಕಷ್ಟದಲ್ಲಿರುವವರಿಗೆ ನೆರವಾಗುತ್ತದೆ ಎಂದರು.31ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್ ಮಾತನಾಡಿ, ಮಹಿಳೆಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಎಲ್ಲಾ ರೀತಿಯ ಸಹಕಾರ ನೀಡುತ್ತದೆ. ಅದನ್ನು ಸರಿಯಾಗಿ ಬಳಕೆ ಮಾಡಿಕೊಂಡು ಆರ್ಥಿಕ ಹೊರೆಯಿಂದ ಹೊರಬೇಕು. ಇತ್ತೀಚಿಗೆ ಸಿಲಿಂಡರ್ ಸ್ಫೋಟದಿಂದ ನಿಧನರಾದ ಪಾರ್ವತಮ್ಮ ಕುಂಟುAಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಂದ ಪರಿಹಾರ ಧನ ನೀಡಲಾಹಿದೆ. ಸಿಲಿಂಡರ್ ಸ್ಫೋಟದಿಂದ ಹಾನಿಗೊಳಗಾದ ಮನೆಯನ್ನು ಹೊಸದಾಗಿ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.