ಜಿಲ್ಲಾ ಉಸ್ತುವಾರಿ ಸಚಿವರಿಂದ ಫಲಾನುಭವಿಗೆ ಕೀ ವಿತರಣೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೫; ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ 2022-23 ನೇ, ಸಾಲಿನ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಸಂಚಾರಿ ಮಾರಾಟ ಮಳಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ ಅವರು ಫಲಾನುಭವಿಗೆ ವಿತರಣೆ ಮಾಡಿದರು. ಎಂ.ಸಿ.ಸಿ ಬಿ ಬ್ಲಾಕಿನಲ್ಲಿನ ತಮ್ಮ ನಿವಾಸದ ಆವರಣದಲ್ಲಿ ವಿತರಣೆ ಮಾಡಲಾಯಿತು. ಫಲಾನುಭವಿ ರಾಜು ನಾಗೇಂದ್ರಪ್ಪ ಗರಗ್ ಅವರಿಗೆ ಕೀ ವಿತರಿಸಿ ಸಚಿವರು ಸರ್ಕಾರದಿಂದ ಪಡೆದ ಸಂಚಾರಿ ಮಾರಾಟ ಮಳಿಗೆಯಿಂದ ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಸೂಚಿಸಿದರು.ಕೇಂದ್ರ ಕಚೇರಿಯ ಪ್ರಧಾನ ವ್ಯವಸ್ಥಾಪಕ ರುದ್ರೇಶ್, ಹಿಂದಿನ ಡಿ.ಸಿ.ಓ ಗಂಗಾಧರ್ ಅವರ ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಿಗಮದ  ಜಿಲ್ಲಾ ಸಂಯೋಜಕರಾದ ವೆಂಕಟೇಶ್ ಹಾಗೂ ಎಸ್.ನಾಗರಾಜು, ಪಾಲಿಕೆ ಸದಸ್ಯ ಉದಯಕುಮಾರ್, ಜಿಲ್ಲಾ ಸಮಾಗಾರ ಸಮಾಜದ ಅಧ್ಯಕ್ಷ ಫಕೀರಪ್ಪ ಬೆಟಗೇರಿ, ಕಾರ್ಯದರ್ಶಿ ಬಾಬುಮಾನೆ, ಯಲ್ಲಪ್ಪ ನೌಕರಿ, ರವಿ ಗಾಮನಕಟ್ಟೆ, ಗಣೇಶ್ ಮಾನೆ, ಆನಂದ್ ತೆರದಾಳ್ ಮತ್ತಿತರರು ಉಪಸ್ಥಿತರಿದ್ದರು.