ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ ಹಾಗೂ ಭಾರತ್ ಕೋ ಜಾನೊ ರಸಪ್ರಶ್ನೆಯ ವಿಜೇತರಿಗೆ ಬಹುಮಾನ ವಿತರಣೆ
ದಾವಣಗೆರೆ: ಭಾರತ್ ವಿಕಾಸ ಪರಿಷದ್ ನ  ಸ್ವಾಮಿ ವಿವೇಕಾನಂದ ಶಾಖೆ ದಾವಣಗೆರೆ ವತಿಯಿಂದ ಮಕ್ಕಳಲ್ಲಿ ದೇಶಭಕ್ತಿ, ಸಂಸ್ಕಾರ, ಸುಜ್ಞಾನ ಬೆಳಸುವ ಉದ್ದೇಶದಿಂದ ನಗರದ ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಶಾಖಾ ಮಟ್ಟದ ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ ಹಾಗೂ ಭಾರತ್ ಕೋ ಜಾನೊ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.ಸ ಮೂಹ ಗಾಯನ ಸ್ಪರ್ಧೆಯಲ್ಲಿ ರಾಷ್ಟ್ರಜ್ಞಾನ ವಿದ್ಯಾಲಯ ಸಿಬಿಎಸ್ಇ ಸ್ಕೂಲ್ ದಾವಣಗೆರೆಯ ವಿದ್ಯಾರ್ಥಿಗಳು ಪ್ರಥಮ ಬಹುಮಾನವನ್ನು ಪಡೆದರು. ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಶಾಲೆಗೆ ಪರ್ಯಾಯ ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು. ದ್ವಿತೀಯ ಬಹುಮಾನ ಪಡೆದ ಅನ್ಮೋಲ್ ಶಾಲೆ ಶಿರಮಗೊಂಡನಹಳ್ಳಿಯ ಮಕ್ಕಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.ಭಾರತ್ ಕೋ ಜಾನೋ ಸ್ಪರ್ಧೆಯಲ್ಲಿ ಜೂನಿಯರ್ ವಿಭಾಗದಲ್ಲಿ ಬಾಪೂಜಿ ಹೈಯರ್ ಪ್ರೈಮರಿ ಇಂಗ್ಲಿಷ್ ಮೀಡಿಯಂ ಸಿಬಿಎಸ್ ಸಿ ಶಾಲಾ ವಿದ್ಯಾರ್ಥಿಗಳಾದ ಪ್ರಚೀತಾ ಎಸ್ ರಾಜ್ ಮತ್ತು ಚಿನ್ಮಯ್ ಆರ್ ಕಲಾಲ್ ಅವರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರಗಳನ್ನು ಹಾಗೂ ಶಾಲೆಗೆ ಪರ್ಯಾಯ ಪಾರಿತೋಷಕ ನೀಡಿ ಗೌರವಿಸಲಾಯಿತು.ದ್ವಿತೀಯ ಬಹುಮಾನವನ್ನು ಬಿ ಇ ಎ ಹೈಯರ್ ಪ್ರೈಮರಿ ಸಿಬಿಎಸ್ ಸಿ ಸ್ಕೂಲ್ ನ ವಿದ್ಯಾರ್ಥಿಗಳಾದ ಎ.ಜೆ. ಶಶಾಂಕ್ ಮತ್ತು ಮೋಕ್ಷ ಪಡೆದಿದ್ದು, ಇವರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಸೀನಿಯರ್ ವಿಭಾಗದಿಂದ ಪ್ರಥಮ ಸ್ಥಾನವನ್ನು ಸಿದ್ದಗಂಗಾ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಆರ್. ಅಜಯ್ ಕುಮಾರ್ ಹಾಗೂ ಭೂಮಿಕಾ ಇಟಗಿ ಇವರುಗಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರಗಳನ್ನು ಹಾಗೂ ಕಾಲೇಜಿಗೆ ಪರ್ಯಾಯ ಪಾರಿತೋಷಕ ನೀಡಲಾಯಿತು. ದ್ವಿತೀಯ ಬಹುಮಾನವನ್ನು ಅಮೃತ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಸಾತ್ವಿಕ್ ಪಾಂಡು ಮತ್ತು ಅನನ್ಯ ನಿಗಮ್ ಅವರುಗೆ ನಗದು ಬಹುಮಾನ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಜಸ್ಟೀನ್ ಡಿಸೌಜ, ಮಾಗನೂರು ಬಸಪ್ಪ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಪ್ರಸಾದ್ ಬಂಗೇರ, ನಿಕಟಪೂರ್ವ ಅಧ್ಯಕ್ಷರಾದ ಎಲ್ ವಿ ನಾಗಾನಂದ್ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಭಾರತ್ ವಿಕಾಸ ಪರಿಷತ್ನ ಅಧ್ಯಕ್ಷರಾದ ಮೌನೇಶಪ್ಪ ವಹಿಸಿದ್ದರು