ನಾಡಿನ ಪ್ರಗತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಕೊಡುಗೆ ಅಪಾರ:ಮತ್ತಿಮಡು
ಕಲಬುರಗಿ:ಸೆ.04ನಾಡಿನ ಪ್ರಗತಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರ ಕೊಡುಗೆ ಅಪಾರ:ನಾಡಿನ ಶಿಕ್ಷಣ, ಆರೋಗ್ಯ ಮತ್ತು ಹೈನುಗಾರಿಕೆ ಉತ್ಪಾದನಾ ಕ್ಷೇತ್ರ ಸೇರಿದಂತೆ ವಾಗಿದೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಶ್ರೀ ಬಸವರಾಜ ಮತ್ತಿಮಡು ರವರು ನುಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸದ್ಭಕ್ತ ಬಳಗ ಕಲಬುರಗಿ, ಜಿಲ್ಲಾ ಸಕಲ ಜೈನ ಸಮಾಜ ಮತ್ತು ಎಸ್.ಆರ್.ಎನ್. ಮೆಹತಾ ಶಾಲೆ, ಕಲಬುರಗಿ ವತಿಯಿಂದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಆಯೋಜಿಸಿದ ಗುರುವಂದನಾ ಮಹೋತ್ಸವವನ್ನು ಜ್ಯೋತಿ ಬೆಳಗಿಸುವ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರ ಆರ್ಥಿಕ ಚೇತರಿಕೆ, ಸ್ವಾವಲಂಬನೆ ಮೂಲಕ ಸಮಾಜದಲ್ಲಿ ಬಹುದೊಡ್ಡ ಕ್ರಾಂತಿಕಾರಿ ಬದಲಾವಣೆಯನ್ನು ಪೂಜ್ಯ ಹೆಗ್ಗಡೆಯವರು ತರುತ್ತಿದ್ದು ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಮಹಿಳೆಯರು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಜನೋಪಯೋಗಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿರುವುದು ಬಹು ಸಂತಸದ ಸಂಗತಿಯಾಗಿದೆ ಎಂದರು.
ತಮ್ಮ ಇಡೀ ಜೀವನವನ್ನೇ ಸಮಾಜಕ್ಕಾಗಿ ಧಾರೆಯೆರೆದ ಪೂಜ್ಯಮ ಹೆಗ್ಗಡೆಯವರು ಸರ್ಕಾರದ ಯೋಜನೆಗಳೊಂದಿಗೆ ಕೈಗೂಡಿಸಿ ಅರ್ಹ ಫಲಾನುಭವಿಗಳಿಗೆ ತಲುಪಿಸುತ್ತಿರುವ ಪರಿಣಾಮವಾಗಿ ಇಂದು ಕಲಬುರಗಿ ವಿಭಾಗದಲ್ಲಿಯೂ ಸಹ ಹತ್ತಾರು ಸಾವಿರ ಮಹಿಳೆಯರು ಧರ್ಮಸ್ಥಳ ಸಂಸ್ಥೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆಂದು ನುಡಿದರು. ಪೂಜ್ಯ ಹೆಗ್ಗಡೆಯವರ ಬದುಕು ಇಂದಿನ ಯುವ ಪೀಳಿಗೆಗೆ ಆದರ್ಶಪ್ರಾಯವಾಗಿದ್ದು ಅವರ ಬದುಕು ನಮಗೆಲ್ಲ ಸನ್ಮಾರ್ಗದರ್ಶನವಾಗಿದೆ ಎಂದು ಮತ್ತಿಮಡು ರವರು ನುಡಿದರು.
ಗುರುವಂದನಾ ಸ್ವೀಕರಿಸಿ ಮಾತನಾಡಿದ ಪೂಜ್ಯ ಹೆಗ್ಗಡೆಯವರು ಕಲಬುರಗಿ ಜಿಲ್ಲೆಯ ಜನತೆಯ ಭಕ್ತಿ ಮತ್ತು ಪ್ರೀತಿಗೆ ಗೌರವ ಮತ್ತು ಆತಿಥ್ಯ ನಮ್ಮ ಮನಸೂರೆಗೊಂಡಿದ್ದು ಇಲ್ಲಿಯವರ ಭಕ್ತಿಯಲ್ಲಿ ಶಕ್ತಿ ಇದ್ದು ಹೀಗಾಗಿ ಧರ್ಮಾಧಿಕಾರಿಗಳನ್ನು ಇವತ್ತು ಗೌರವಿಸಿದ್ದು ನಮ್ಮ ಜೀವಮಾನದಲ್ಲಿಯೇ ಮರೆಯಲಾಗದ ಕ್ಷಣವೆಂದು ಭಾವುಕರಾದರು. ಪ್ರತಿಯೊಬ್ಬರು ನಿಷ್ಠೆಯಿಂದ ಕಾಯಕ ಮಾಡಿ ಭಕ್ತಿಯಿಂದ ದಾಸೋಹ ಮಾಡುವಂತೆ ಕರೆ ನೀಡಿದ ಪೂಜ್ಯರು ಸುಂದರ ಸಮಾಜಕ್ಕಾಗಿ ಮತ್ತು ಮನುಕುಲ ನೆಮ್ಮದಿಯಿಂದ ಬದುಕುವುದಕ್ಕಾಗಿ ಶ್ರಮಿಸುವಂತೆ ಕಿವಿ ಮಾತು ಹೇಳಿದರು.