ಸೆಪ್ಟೆಂಬರ್ 5 ರಂದು ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ
ಕಲಬುರಗಿ:ಸೆ.04:ಪ್ರಸಕ್ತ 2024-25ನೇ ಸಾಲಿನ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಇದೇ ಸೆಪ್ಟೆಂಬರ್ 5 ರಂದು ಬೆಳಿಗ್ಗೆ 10.30ಕ್ಕೆ ಕಲಬುರಗಿ ಜೇವರ್ಗಿ ರಸ್ತೆಯ ಕೋಟನೂರ ಮಠ ಶ್ರೀ ಸಿದ್ಧಶ್ರೀ ಡಿವೈನ್ ಪ್ಯಾಲೇಸ್‍ದಲ್ಲಿ ಏರ್ಪಡಿಸಲಾಗಿದೆ ಎಂದು ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಅವರು ತಿಳಿಸಿದ್ದಾರೆ.
ಪ್ರಾಥಮಿಕ ವಿಭಾಗ: ಸೇಡಂ ತಾಲೂಕಿನ ಈರ್ನಾಪಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಚಂದ್ರಕಲಾ, ಕಲಬುರಗಿ (ದ) ತಾಲೂಕಿನ ಬಸನಾಳ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸುನಂದಾ ಚೌಧರಿ, ಕಲಬುರಗಿ(ದ) ತಾಲೂಕಿನ ಫರಹತಾಬಾದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶಾಂತಾಬಾಯಿ ಸೋಮಶೇಖರ ಸಜ್ಜನ, ಕಲಬುರಗಿ(ಉ) ತಾಲೂಕಿನ ಕುಮಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಧನರಾಜ ಎಂ ಮಠಪತಿ, ಚಿಂಚೋಳಿ ತಾಲೂಕಿನ ಗೌಡಪ್ಪಗುಡಿ ತಾಂಡಾ ಸರಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಉತ್ತಮ ಎ ದೋಡ್ಡಮನಿ, ಚಿಂಚೋಳಿ ತಾಲೂಕಿನ ಐನೋಳ್ಳಿ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸರೂಬಾಯಿ ಎಮ್. ಕುಂಬಾರ, ಚಿತ್ತಾಪೂರ ತಾಲೂಕಿನ ಗೋಳಾ.ಕೆ ನಿಜಾಮನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ನಜೀರ್‍ಎಮ್ ಮುಲ್ಲಾ, ಚಿತ್ತಾಪೂರ ತಾಲೂಕಿನ ಕಾಳಗಿ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸರ್ವಮಂಗಳ, ಚಿತ್ತಾಪೂರ ತಾಲೂಕಿನ ಯರಗಲ್‍ತಾಂಡಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಗುಂಡಮ್ಮ ಎ ಅಲ್ಲಮ್ಮ, ಜೇವರ್ಗಿ ತಾಲೂಕಿನ ಗಾಂಧಿ ನಗರ ಮಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ನಿಂಗಪ್ಪ ರೂಗಿ, ಅಫಜಲಪೂರ ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಆಲಿಯಾ ಬೇಗಂ, ಅಫಜಲಪೂರ ತಾಲೂಕಿನ ಅವರಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಗೀತಾ ದುತ್ತರಗಿ, ಅಫಜಲಪೂರ ತಾಲೂಕಿನ ಗೊಬ್ಬರ.ಬಿ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ನೀಲಮ್ಮ ರಾಚಯ್ಯಾ ಬಾಳ್ಳಿ, ಆಳಂದ ತಾಲೂಕಿನ ನೇಕಾರ ಕಾಲೋನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಚಂದುಬಾಯಿ ಕಾಸರ್ ಹಾಗೂ ಆಳಂದ ತಾಲೂಕಿನ ಆಶ್ರಯ ಕಾಲೋನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಅಂಬಾರಾಯ ಗುಂಡಪ್ಪ ಕಾಂಬಳೆ.