ಅಪ್ರಾಪ್ತೆ ಅತ್ಯಾಚಾರ ಯತ್ನ: 3 ವರ್ಷ ಶಿಕ್ಷೆ
ಕಲಬುರಗಿ,ಸೆ 4: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ವ್ಯಕ್ತಿಗೆ ಅಪರ ಜಿಲ್ಲಾ ಮತ್ತು ಸತ್ರ ( ವಿಶೇಷ ಫೋಕ್ಸೋ) ನ್ಯಾಯಾಲಯ (ಎಫ್‍ಟಿ ಎಸ್‍ಸಿ 1) 3 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ ದಂಡ ವಿಧಿಸಿದೆ.
ಫರತಾಬಾದ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಮಹೇಶ ಬಾಗೋಡಿ ( ಮ್ಯಾಕೇರಿ) ಶಿಕ್ಷೆಗೊಳಗಾದ ವ್ಯಕ್ತಿ.
2023 ರ ಅಕ್ಟೋಬರ್ 18 ರಂದು ಈತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ. ಇದನ್ನು ವಿರೋಧಿಸಿದ ಪಾಲಕರ ಮೇಲೆ ಜೊತೆಗಾರರೊಂದಿಗೆ ಹಲ್ಲೆ ನಡೆಸಿದ್ದ.ಫರತಾಬಾದ್ ಠಾಣೆ ತನಿಖಾಧಿಕಾರಿಗಳು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ ( ವಿಶೇಷ ಫೋಕ್ಸೋ) ನ್ಯಾಯಾಲಯದ( ಎಫ್ ಟಿ ಎಸ್ ಸಿ 1) ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ತೀರ್ಪು ನೀಡಿದ್ದಾರೆ.ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ಬಿ ತುಪ್ಪದ ಅವರು ವಾದ ಮಂಡಿಸಿದ್ದರು.