ಸಿಯುಕೆಯಲ್ಲಿ ಯೋಗ ತರಗತಿಗಳ ಉದ್ಘಾಟನೆ
ಕಲಬುರಗಿ,ಸೆ.4:ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ ಎಂದು ಸೊಲ್ಲಾಪುರದ ಡಿಎಸ್ ಟಿಎಸ್ ಮಂಡಲ ಫಾರ್ಮಸಿ ಕಾಲೇಜು ಪ್ರಾಚಾರ್ಯ ಪೆÇ್ರ.ರವಿಕಾಂತ್ ಯಶವಂತರಾವ್ ಪಾಟೀಲ್ ಹೇಳಿದರು.
ಸಿಯುಕೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಯೋಗ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮವನ್ನು ಸಿಯುಕೆಯ ಶಿಕ್ಷಣ ಮತ್ತು ತರಬೇತಿ ವಿಭಾಗ, ಆಯೋಜಿಸಿತ್ತು. ಧ್ಯಾನ ಎಂದರೆ ಏಕಾಗ್ರತೆಗೊಳಿಸುವುದೆಂಬುವುದು ತಪ್ಪು ಕಲ್ಪನೆಯಾಗಿದೆ. ಧ್ಯಾನವು ಏಕಾಗ್ರತೆಯನ್ನು ಬೇಧಿಸುವ ಒಂದು ಪ್ರಕ್ರಿಯೆಯಾಗಿದ್ದು ಅದು ಸ್ವಯಂಚಾಲಿತವಾಗಿ ಏಕಾಗ್ರತೆಗೆ ಕಾರಣವಾಗುತ್ತದೆ ಎಂದು ಹೇಳಿದರು.
ಕುಲಪತಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಯೋಗ ಆರೋಗ್ಯಕರ ಜೀವನಕ್ಕೆ ಅತ್ಯಂತ ಪ್ರಮುಖವಾದ ಚಟುವಟಿಕೆಯಾಗಿದೆ. ನಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾವು ಯೋಗ, ವ್ಯಾಯಾಮ, ಕ್ರೀಡೆ, ನಡಿಗೆಯಂತಹ ದೈಹಿಕ ಚಟುವಟಿಕೆಗಳನ್ನು ಮಾಡಬೇಕು.ಆರೋಗ್ಯವೇ ನಿಜವಾದ ಸಂಪತ್ತು ಎಂದು ಹೇಳಿದರು.ಈ ಸಂದರ್ಭದಲ್ಲಿ ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ್ ಮಾತನಾಡಿದರು.
ಶ್ರೀಜಾ ಕಾರ್ಯಕ್ರಮ ನಿರೂಪಿಸಿ, ಗೋಪಿಕಾ ಸ್ವಾಗತಿಸಿದರು. ಯೋಗ ತರಬೇತುದಾರರಾದ ಡಾ.ಸಂತೋಷ ಬಶೆಟ್ಟಿ ಮತ್ತು ಡಾ.ಜ್ಯೋಸ್ತ್ನಾ ಅವರಿಂದ ಪ್ರಾತ್ಯಕ್ಷಿಕೆ ಮತ್ತು ತರಬೇತಿ ನಡೆಯಿತು. ಪೆÇ್ರ.ಜಿ.ಆರ್.ಅಂಗಡಿ, ಡಾ.ಬಸವರಾಜ ಕುಬಕಡ್ಡಿ, ಡಾ.ಲಿಂಗಮೂರ್ತಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.