ಸೈದಾಪುರ ರೈಲ್ವೆ ನಿಲ್ದಾಣ ವಿವಿಧ ಬೇಡಿಕೆಗಳು ಕುರಿತು ರೈಲ್ವೆ ಸಚಿವರಿಗೆ ಮನವಿ
ಸೈದಾಪುರ:ಸೆ.4:ಇಲ್ಲಿಗೆ ಸಮೀಪದ ಕಡೇಚೂರು ಹಾಗೂ ಬಾಡಿಯಾಲ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರಿಗೆ ಗ್ರಾಮಸ್ಥರು ಸೈದಾಪುರ ರೈಲ್ವೇ ನಿಲ್ದಾಣಕ್ಕೆ ಸಂಬಂದಿಸಿದಂತೆ ವಿವಿಧ ಬೇಡಿಕೆಗಳನ್ನು ಕುರಿತು ಮನವಿ ಪತ್ರ ಸಲ್ಲಿಸಿದರು.
ಇಲ್ಲಿನ ರೈಲ್ವೆ ನಿಲ್ದಾಣ 50ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಪ್ರದೇಶವಾಗಿದ್ದೂ ಹೆಚ್ಚಿನ ಜನ ದಟ್ಟಣೆ ಇರುವುದರಿಂದ ಯಾರ್ಡನ ಎಲ್.ಸಿ ಗೇಟ್ 225 ಮೆಲ್ಸೇತುವೆ ಬ್ರಿಡ್ಜ್ ಮಂಜೂರ ಮಾಡಬೇಕು. ರೈಲು ಸಂಚರಿಸುವ ಸಂದರ್ಭದಲ್ಲಿ ಗೇಟ ಮುಚ್ಚಲಾಗುತ್ತದೆ. ಭಾರಿ ಪ್ರಮಾಣದಲ್ಲಿ ವಾಹನಗಳು ನಿಲ್ಲುವಂತಾಗಿದೆ. ಇದರಿಂದ ರೈತರು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ತೊಂದರೆ ಕಾಣುವಂತಾಗಿದೆ. 16571 ಯಶವಂತಪೂರ ಬೀದರ ಮತ್ತು 16583 ಯಶವಂತಪೂರ ಲಾತೂರ ಎಕ್ಸ್‍ಪ್ರೆಸ್ ನಿಲ್ಲಿವುದನ್ನು ಸ್ಥಗಿತಗೊಳಿಸಿರುತ್ತಾರೆ. ಇವುಗಳನ್ನು ಮುರು ಪ್ರಾರಂಭ ಮಾಡಬೇಕು. ಸೋಲ್ಲಾಪುರ ಗುಂತಕಲ್ ಪ್ಯಾಸೆಂಜರ ಸುಮಾರು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿದ್ದೂ ಕೋವಿಡ ಸಮಯದಿಂದ ಇಲ್ಲಿಯವರೆಗೂ ಸ್ಥಗಿತಗೊಂಡಿದ್ದೂ ಮರು ಚಾಲನೆ ಮಾಡುವಂತೆ ಸಂಬಂಧ ಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಿ ಸಂಚಾರಕ್ಕೆ ಅನಕೂಲ ಕಲ್ಪಿಸಿಕೊಡಬೇಕು. 16381/82 ಕನ್ಯಾಕುಮಾರಿ ಎಕ್ಸ್‍ಪ್ರೆಸ್ (ಜಯಂತಿ) ರೈಲು ಸೈದಾಪುರದಲ್ಲಿ ಹೊಸ ನಿಲುಗಡೆಗಾಗಿ ಬಹಳ ದಿನಗಳ ಬೇಡಿಕೆಯಾಗಿದ್ದೂ ಇದನ್ನು ಈಡೇರಿಸಬೇಕು. ಅತಿ ಹೆಚ್ಚಿನ ಪ್ರಯಾಣಿಕರನ್ನು ಹೊಂದಿದರುವ ರೈಲ್ವೇ ನಿಲ್ದಾಣ ಇದಾಗಿದ್ದೂ ಇವರುಗಳ ಸುಲಭ ಸಂಚಾರಕ್ಕಾಗಿ ನಿಲ್ದಾಣದಲ್ಲಿ ಅನೌನ್ಸ್‍ಮೆಂಟ ಸಿಸ್ಟಮ್ ಅತಿ ಅವಶ್ಯಕತೆ ಇದ್ದೂ ಅದರ ಅನುಕೂಲತೆಯನ್ನು ಕಲ್ಪಿಸಿಕೊಡುವಂತೆ ವಿವಿಧ ಬೇಡಿಕೆಗಳನ್ನು ಕುರಿತು ಅರ್ಜುನ ಚೌಹ್ವಾಣ, ಯೇಸುರಾಜ ಬೆಳಗುಂದಿ, ನಿತಿನ ತಿವಾರಿ, ಸಾಬಯ್ಯ ಉಪ್ಪಾರ, ಶಿವರಾಜ ವಡ್ಲೂರು, ಯೇಸುನಾಥ ಮೇಲೆಗಿರಿ, ಸೇರಿದಂತೆ ಇತರರು ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.