ಸಮಾಜದ ಬದಲಾವಣೆಗೆ ಶ್ರಮಿಸಿದ ಮಹಾನ್ ಚೇತನ ಬಸವಣ್ಣ:ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ
ಬಸವನಬಾಗೇವಾಡಿ:ಸೆ.4:12ನೇ ಶತಮಾನದಲ್ಲಿ ಸಮಾನತೆ, ಅಕ್ಷರ ಕ್ರಾಂತಿ, ವಚನ ಕ್ರಾಂತಿ, ಅನ್ನದಾಸೋಹದಂತಹ ಕಾರ್ಯಕ್ರಮವನ್ನು ನೀಡುವ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಿದ ಮಹಾನ್ ಚೇತನ ಬಸವಣ್ಣನವರು ಎಂದು ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು
ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ರಾಷ್ಟ್ರೀಯ ಬಸವಸೈನ್ಯ ಮಸಬಿನಾಳ ಗ್ರಾಮ ಘಟಕ ಆಯೋಜಿಸಿದ್ದ ಬಸವೇಶ್ವರ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದರು.
ತಳಮಟ್ಟದಿಂದ ಮೇಲ್ವರ್ಗವರೆಗೆ ಎಲ್ಲರನ್ನು ಸಮಾನವಾಗಿ ಕಾಣುವ ಮೂಲಕ ಬಸವಣ್ಣನವರು ಅಸ್ಪøಶ್ಯದಂತ ಅನಿಷ್ಟ ಪದ್ಧತಿಯ ನಿರ್ಮೂಲನಕ್ಕೆ ನಾಂದಿ ಹಾಡಿದರು. ತಮ್ಮ ವಚನದ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಿದರು ಎಂದರು.
ಜ್ಯೋತಿ ಬೆಳಗಿಸಿ ಮಾತನಾಡಿದ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ ಮಾತನಾಡಿ ಬಸವಣ್ಣನವರ ಪುತ್ಥಳಿ ಅನಾವರಣವಾಗಿರುವುದು ಸಂತಸದ ಸಂಗತಿ. ಬಸವಣ್ಣನವರ ಆಶಯದಂತೆ ಇಂದಿಗೂ ವಿವಿಧ ಮಠದಲ್ಲಿ ಸರ್ವರಿಗೂ ಶಿಕ್ಷಣ, ಅನ್ನ ದಾಸೋಹದಂತ ಕಾರ್ಯವನ್ನು ಮಠಾಧೀಶರು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ ಎಂದು ಶ್ಲಾಘಿಸಿಸಿದರು.
ಇತ್ತೀಚಗೆ ರಾಜ್ಯ ಸರ್ಕಾರ ಕೂಡಾ ಬಸವಣ್ಣನವರನ್ನು ನಾಡಿನ ಸಾಂಸ್ಕøತಿಕ ನಾಯಕ ಎಂದು ಘೋಷಣೆ ಮಾಡಿದ್ದು ಬಸವ ಬಕ್ತರಿಗೆ ಸಂತೋಷ ತರುವುದರ ಜೊತೆಗೆ ಬಸವನಬಾಗೇವಾಡಿ ಅಭಿರುದ್ದಿ ಪ್ರಾಧಿಕಾರ ರಚನೆ ಮಾಡಿದ್ದು ರಾಷ್ಟ್ರೀಯ ಬಸವಸೈನ್ಯ ಸಂಘಟನೆಯ ಹೋರಾಟಕ್ಕೆ ಜಯ ದೊರಕಿದೆ ಬಸವನಬಾಗೇವಾಡಿ ಅಭಿರುದ್ದಿ ಪ್ರಾಧಿಕಾರದಲ್ಲಿ ಹಡಪದ ಅಪ್ಪಣ್ಣನವರ ಜನಿಸಿದ ಮಸಬಿನಾಳ ಗ್ರಾಮವನ್ನು ಸೇರಿಸಿ ಅಭಿರುದ್ಧಿ ಪಡಿಸಬೇಕು ಎಂದು ಈ ವೇದಿಕೆಯ ಮುಕಾಂತರ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಹೇಳಿದರು.
ಸಾನಿದ್ಯ ವಹಿಸಿ ಮಾತನಾಡಿದ ಮಸಬಿನಾಳದ ವಿರಕ್ತಮಠದ ಸಿದ್ದರಾಮ ಸ್ವಾಮೀಜಿ, ಬಸವಣ್ಣನವರ ಕೊಡುಗೆ ಸಮಾಜಕ್ಕ ಅಪಾರ. ವಚನದ ಸಾಹಿತ್ಯದ ಮೂಲಕ ಲೋಕದ ಸತ್ಯವನ್ನು ಅರ್ಥವಾಗುವಂತೆ ತಿಳಿಸಿ ಹೊಸ ಶಕೆಗೆ ನಾಂದಿ ಹಾಡಿದರು. ಅವರ ನಡೆ-ನುಡಿ ಹಾಗೂ ಅವರು ತೋರಿದ ಹಾದಿಯನ್ನು ನಾವೆಲ್ಲರೂ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪಿಕೆಪಿಎಸ್ ಅಧ್ಯಕ್ಷ ರಾಜುಗೌಡ ಪಾಟೀಲ ಗ್ರಾಮ ಪಂಚಾಯತಿ ಅದ್ಯಕ್ಷಣಿ ರಮೀಜಾ ಮೈರಾ ಅಧ್ಯಕ್ಷತೆ ವಹಿಸಿದ್ದರು ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಾನಂದ ಹಿರೇಮಠ ಚಂದ್ರಶೇಖರ ಬೈಚಬಾಳ ಅಶೋಕ ತೋಟದ ಈರಣ್ಣ ಕೌಲಗಿ ರವಿ ಬೈಚಬಾಳ ರವಿ ಕತ್ನಳ್ಳಿ ಮುದಕಪ್ಪ ಮಡಗೊಂಡ ಸೋಮಶೇಖರ ಕಾರಜೋಳ ಕಾರ್ಯಕ್ರಮ ನಿರೂಪಿಸಿದರು ರಾಷ್ಟ್ರೀಯ ಬಸವಸೈನ್ಯದ ಮಸಬಿನಾಳ ಗ್ರಾಮ ಘಟಕದ ಅಧ್ಯಕ್ಷ ಪ್ರಶಾಂತ ಬೈಚಬಾಳ ಸ್ವಾಗತಿಸಿದರು ಅಭಿಷೇಕ ಶಿಂಧಗಿ ವಂದಿಸಿದರು.
ಕಾರ್ಯಕ್ರಮಕ್ಕೂ ಮುಂಚೆ ಬಸವಣ್ಣನವರ ಪುತ್ಥಳಿಯ ಮೆರವಣಿಗೆ ಜವಳಿ ಮತ್ತು ಸಕ್ಕರೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ಚಾಲನೆ ನೀಡಿದರು