ಸಂಪೂರ್ಣತಾ ಅಭಿಯಾನಕ್ಕೆ ಚಾಲನೆ
ಚಿಟಗುಪ್ಪ:ಸೆ.4:ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳು ಹಾಗು ಸಾರ್ವಜನಿಕರ ಸಮನ್ವಯದಲ್ಲಿ ಸರ್ಕಾರದ ಯೋಜನೆಗಳನ್ನು ಸಂಪೂರ್ಣವಾಗಿ ಅರ್ಹರಿಗೆ ತಲುಪಿಸುವುದೇ ನೀತಿ ಆಯೋಗದ ಸಂಪೂರ್ಣ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಭಾಗ್ಯಜ್ಯೋತಿ ನುಡಿದರು.
ತಾಲೂಕಿನ ಮನ್ನಾಎಖೇಳಿ ಗ್ರಾಪಂ ವತಿಯಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ನೀತಿ ಆಯೋಗ ಯೋಜನೆಯ ಸಂಪೂರ್ಣತಾ ಅಭಿಯಾನ ಸಭೆಯನ್ನು ಆಯೋಜಿಸಿ ಮಾತನಾಡಿದರು.
ಬೀದರ್ ಜಿಲ್ಲೆಯ 4 ತಾಲೂಕಿನ ಗ್ರಾಪಂ ನಲ್ಲಿ ಕ್ರಮವಾಗಿ ನೀತಿ ಆಯೋಗದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಯೋಜನೆಯನ್ವಯ 3 ತಿಂಗಳಲ್ಲಿ ವಿವಿಧ ಇಲಾಖೆಗಳಿಂದ 6 ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗೊಳಿಸುವ ಹೊಣೆಗಾರಿಕೆಯಿದ್ದು,ಅರೋಗ್ಯ, ಮಹಿಳಾ ಮತ್ತು ಮಕ್ಕಳ ಇಲಾಖೆ, ಕೃಷಿ, ಮೂಲಭೂತ ಸೌಲಭ್ಯ ಇಲಾಖೆಗಳಿಂದ 6 ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ ಎಂದು ನೀತಿ ಆಯೋಗದ ತಾಲೂಕ ಸಹಾಯಕರಾದ ಸಂತೋಷ್ ಹಾಗು ಪಂಚಾಯತ್ ರಾಜ್ ಇಲಾಖೆಯ ಜಿಲ್ಲಾ ನೀತಿ ಆಯೋಗದ ಮಂಜುನಾಥ್ ಸಭೆಗೆ ಮಾಹಿತಿ ನೀಡಿದರು.
ಬಳಿಕ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ವ್ಯಾಪ್ತಿಯ ನೀತಿ ಯೋಜನೆಗಳ ವ್ಯಾಪ್ತಿಯ ಬಾಣಂತಿ ಮಹಿಳೆಯರ ಕಾಳಜಿ, ಮಕ್ಕಳಿಗೆ ಪೌಷ್ಟಿಕ ಆಹಾರ, ಮಕ್ಕಳ ಕಲಿಕೆ, ಸಂಜೀವಿನಿ ಯೋಜನೆಯ ಸ್ವಸಹಾಯ ಸಂಘದ ಚಟುವಟಿಕೆಗಳು,ಕೃಷಿಯಲ್ಲಿ ಸಮಗ್ರ ಬದಲಾವಣೆ ಸೇರಿದಂತೆ ಸಭೆಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಅರೋಗ್ಯ, ಮಹಿಳಾ ಮತ್ತು ಮಕ್ಕಳ ಇಲಾಖೆ, ಕೃಷಿ, ಶಿಕ್ಷಣ,ಸರ್ಕಾರಿ ಶಾಲೆಗಳ ಮುಖ್ಯಪಾಧ್ಯಾಯರು ಅಂಗನವಾಡಿ ಆಶಾ, ಸ್ವಸಹಾಯ ಸಂಘದ ಸದಸ್ಯರು ಸ ಭೆಯಲ್ಲಿದ್ದರು.
ಗ್ರಾಪಂ ಅಧ್ಯಕ್ಷ ರಾಜಕುಮಾರ ಅಗಸಿ, ಉಪಾಧ್ಯಕ್ಷೆ ಮೈ ಮುನಾಬಿ ಮಹಬೂಬ್ ಸಾಬ್, ಪಿಡಿಒ ಭಾಗ್ಯಜ್ಯೋತಿ ಗ್ರಾಪಂ ಮಾಜಿ ಅಧ್ಯಕ್ಷರು ಸದಸ್ಯರು ಗ್ರಾಮದ ಮುಖಂಡರಿದ್ದರು.