ವರಮಹಾಲಕ್ಷ್ಮಿ ಪೂಜೆಯಿಂದ ಸಂಪತ್ತು, ಸಮೃದ್ಧಿ, ಆಯುಷ್ಯ ವೃದ್ದಿ:ಸೊನ್ನದ ಶಿವಾನಂದ ಶಿವಾಚಾರ್ಯರು
ಚಿತ್ತಾಪುರ:ಸೆ.4:ಮಹಿಳೆಯರು ವರಮಹಾಲಕ್ಷ್ಮಿ ಪೂಜೆ ಮಾಡುವುದರಿಂದ ಜೀವನದಲ್ಲಿ ಸಂಪತ್ತು, ಸಮೃದ್ಧಿಯ ಲಾಭವಾಗಲಿದೆ ಎಂದು ಸೊನ್ನದ ಶ್ರೀ ಶಿವಾನಂದ ಶಿವಾಚಾರ್ಯರು ನುಡಿದರು.
ಪಟ್ಟಣದ ಕಂಬಳೇಶ್ವರ ಮಠದಲ್ಲಿ ಚಿತ್ತಾಪುರ ಘಟಕದ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಶ್ರೀ ಕಂಬಳೇಶ್ವರ ಸಂಸ್ಥಾನ ಮಠ, ನಾಗಾವಿ ನಾಡಿನ ವಲಯದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ಶ್ರೀ ಕಂಬಳೇಶ್ವರ ಮಠದ ಕುಮಾರೇಶ್ವರ ಧಾಮದ ಉದ್ಘಾಟನೆ ಹಾಗೂ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಪೂಜೆ, ಸಂಸ್ಕಾರಗಳಿಂದ ಮನುಷ್ಯನಿಗೆ ಅಯೂಷ್ಯ ವೃದ್ಧಿಯಾಗುತ್ತದೆ ಎಂದರು.
ಪ್ರತಿಯೊಬ್ಬರ ಮನೆಗಳಲ್ಲಿ ಶಾಂತಿ, ನೆಮ್ಮದಿ, ಸಮೃದ್ದಿಯ ಬದುಕು ಸಿಗಲಿದೆ.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ವರು ಭಾಗವಹಿಸಿ ಉತ್ತಮವಾದ ಸತ್ಸಂಗ, ಸಂಸ್ಕಾರ ಆಳವಡಿಸಿಕೊಳ್ಳಬೇಕೆಂದು ಹೇಳಿದರು.
ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು, ಅಳ್ಳೋಳ್ಳಿ ಶ್ರೀ ಸಂಗಮನಾಥ ಶಿವಾಚಾರ್ಯರು, ದಿಗ್ಗಾಂವ ಶ್ರೀ ಮಲ್ಲಯ್ಯ ಮುತ್ಯಾ, ರಾವೂರ ಶ್ರೀ ರಾಜಶೇಖರ ಶಿವಾಚಾರ್ಯರು, ತೋನಸನಳ್ಳಿ ಮಲ್ಲಣ್ಣಪ್ಪ ಮುತ್ಯಾ, ಜೇರಟಗಿಯ ಶ್ರೀ ಮಹಾಂತ ಶಿವಾಚಾರ್ಯರು, ರಾವೂರಿನ ಶ್ರೀ ಸಿದ್ದಲಿಂಗ ಶಿವಾಚಾರ್ಯರು, ಮಾಲಗತ್ತಿಯ ಶ್ರೀ ಚನ್ನಬಸವ ಶರಣರು ಮಾತನಾಡಿದರು.
ಕಂಬಳೇಶ್ವರ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರಿಗೆ ಲಾಡ್ಲಾಪುರ ಗ್ರಾಪಂ ಮಾಜಿ ಅಧ್ಯಕ್ಷ ಸಾಬಣ್ಣ ಆನಮಿ, ಆರ್ಚಕ ಕರಬಸಯ್ಯ ಶಾಸ್ತ್ರೀ ಅವರು ನಾಣ್ಯಗಳಿಂದ ತುಲಾಭಾರ, ಸ್ವಾಮಿ ಟಿಫಿನ್ ಸೆಂಟರ್ ಮಾಲೀಕ ಮಂಜುನಾಥ ಸ್ವಾಮಿ ಅವರು ಹಣ್ಣು ಹಂಪಲುಗಳಿಂದ ತುಲಾಬಾರ ಮಾಡಿದರು.
ಆರ್ಚಕರಾದ ಶಿವಶರಣಯ್ಯಸ್ವಾಮಿ ಪುರದಯ್ಯನಮಠ, ಮಂಜುನಾಥ್ ಶಾಸ್ತ್ರೀ, ಕರಬಸಯ್ಯ ಶಾಸ್ತ್ರೀ, ಕ್ಷೇಮಲಿಂಗಯ್ಯ ಮಠಪತಿ ಮಂತ್ರ ಪಠಣ ಮಾಡಿದರು. ಮಹಿಳೆಯರು ವರಮಹಾಲಕ್ಷ್ಮಿ ಪೂಜೆ ನೆರವೇರಿಸಿದರು.
ಕಂಬಳೇಶ್ವರ ಮಠದಿಂದ ಧಾನಗೈದ ಧಾನಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಬೆನಕನಳ್ಳಿ ಶ್ರೀ ಕೇದಾರಲಿಂಗ ಶಿವಾಚಾರ್ಯರು, ಯರಗೋಳ ಸಂಗಮೇಶ್ವರ ಶಿವಾಚಾರ್ಯರು, ಶಹಾಬಾದ ಬಾಲಬ್ರಹ್ಮಚಾರಿ ಶ್ರೀ ರಾಜ ಶಿವಯೋಗಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ಯೋಜನಾಧಿಕಾರಿ ಗುರುರಾಜ ಬಿ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ನಾಗರಾಜ ಭಂಕಲಗಿ, ಪ್ರಮುಖರಾದ ಸೋಮಶೇಖರ ಪಾಟೀಲ್ ಬೆಳಗುಂಪಾ, ಚಂದ್ರಶೇಖರ ಕಾಶಿ, ಬಸವರಾಜ ಹೂಗಾರ, ಓಂಕಾರೇಶ್ವರ ರೇಷ್ಮಿ, ಪ್ರಸಾದ ಅವಂಟಿ, ನಾಗರಾಜ ಪರಾಂಡೆ, ವೀರಣ್ಣ ಸುಲ್ತಾನಪುರ, ನಾಗರೆಡ್ಡಿ ಗೋಪಶೇನ್, ಶಿವರಾಜ ಮೈತ್ರಿ, ರೇವಣಸಿದ್ದಪ್ಪ ರೋಣದ, ಬಸವರಾಜ ಪೂಜಾರಿ, ಬಸಯ್ಯಸ್ವಾಮಿ ನಂದಿಕೋಲ ರಾವೂರ, ಬಸವರಾಜ ಪಾಟೀಲ್ ಬಾಗೋಡಿ ಸೇರಿದಂತೆ ಇತರರಿದ್ದರು.
ಮಂಜುನಾಥ ಶಾಸ್ತ್ರೀ ನಿರೂಪಣೆ ಮಾಡಿದರು.