ಇಂಡಿ ತಾಲೂಕಿನಲ್ಲಿ 39 ಮಿ.ಮಿ.ಮಳೆ
ಇಂಡಿ :ಸೆ.4: ಇಂಡಿ ತಾಲೂಕಿನಲ್ಲಿ ಸೋಮವಾರ ಸೆ.2 ರಂದು ತಾಲೂಕಿನಲ್ಲಿ 39 ಮಿ.ಮಿ ಮಳೆಯಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದರೆ.
ಇಂಡಿ 27.5,ನಾದ ಬಿಕೆ 35.2, ಅಗರಖೇಡ 55.2, ಹೋರ್ತಿ 20.8, ಝಳಕಿ 56 ಮೀ.ಮೀ ಮಳೆಯಾಗಿದೆ.
ರವಿವಾರ ಸೆ. 1 ರಂದು ಇಂಡಿ 15, ನಾದ ಬಿಕೆ 8.2, ಅಗರಖೇಡ 24.3, ಹೋರ್ತಿ 9.8 ಮತ್ತು ಝಳಕಿ 17.4 ಮೀ.ಮೀ ಮಳೆ ಯಾಗಿದೆ.
ಮಳೆ ಬೆಳೆಗಳಿಗೆ ಅನುಕೂಲವಾಗಿದ್ದು ಯಾವದೇ ರೀತಿಯ ಹಾನಿಯಾದ ವರದಿ ಇಲ್ಲ ಎಂದು ಏವೂರ ತಿಳಿಸಿದ್ದಾರೆ.