ನಾಳೆ ಕಲಾಮಂಡಳದಲ್ಲಿ ಶಿಕ್ಷಕರ ದಿನಾಚರಣೆ, ಕಲ್ಯಾಣ ರತ್ನ ಪ್ರಶಸ್ತಿ ಪ್ರಧಾನ
ಕಲಬುರಗಿ:ಸೆ.4: ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಕಲಬುರ್ಗಿ ಜಿಲ್ಲಾ ಘಟಕ ವತಿಯಿಂದ ಸೆಪ್ಟೆಂಬರ್ 5ರಂದು ನಗರದ ಕಲಾಮಂಡಳದಲ್ಲಿ ಸಂಜೆ 5-30ಗಂಟೆಗೆ ಶಿಕ್ಷಕ ದಿನಾಚರಣೆ ಮತ್ತು ಕರ್ನಾಟಕ 50ರ ಸಂಭ್ರಮ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕಲ್ಯಾಣರತ್ನ ಪ್ರಶಸ್ತಿ ನೀಡಲಾಗುವುದೆಂದು ಕರವೇ ಕಾವಲು ಪಡೆ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಮಂಜುನಾಥ ನಾಲವಾರಕರ್ ತಿಳಿಸಿದ್ದಾರೆ
ವಿಶ್ವ ಸೇವಾ ಮಿಷನ್ ಅಧ್ಯಕ್ಷರಾದ ಶ್ರೀ ವಿಶ್ವನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು, ಕಲ್ಬುರ್ಗಿ ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಕಾರ್ಯಕ್ರಮ ಉದ್ಘಾಟಿಸುವರು, ಪೂಜ್ಯಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ ಪ್ರಶಸ್ತಿ ಪ್ರದಾನ ಮಾಡಲಿದ್ದು ವಿಧಾನಪರಿಷತ್ ಸದಸ್ಯರಾದ ಶಶಿಲ್ ಜಿ. ನಮೋಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ, ಶಾಸಕರಾದ ಶ್ರೀಮತಿ ಖನಿಜಾ ಫಾತಿಮಾ, ಬಸವರಾಜ ಮತ್ತಿಮುಡ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಡಾ. ಸುರೇಶ್ ಎಲ್.ಶರ್ಮಾ, ನೀಲಕಂಠರಾವ್ ಮೂಲಗೆ , ಡಾ. ಶರಣಬಸಪ್ಪ ಕ್ಯಾತನಾಳ, ಡಾ. ಸುನಿಲ್ ಕುಮಾರ್ ಒಂಟಿ, ಸುರೇಶ್ ಬಡಿಗೇರ್,ಶ್ರೀಮತಿ ಸುಜಾತಾ ಜಂಗಮಶೆಟ್ಟಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ,
ಕರ್ನಾಟಕ 50ರ ಸಂಭ್ರಮ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕಲ್ಯಾಣ ರತ್ನ ಪ್ರಶಸ್ತಿ ಪುರಸ್ಕøತರು ಇಂತಿದೆ, ಡಾ ಸಂತೋಷ್ ಮಂಗಶೆಟ್ಟಿ, ಡಾ. ದೇವಿದಾಸ್ ಎಸ್ ಪಾಟೀಲ್, ಡಾ ಎಸ್ ಎಸ್ ಗುಬ್ಬಿ, ಡಾ. ಪ್ರತಿಭಾ ಎಸ್ ಕಾಮರೆಡ್ಡಿ, ಡಾ. ರಾಜಶೇಖರ್ ಯಕ್ಕೆಳ್ಳಿ, ರವಿಚಂದ್ರ ಗುತ್ತೇದಾರ್ ಶಿವಪ್ಪ ಕಮಾಂಡೋ, ಶ್ರೀಮತಿ ಸುಮಂಗಲಾ, ಬಂದೇ ನವಾಜ್, ಮಮ್ಮದ್ ಮೋಸಿನ, ಎ.ಕೆ. ರಾಮೇಶ್ವರ್ ಮಹಿಪಾಲ್ ರೆಡ್ಡಿ ಮುನ್ನೂರ, ಡಾ. ಶಾಂತಾ ಪಸ್ತಾಪುರ್. ಡಾ. ಶರಣಬಸಪ್ಪ ವಡ್ಡನಕೇರಿ, ಜಿ.ಎಸ್ ಮಾಲಿ ಪಾಟೀಲ್, ಶ್ರೀಮತಿ ಭಾಗಮ್ಮ ಆರ್. ಉದನೂರ್, ಬಾಬುರಾವ್ ಕೋಬಾಳ್, ಮೊಹಮ್ಮದ್ ಮುಕ್ತಾರೋದ್ದಿನ್, ಮನೋಹರ್ ಬಿರನೂರ್ , ಸಚಿನ್ ಪರಹತಬಾದ, ಅವಿನಾಶ್ ಭಾಸ್ಕರ್, ಜಿ ಸತೀಶ್, ಅಂಬಾದಾಸ್ ಸೂರ್ಯಚಂದ್ರ, ಬಸವರಾಜ್ ಎಂ. ರಾವೂರ್, ಅಂಬಾ ರಾಯ ಬೆಳಕೋಟ್ ಇವರೆಲ್ಲರಿಗೆ ಕಲ್ಯಾಣ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು, ಅತ್ಯುತ್ತಮ ಶಿಕ್ಷಕರಾದ ಡಾ. ಗೋಳಪ್ಪ ಎಸ್ ರಾಜಾಪುರ್, ಶ್ರೀಮತಿ ಸುರೇಖಾ ಜೆ ಡೆಂಗಿ, ಗುರುಲಿಂಗಪ್ಪ ದುದನಿಕರ್, ಶ್ರೀಮತಿ ಚನ್ನಮ್ಮ ವಿ.ರೆಡ್ಡಿ, ಶ್ರೀಮತಿ ರೇಣುಕಾ ಜಮಾದಾರ್ ಇವರಿಗೆ ಡಾ. ಎಸ್ ರಾಧಾಕೃಷ್ಣ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.