ನಾಡ ಕಚೇರಿಗೆ ಬರಲು ಹರಸಾಹಸ
ಕಾಳಗಿ : ಸೆ.4:ಪಟ್ಟಣದಲ್ಲಿ ನಾಡ ಕಚೇರಿಗೆ ತೆರಳಲು ಜನರು ಹರಸಾಹಸ ಮಾಡುತ್ತಿದ್ದಾರೆ
ಕಾಳಗಿ ತಾಲೂಕಗೆ ತಮ್ಮ ಕೆಲಸಗಳಿಗೆ ಜಾತಿ ಪ್ರಮಾಣ ಪತ್ರ, ವೃದ್ಧಾಪ್ಯ ವೇತನ ,ಆಧಾರ್ ಕಾರ್ಡ್ ಪಡೆಯಲು ವೃದ್ಧರು, ಚಿಕ್ಕ ಮಕ್ಕಳು, ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಿನಾಲು ನಾಡ ಕಚೇರಿಗೆ ಬರುತ್ತಾರೆ.
ಆದರೆ ರಸ್ತೆ ಇಲ್ಲದೆ ನೀರಿನಲ್ಲಿ ಹೋಗಿ ಜಾರಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರು ಕೂಡಾ ಈ ಕಡೆ ಗಮನ ಹರಿಸದೆ ಇರುವುದು ವಿಪರ್ಯಾಸದ ಸಂಗತಿ ತಹಸೀಲ್ದಾರರು ಈ ಕಡೆ ಗಮನ ಹರಿಸಿ ಕೂಡಲೇ ದಾರಿ ಮಾಡಿ ಕೊಡಬೇಕು ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ
ಈ ಸಂದರ್ಭದಲ್ಲಿ ಕಾಳಗಿ ತಾಲೂಕು ಯುವ ಕಾಂಗ್ರೆಸ್ ಮುಖಂಡರಾದ ಪ್ರದೀಪ್ ಕುಮಾರ್ ಡೋಣ್ಣುರ, ಪುರುಷೋತ್ತಮ ಗುತೇದಾರ,ಪ್ರವೀಣ ನಾಮದಾರ, ಇದ್ದರು.