ಕ್ರೀಡಾ ಮನೋಭಾವದಿಂದ ಸ್ಪರ್ಧೆಯಲ್ಲಿ ಭಾಗವಹಿಸಿ: ಡಾ. ಬೆಳ್ಳಿ
ವಿಜಯಪುರ,ಸೆ.4:ಧಾರವಾಡ ಕೃಷಿ ವಿವಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ಹೊರ ವಲಯದ ಹಿಟ್ಟಿನಹಳ್ಳಿ ಕೃಷಿ ಮಹಾವಿದ್ಯಾಲಯದ ಆಟದ ಮೈದಾನದಲ್ಲಿ ಹಮ್ಮಿಕೊಂಡ ಸಿಬ್ಬಂದಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದ, ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ, ಪ್ರತಿಯೊಬ್ಬರು ಕ್ರೀಡಾ ಮನೋಭಾವನೆಯೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸಬೇಕು, ಸೋಲು ಗೆಲವುಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂದರು.
ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಎಸ್. ಸಜ್ಜನ ಮಾತನಾಡಿ, ಈ ಕ್ರೀಡೆಯಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದು, ಇಲ್ಲಿ ಹುದ್ದೆ ಮುಖ್ಯವಲ್ಲ ಕ್ರೀಡೆÀಯಲ್ಲಿ ಭಾಗವಹಿಸುವುದು ಮುಖ್ಯ. ಕಾರಣ ಎಲ್ಲರೂ ವಿಜೇತರಾಗಿ ಬಹುಮಾನ ಪಡೆಯಲು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ಮಹಾವಿದ್ಯಾಲಯ ಡೀನ್ ಡಾ. ಎ. ಭೀಮಪ್ಪ್ದ ಅವರು ಮಾತನಾಡಿ, ಧಾರವಾಡ ಕೃಷಿ ವಿವಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎಲ್ಲಾ ಸಿಬ್ಬಂದಿಗಳಿಗೆ ಈ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು. ಇದರಿಂದ ಎಲ್ಲರಲ್ಲಿ ಪರಸ್ಪರ ವಿಶ್ವಾಸರ್ಹತೆ, ಕ್ರೀಡಾಸ್ಫೂರ್ತಿ ಮತ್ತು ಆರೋಗ್ಯದಿಂದಿರಲು ಇದು ಸಹಕಾರಿಯಾಗುತ್ತದೆ ಎಂದರು.
ಪುರುಷರಿಗಾಗಿ ಹಮ್ಮಿಕೊಂಡ 800 ಮೀ. ನಡಿಗೆ ಸ್ಪಧರ್Éಯಲ್ಲಿ ಡಾ. ಎಸ್. ಎಸ್. ಕರಭಂಟನಾಳ, ಡಾ. ಜಿ.ಎಸ್. ಯಡಹಳ್ಳಿ, ಡಾ. ಎಮ್. ವಾಯ್. ತೆಗ್ಗಿ ಮತ್ತು ಮಹಿಳೆಯರಲ್ಲಿ ಡಾ. ವಿದ್ಯಾವತಿ ಯಡಹಳ್ಳಿ, ಡಾ. ಸವಿತಾ, ಡಾ. ಸಾವಿತ್ರಿ ಪಾಟೀಲ, ಶಿಕ್ಷಕೇತರರಾದ ರಾಜು ರಾಠೋಡ, ಸಿದ್ದಣ್ಣ ಇಂಡಿ, ಜ್ಞಾನೇಶ್ವರ ಮತ್ತು ಮಹಿಳೆಯರಿಗಾಗಿ ಹಮ್ಮಿಕೊಂಡ 400 ಮೀ. ನಡಿಗೆ ಸ್ಪರ್ದೆಯಲ್ಲಿ ಮಂಗಳಾ ಮಜ್ಜಗಿ, ಜಯಶ್ರೀ ಹೂಗಾರ, ರೇಣುಕಾ ಶಿರಸಗಿ ಕ್ರಮವಾಗಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದರು.
ಕ್ರೀಡಾಕೂಟದಲ್ಲಿ ಡಾ. ಎಸ್. ಬಿ. ಜಗ್ಗಿನವರ, ಡಾ. ಎಮ್. ಎಮ್. ಜಮಾದಾರ, ಡಾ. ಆರ್. ಬಿ. ಜೊಳ್ಳಿ, ಡಾ. ಎಸ್. ಹೆಚ್. ಗುತ್ತರಗಿ, ಡಾ. ಎ. ಪಿ. ಬಿರಾದಾರ, ಡಾ. ಎಸ್. ಎಮ್. ವಸ್ತ್ರದ, ಡಾ. ಅರುಣ ಸತರಡ್ಡಿ, ಡಾ. ಎಸ್. ಹೆಚ್. ಗೋಟ್ಯಾಳ, ಡಾ. ಎಸ್. ಜಿ. ಅಸ್ಕಿ, ಡಾ. ಬಿ. ಟಿ. ನಾಡಗೌಡ, ಡಾ. ಸಿದ್ರಾಮ ಪಾಟೀಲ, ಡಾ. ಕಾಶೀಬಾಯಿ ಖ್ಯಾಡಗಿ, ಡಾ. ಬಾಬರ ಸಾಧನಾ ಆರ್., ಡಾ. ಸುದೀಪಕುಮಾರ, ಡಾ. ಎ. ಕೆ. ಅಥೋನಿ, ಡಾ. ಜಿ. ಎಸ್. ಯಡಹಳ್ಳಿ, ಉಪ ಕೃಷಿ ನಿರ್ದೇಶಕ ಡಾ. ಬಾಲರಾಜ ಬಿರಾದಾರ, ಶಿಕ್ಷಕೇತರ ಸಿಬ್ಬಂದಿಗಳಾದ ಶ್ರೀಶೈಲ ರಾಠೋಡ, ಎಸ್. ಈ. ಬಡಿಗೇರ, ನದಾಫ, ವಾಯ್. ಕೆ. ಭಾವಿಕಟ್ಟಿ ಸೇರಿದಂತೆ ಮಹಾವಿದ್ಯಾಲಯದ ಸಮಸ್ತ ಶಿಕ್ಷಕ, ಶಿಕ್ಷಕೇತರ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.