ಜ್ಞಾನಭಾರತಿ ಶಾಲೆ ವ್ಹಾಲಿಬಾಲ್ ತಾಲೂಕು ಮಟ್ಟಕ್ಕೆ ಆಯ್ಕೆ
ಕೊಲ್ಹಾರ:ಸೆ.4:ತಾಲೂಕಿನ ಕೂಡಗಿ ಗ್ರಾಮದ ಜ್ಞಾನ ಭಾರತಿ ಪ್ರಾಥಮಿಕ ಶಾಲೆಯ ಬಾಲಕೀಯರು ಹಾಗೂ ಬಾಲಕರ ವ್ಹಾಲಿಬಾಲ್ ಹಾಗೂ ಚಕ್ರ ಎಸೆತ,ಗುಂಡು ಎಸೆತ ವಯಕ್ತಿಕ ಆಟೋಟಗಳಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಸೋಮು ಸಾಗರ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದರು.
ತರಬೇತುದಾರ ದೈಹಿಕ ಶಿಕ್ಷಕ ಸುರೇಶ್ ಜಾಧವ್,ಗ್ರಾಮದ ಪ್ರಮುಖರಾದ ಶಫೀಕ್ ಕೊಲ್ಹಾರ,ದಸ್ತಗೀರಸಾಬ ಮೋಪಗಾರ,ಶಾಸಪ್ಪ ಮಾದರ,ಮುಖ್ಯ ಗುರುಮಾತೆ ಸೀಮಾ ಹರಿಕಾಂತ,ಜಗದೀಶ ಸಾಲಳ್ಳಿ,ದೈಹಿಕ ಶಿಕ್ಷಕ ಯಂಡಿಗೇರಿ ಮತ್ತಿತರರು ಉಪಸ್ಥಿತರಿದ್ದರು.