ಎಲ್‍ಐಸಿ 68ನೇ ಸಂಸ್ಥಾಪನಾ ದಿನಾಚರಣೆ
ಕಲಬುರಗಿ,ಸೆ.4-ನಗರದ ಭಾರತೀಯ ಜೀವ ವಿಮಾ ನಿಗಮ ಶಾಖೆ 2ರಲ್ಲಿ ಸೋಮವಾರದಂದು ಎಲ್‍ಐಸಿಯ 68 ನೇ ಸಂಸ್ಥಾಪನಾ ದಿನಾಚರಣೆಯನ್ನು ಶಾಖೆಯ ಹಿರಿಯ ಶಾಖಾ ವ್ಯವಸ್ಥಾಪಕÀ ಜಿ.ರಮೇಶ್ ಅವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.
ಸಂಸ್ಥೆಯು ಸಾಗಿ ಬಂದ ದಾರಿ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ಎಲ್‍ಐಸಿ ಮಹತ್ವದ ಪಾತ್ರದ ಕುರಿತು ವಿವರಿಸಿದರು. ರಾಷ್ಟ್ರದ ಅನೇಕ ಅಭಿವೃದ್ಧಿಯ ಕಾರ್ಯಗಳಲ್ಲಿ ಎಲ್‍ಐಸಿಯ ಪಾತ್ರ ಅಮೋಘವಾಗಿದ್ದು, ನಿರಂತರ 68 ವರ್ಷಗಳು ತನ್ನ ಪಾಲಿಸಿದಾರರಿಗೆ ಉತ್ತಮ ಸೇವೆ, ಕಷ್ಟದ ಸಮಯದಲ್ಲಿ ಆರ್ಥಿಕ ನೆರವು, ಸಾಮಾಜಿಕ ಕಳಕಳಿಯಿಂದ ಜೀವ ರಕ್ಷಣೆ, ಮಕ್ಕಳ ಮದುವೆ, ಶೈಕ್ಷಣಿಕ ಹೀಗೆ ಅನೇಕ ರೀತಿಯಲ್ಲಿ ಎಲ್‍ಐಸಿಯ ಮಹತ್ವದ ಹೆಜ್ಜೆಗಳ ಕುರಿತಾಗಿ ಮಾತನಾಡಿದರು.
30 ಕೋಟಿಗಿಂತ ಅಧಿಕ ಪಾಲಿಸಿದಾರರನ್ನು ಹೊಂದಿದ ದೇಶದ ಹೆಮ್ಮೆ ಏಕೈಕ ಬೃಹತ್ ವಿಮಾ ಸಂಸ್ಥೆ ಎಲ್‍ಐಸಿಯಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಖೆಯ ಸರ್ವ ಸಿಬ್ಬಂದಿಗಳು ಭಾಗಿಯಾಗಿ ಕಾರ್ಯಕ್ರಮಕ್ಕೆ ಶೋಭೆ ತಂದು ಕೊಟ್ಟರು.