ಲಿಂ. ಚನ್ನವೀರ ಶ್ರೀಗಳ ಮೂರ್ತಿ ಪ್ರತಿಷ್ಠಾಪನೆ ನಾಳೆ
ಕಲಬುರಗಿ: ಸೆ.4:ಭವಾನಿನಗರದ ಶ್ರೀ ಗುರು ಚನ್ನವೀರೇಶ್ವರ ವಿರಕ್ತ ಮಠದಲ್ಲಿ ಸೆ.5ರಂದು ಬೆಳಗ್ಗೆ 9 ಗಂಟೆಗೆ ಲಿಂ.ಶ್ರೀ ಗುರು ಚನ್ನವೀರ ಶಿವಯೋಗಿಗಳ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.
ಕಡಗಂಚಿ ಮಠದ ಶ್ರೀ ವೀರಭದ್ರ ಶಿವಾಚಾರ್ಯರು ಹಾಗೂ ಮಠದ ಪೀಠಾಪತಿ ಶ್ರೀ ಗುರುಪಾದಲಿಂಗ ಶಿವಯೋಗಿಗಳ ಬಿವ್ಯ ಸಾನ್ನಿಧ್ಯದಲ್ಲಿ, ಚಿಟಗುಪ್ಪಾದ ಶ್ರೀ ಗುರುಲಿಂಗ ಶಿವಾಚಾರ್ಯರು, ಚಿತ್ತಾಪುರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು, ಹೊನ್ನಕಿರಣಗಿಯ ಶ್ರೀ ಚಂದ್ರಗುಂಡ ಶಿವಾಚಾರ್ಯರು ಪಾಲ್ಗೊಳ್ಳಿದ್ದು, ಶ್ರೀಗುರು ಚನ್ನವಿರೇಶ್ವರ ವೇದ ಜ್ಯೋತಿಷ್ಯ ಪಾಠಶಾಲೆಯಿಂದ ವೈಕ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 11ಕ್ಕೆ ಮುತೈದೆಯರಿಗೆ ಉಡಿ ತುಂಬವ ಕಾರ್ಯಕ್ರಮ ಜರುಗಲಿದೆ. ರಾತ್ರಿ 8.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಗಳಖೋಡದ ಶ್ರೀ ಡಾ.ಮುರುಘರಾಜೇಂದ್ರ ಶಿವಯೋಗಿಳು ಹಾಗೂ ಶ್ರೀ ಗುರುಪಾದಲಿಂಗ ಶಿವಯೋಗಿಗಳ ಸಾನ್ನಿಧ್ಯ ವಹಿಸಲಿದ್ದಾರೆ. ಯಳಸಂಗಿ ಶ್ರೀ ಪರಮಾನಂದ ಸ್ವಾಮೀಜಿ ಸಮ್ಮುಖ ಹಾಗೂ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕಿ ಕನೀಜ್ ಫಾತಿಮಾ ಸೇರಿ ಇತರರು ಭಾಗವಹಿಸಲಿದ್ದಾರೆ.