ಡಿವೈಎಸ್ಪಿ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಶಾಂತಿ ಸಭೆ
ಕಾಳಗಿ:ಸೆ.4: ಯಾವುದೇ ಜಾತಿ-ಭೇದ ಇಲ್ಲದೇ ಶಾಂತಿ ಸೌಹಾರ್ದತೆಯಿಂದ ಗಣೇಶ ಹಬ್ಬವನ್ನು ಆಚರಿಸಲು ಬದ್ಧ ಎಂದು ಸಾರ್ವಜನಿಕರು ಭರವಸೆ ನೀಡಿದರು.
ಗಣೇಶ ಹಬ್ಬ ಹಾಗೂ ಈದ್ – ಮಿಲಾದ್ ಹಬ್ಬದ ಅಂಗವಾಗಿ ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶಾಂತಿ ಪಾಲನಾ ಸಭೆಯಲ್ಲಿ ಎಲ್ಲಾ ಧರ್ಮದವರು ಸೇರಿ ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಆಚರಣೆ ಮಾಡುತ್ತೇವೆ ಎಂದು ತಿಳಿಸಿದರು.
ಶಹಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಮಾತನಾಡಿ, ಸಾಂಪ್ರಾದಾಯಿಕವಾಗಿ ಗಣಪತಿ ಹಬ್ಬ ಬೇರೆಲ್ಲಾ ಹಬ್ಬಗಳಿಗಿಂತ ದೊಡ್ಡ ಹಬ್ಬವಾಗಿದ್ದು, ಎಲ್ಲರೂ ಸೇರಿ ಸಂತೋಷ, ಸಂಭ್ರಮ ಹಾಗೂ ಭಕ್ತಿಪೂರ್ವಕವಾಗಿ ಆಚರಿಸುವ ಹಬ್ಬವಾಗಿದೆ. ಕಳೆದ ಬಾರಿ ಗಣಪತಿ ಪ್ರತಿಷ್ಠಾಪಿಸಿ ಯಾವುದೇ ತೊಂದರೆಯಾಗದಂತೆ ಸುಗಮವಾಗಿ ಹಬ್ಬ ಆಚರಿಸಲಾಗಿತ್ತು. ಅಲ್ಲದೆ ಈ ಬಾರಿ ಸರ್ಕಾರದ ನಿರ್ದೇಶನದನ್ವಯ ಪಿ.ಒ.ಪಿ ಗಣೇಶಮೂರ್ತಿ ಬಳಸಲು ಅವಕಾಶವಿಲ್ಲ. ಪರಿಸರಕ್ಕೆ ಪೂರಕವಾಗಿರುವ ಜೇಡಿಮಣ್ಣಿನಿಂದ ತಯಾರಿಸಿದ ಮೂರ್ತಿಯನ್ನೆ ಪ್ರತಿಷ್ಠಾಪಿಸಬೇಕಾಗಿದೆ ಎಂದರು.
ಭಕ್ತಿ ಸಂಕೇತವಾಗಿ ಆಚರಿಸುವ ಗೌರಿಗಣೇಶ-ಈದಮೀಲಾದ್ ಹಬ್ಬಗಳು ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು. ಕಾಲ ಕಾಲಕ್ಕೆ ಪೆÇಲೀಸ್ ಇಲಾಖೆ ನೀಡುವ ಸಲಹೆ, ಸೂಚನೆ, ಆದೇಶ ಪಾಲಿಸುವ ಮೂಲಕ ಪೆÇಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈದ್ ಮಿಲಾದ್ ಆಚರಣೆಯಲ್ಲಿ ಮುಸ್ಲಿಮರು ಶಾಂತಿ, ಸೌಹಾರ್ದತೆಯನ್ನು ಕಾಪಾಡಿಕೊಂಡು ಹೊಗಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಆಗದಂತೆ ಹಿರಿಯರು ಜವಾಬ್ದಾರಿ ತೆಗೆದುಕೊಳ್ಳಬೇಕು. ಯಾವುದಾದರೂ ಸಣ್ಣ-ಪುಟ್ಟ ಘಟನೆ ನಡೆದರೂ ಪೆÇಲೀಸರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಸಿಪಿಐ ಜಗದೇವಪ್ಪ ಪಾಳ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವವರು, ಕಡ್ಡಾಯವಾಗಿ ಪಟ್ಟಣ ಪಂಚಾಯತ, ಪೆÇಲೀಸ್, ಜೆಸ್ಕಾಂ, ಕಂದಾಯ ಇಲಾಖೆ, ಸ್ಥಳೀಯ ಗ್ರಾಪಂ ಅನುಮತಿ ಪಡೆಯಬೇಕು. ಗಣೇಶ ಪ್ರತಿಷ್ಠಾಪನೆ ಪರವಾನಿಗೆಗಾಗಿ ಪಪಂ. ಕಛೇರಿಯಲ್ಲಿ ಏಕಗವಾಕ್ಷಿ ಕೇಂದ್ರ ತೆಗೆಯಲಾಗುತ್ತದೆ. ಎಲ್ಲಾ ಗಣೇಶ ಮಂಡಳಿಯವರಿಗೆ ಒಂದೇ ಸೂರಿನಡಿ ಪರವಾನಿಗೆ ನೀಡಲಾಗುವುದು. ಶಾಂತಿ ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು. ಯಾವುದೇ ಅವಘಡಗಳು ಸಂಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪಪಂ. ಮುಖ್ಯಾಧಿಕಾರಿ ಪಂಕಜಾ ಎ, ಉಪ ತಹಶಿಲ್ದಾರ ಮಾಣಿಕ್ ಘತ್ತರಗಿ, ಜೆಸ್ಕಾಂ ಎಇಇ ಇಲಿಯಾಸ್ ಅಹ್ಮದ್, ಪಿಎಸ್‍ಐ ತಿಮ್ಮಯ್ಯ ಬಿ.ಕೆ, ಮುಖಂಡರಾದ ರಾಘವೇಂದ್ರ ಗುತ್ತೇದಾರ, ಶಂಕರ ಹೇರೂರ, ಗೌರಿಶಂಕರ ಗುತ್ತೇದಾರ, ರೇವಣಸಿದ್ದ ಕಟ್ಟಿಮನಿ, ಚಂದ್ರಕಾಂತ ಜಾಧವ್, ಜಿಯಾವುದ್ದಿನ ಸೌದಾಗಾರ, ದತ್ತು ಗುತ್ತೇದಾರ, ಚಿತ್ರಶೇಖರ ದಂಡೋತಿ, ಶ್ರೀಮಂತ ಮೆಳಕುಂದಿ, ಆರೀಫ್ ಬಿಜಾಪುರ ಮಾತನಾಡಿದರು.
ಮುಖಂಡರಾದ ಜಗನ್ನಾಥ ಚಂದನಕೇರಿ, ರವಿದಾಸ ಪತಂಗೆ, ಕಾಳಶೆಟ್ಟಿ ಪಡಶೆಟ್ಟಿ, ಶೇಖರ ಮಾನಶೆಟ್ಟಿ, ರೇವಣಸಿದ್ದ ಕಲಶೆಟ್ಟಿ, ಶಿವಕುಮಾರ್ ಚಿಂತಕೊಟಿ, ಸುನೀಲ್ ರಾಜಾಪುರ, ಸಾದಿಕಮಿಯ್ಯ ಗಾಡವಾನ, ಪ್ರಭು ಡೊಣ್ಣೂರ, ಪುರುಷೋತ್ತಮ ಗುತ್ತೇದಾರ, ಕಾಳಶೆಟ್ಟಿ ಕೊಯಿ, ರಾಜಕುಮಾರ ಗುತ್ತೇದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.