ಸರ್ಕಾರಿ ಪದವಿ ಪೂರ್ವ  ಕಾಲೇಜಿನಲ್ಲಿ ‘ಅರಿವಿನ ಪಯಣ’ ಕಾರ್ಯಕ್ರಮಕ್ಕೆ ಚಾಲನೆ
ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ4:  ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆ ಇಟ್ಟು ಕೆಲಸ ಮಾಡುತ್ತಿರುವ ಮಹಿಳಾ ಹಾಗೂ ಸಮಾನ ಮನಸ್ಕ ಸಂಘಟನೆಗಳು ಒಗ್ಗೂಡಿ “ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ” ಹುಟ್ಟುಹಾಕಿದ ಪರಿಣಾಮ ಮಹಿಳೆ ಮುಖ್ಯವಾಗಿ ಯುವತಿಯರಿಗೆ ಮಹಿಳಾ ದೌರ್ಜನ್ಯ ಕುರಿತು ಅರಿವಿನ ಪಯಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಚಿತ್ತವಾಡಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಹನುಮಕ್ಕ ಚಾಲನೆ ನೀಡಿ ಮಾತನಾಡಿದರು.ಲೈಂಗಿಕತೆಯ ಮಹತ್ವವನ್ನು ಅರಿಯುವ ಮೂಲಕ ಯುವಜನತೆ ಜಾಗರೂಕತೆಯಿಂದ ವರ್ತಿಸಬೇಕಾಗಿದೆ, ಸಮಾಜದ  ಮಹಿಳಾಪರ ಮನಸುಗಳು  ಸಂಘಟನೆಗಳ ಜಾಲ. ಮಹಿಳೆಯರ ಮೇಲಾಗುವ ಎಲ್ಲ ತರಹದ ಹಿಂಸೆ ದೌರ್ಜನ್ಯಗಳಿಗೆ ಒಗ್ಗಟ್ಟಿನ ಪ್ರತಿರೋಧ ಒಡ್ಡುವ ಹಾಗೂ ಆರೋಗ್ಯಕರ ಸಮಸಮಾಜವನ್ನು ಕಟ್ಟುವ ಆಶಯಕ್ಕೆ ಧ್ವನಿಯಾಗಬೇಕಾಗಿದೆ ಎಂದರು. ಸದ್ಯ ಯುವತಿಯರ ಮನಸ್ಥಿತಿಯ ಬಗ್ಗೆ ಮಾತನಾಡುವ ಮೂಲಕ ನಮ್ಮ ನಡುವಳಿಕೆಗಳು ಸಹ ಇಂದಿನ ದೌರ್ಜನ್ಯಕ್ಕೆ ಕಾರಣವಾಗಿದೆ ಎಂಬುದನ್ನು ಉದಾಹರಣೆಯೊಂದಿಗೆ ತಿಳಿಸಿದರು.
ಮುಖ್ಯ ಅತಿಥಿಯಾಗಿ ಅಜೀಮ್ ಪ್ರೇಮಜಿ ಫೌಂಡೇಶನ್ ನ ಅಧಿಕಾರಿ ಪುನೀತ್ ಎಸ್  ಮಾತನಾಡಿ ಸಂವಿಧಾನದ ಮಹತ್ವ ಸಂವಿಧಾನದಲ್ಲಿರುವ ನಮ್ಮ ಹಕ್ಕಿನಿಂದ ನಾವೆಲ್ಲರೂ ಇವತ್ತು ಜೀವಿಸುತ್ತಿದ್ದೇವೆ ಎಂದು ಮಕ್ಕಳಿಗ ಅರ್ಥಪೂರ್ಣವಾಗಿ ಸಂವಿಧಾನ ಕುರಿತು ಮತ್ತು ಮಹಿಳಾ ಇತಿಹಾಸದ ಕುರಿತು ಮಾತಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ನಾಗರಾಜ್ ಹವಲ್ದಾರ್ ಪ್ರಾಂಶುಪಾಲರು ಹಾಗೂ ನೋಡಲ್ ಅಧಿಕಾರಿಯೂ ಆಗಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರು ಹೆಚ್ಚಾಗಿರುವ ನಮ್ಮ ಕಾಲೇಜು ಅಯ್ಕೆ ಮಾಡಿರುವುದು ಸೂಕ್ತ ಈ ಯುವತಿಯರು ಸಮಾಜದಲ್ಲಿ ಅರಿವು ಮೂಡುಸಲು ಸಹಕಾರಿಯಾಗಲಿದೆ ಎಂದರು.