ಹದಗೆಟ್ಟ ಆಳಂದ ಮುಖ್ಯ ರಸ್ತೆ ಜನಪ್ರತಿನಿಧಿ,ಅಧಿಕಾರಿಗಳ ನಿರ್ಲಕ್ಷ್ಯ
ಆಳಂದ :ಸೆ.4:ಪಟ್ಟಣದ ಮುಖ್ಯ ರಸ್ತೆ ಹಳೆಯ RTO ದಿಂದ ಬಸ್ ನಿಲ್ದಾಣದವರೆಗೆ ಮೆನ್ ರೊಡ್ ಕೆಟ್ಟುಹೋಗಿದೆ ಸಾರ್ವಜನಿಕರ ಸಂಚಾರಕ್ಕೆ ತುಂಬಾ ಅನಾನುಕೂಲವಾಗಿದ್ದು ಮಳೆ ಬಂದಾಗ ಗಾರಿಯಲ್ಲಿ ನೀರು ತುಂಬಿ ಬೈಕ್ ಸವಾರರು ಗಾರಿಯಲ್ಲಿ ಬಿದ್ದ ಘಟನೆಗಳು ಬಹಳಷ್ಟು ನಡೆದಿವೆ.
ವಯೋವೃದ್ದರಿಗೆ ಸಂಚಾರ ಮಾಡುವುದು ತುಂಬಾ ಕಷ್ಟಕರವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮುಖ್ಯಮಂತ್ರಿ, ಜಿಲ್ಲಾಧಿಕಾರಿಗಳು ಬಂದಾಗ ಗಾರಿಗಳನ್ನು ಖಟಕ್ ಹಾಕಿ ಮುಚ್ಚುತ್ತಾರೆ ಎರಡು ಮೂರು ದಿನಗಳಲ್ಲಿ ಖಟಕ್ ಕೊಚ್ಚಿಕೊಂಡು ಹೋಗಿ ಮತ್ತೆ ರಸ್ತೆ ಕೆಟ್ಟುಹೋಗುತ್ತದೆ ಶಾಶ್ವತವಾಗಿಪರಿಹಾರ ಎಂದು ದೊರೆಯುತ್ತದೆ ಎಂಬುದು ಜನರ ಪ್ರಶ್ನೆಯಾಗಿದೆ ಈ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಮುಖ್ಯಮಂತ್ರಿಗಳ ಸಲಹೆಗಾರರಾದ ಬಿ.ಆರ್. ಪಾಟೀಲ ಶಾಸಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೆ ರಸ್ತೆ ದುರಸ್ಥಿ ಮಾಡಿ ಶಾಶ್ವತ ಪರಿಹಾರ ನೀಡಬೇಕೆಂದು ಜನರು ಆಕ್ರೋಶ ವ್ಯಕ್ತಪಡಿಸಿದರು.