ಅಲ್ಲೂರ(ಕೆ)ದಲ್ಲಿ ನೂರಾ ಒಂದು ಎತ್ತಿನ ಪೂಜೆ
ಚಿತ್ತಾಪೂರ:ಸೆ.4:ತಾಲೂಕಿನ ಅಲ್ಲೂರ(ಕೆ)ದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಬೆನಕನ ಅಮಾವಾಸೆ ನಿಮಿತ್ಯ ಗ್ರಾಮದಲ್ಲಿ ನೂರಾಒಂದು ಎತ್ತುಗಳ ವಿಶೇಷ ಪೂಜೆ ನಡೆಯಿತು.
ಸುಮಾರು 200 ವರ್ಷಗಳ ಹಿಂದೆ ಗ್ರಾಮದಲ್ಲಿ ಮನುಷ್ಯರು ಮತ್ತು ಎತ್ತುಗಳು ಆನಾರೊಗ್ಯದಿಂದ ನರಳುತ್ತಿದ್ದರು. ಆಗ ದೇವರ ಮೊರೆ ಹೊದಾಗ 101 ಎತ್ತುಗಳ ಪೂಜೆಯನ್ನು ಮಾಡಬೇಕೆಂದು ಹೇಳಿದ ಕಾರಣ ಪ್ರತಿ ವರ್ಷ 101 ಎತ್ತುಗಳ ಪೂಜೆಯನ್ನು ಮಾಡಿದ್ದರಿಂದ ಎತ್ತುಗಳು ಮತ್ತು ಮನುಷ್ಯರು ಆರೊಗ್ಯವಾಗಿರುವ ನಂಬಿಕೆಯ ಮೇಲೆ ಇಂದಿಗೂ ಅಲ್ಲೂರ(ಕೆ) ಗ್ರಾಮದಲ್ಲಿ ಎತ್ತುಗಳ ಪೂಜೆಯನ್ನು ಮಾಡಲಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.
ಬೆಳಿಗ್ಗೆ 11 ಗಂಟೆಗೆ ಗ್ರಾಮದ ಹಿರಿಯರಾದ ಮಹಾಂತೇಯ ಸ್ವಾಮಿ, ಶಿವಾನಂದಯ್ಯ ಸ್ವಾಮಿ, ಮಹೇಶ ಗೌಡ ದಳಪತಿ, ರವಿಗೌಡ, ರವಿ ಠಾಣಗುಂದಿ, ಶರಣಗೌಡ ಪೆÇಲಿಸ್ ಪಾಟೀಲ್ ಸೇರಿದಂತೆ ಹಲವರು ಮಹಾಂತೇಶ್ವರ ಮಠದ ಗದ್ದುಗೆಗ ಪೂಜೆಯನ್ನು ಸಲ್ಲಿಸಿದ ನಂತರ ಹಲುಗೆ, ಬಾಜಿ ನುಡಿಸುತ್ತಾ ಮಕ್ಕಳ ಕೊಲಾಟದ ಮೂಲಕ ಗ್ರಾಮದಲ್ಲಿ ಮೆರವಣೆಗೆ ನಡೆಸಿ ಗಂಗಮ್ಮ ತಾಯಿಗೆ ಪೂಜೆ ಸಲ್ಲಿಸಿದರು.
ಇಂದಿನ ದಿನವನ್ನು ಗ್ರಾಮದ ಎಲ್ಲಾರೂ ಕೂಡಿಕೊಂಡು ಒಟ್ಟಾಗಿ ಆಚರಿಸುವದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ಇರುತ್ತದೆ, ಈ ಸಂಬ್ರಮವನ್ನು ನೋಡಲು ಸುತ್ತ ಮುತ್ತಲಿನ ಗ್ರಾಮಸ್ಥರು ಬಂದು ಕಾರ್ಯಕ್ರಮವನ್ನು ನೊಡಿ ಆನಂದಿಸುತ್ತಾರೆ ಎಂದು ಗ್ರಾಮದ ಬಸವರಾಜ ತಳವಾರ ಹೇಳುತ್ತಾರೆ.