ಲಕ್ಷ್ಮೇಶ್ವರ ಪುರಸಭೆ ಸಾಮಾನ್ಯ ಸಭೆ
ಲಕ್ಷ್ಮೇಶ್ವರ,ಆ.4:ಪಟ್ಟಣದ ಪುರಸಭೆಯ ಸಾಮಾನ್ಯ ಸಭೆ ಸೋಮವಾರ ಯಲ್ಲವ್ವ ದುರ್ಗಣ್ಣವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.
ಸಭೆಯಲ್ಲಿ ಒಟ್ಟು ಮೂರು ವಿಷಯಗಳು ಒಂದು ಲಕ್ಷ್ಮೇಶ್ವರ್ ಪಟ್ಟಣಕ್ಕೆ ಸರಬರಾಜು ಆಗುವ ತುಂಗಭದ್ರಾ ನದಿಯ ನೀರಿನ ಮುಖ್ಯ ಕೊಳವೆಯ ದುರಸ್ತಿಯಾಗಿದ್ದು ಹೊಸ ಕೊಳವೆ ಮಾರ್ಗ ಅಳವಡಿಸುವುದು ಎರಡು 2024 25 ನೇ ಸಾಲಿನ 15ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಲ್ಲಿ ಮುಕ್ತ ನಿಧಿಯಲ್ಲಿ 76 ಲಕ್ಷ ರೂಪಾಯಿಗಳ ಎರಡು ಪ್ಯಾಕೇಜ್ ರಸ್ತೆ ಕಾಮಗಾರಿಗಳಿಗೆ ಟೆಂಡರ್ ಕರೆದಿದ್ದು ಸದರ ಟೆಂಡರನ್ನು ರದ್ದುಪಡಿಸಿ ಹೊಸದಾಗಿ ಪರಿಷ್ಕೃತ ಕ್ರಿಯಾಯೋಜನೆ ತಯಾರಿಸುವುದು ಮೂರನೇದು ಬಜಾರದಲ್ಲಿರುವ ಸರ್ಕಾರಿ ಚಾವಡಿ ಚಾಗೆಯನ್ನು ಪುರಸಭೆಗೆ ಮಂಜೂರು ಮಾಡುವ ಕುರಿತು ಚರ್ಚಿಸುವ ವಿಷಯಗಳಾಗಿದ್ದವು.
ಮೊದಲನೇ ವಿಷಯಕ್ಕೆ ಸಂಬಂಧಪಟ್ಟಂತೆ ಕೆಯು ಡಬ್ಲ್ಯುಎಸ್ನ ಕಾರ್ಯನಿರ್ವಾಹಕ ಅಭಿಯಂತರಾದ ಹೊಸಮನಿ ಅವರು 36 ಕೋಟಿಗಳ ಹೊಸ ಪೈಪ್ ಲೈನ್ ಗೆ ಡಿಪಿಆರ್ ತಯಾರಿಸಲು ಸರ್ಕಾರದಿಂದ ಅನುಮೋದನೆ ಬಂದಿದೆ ಎಂದರು.
ಎರಡನೇ ವಿಷಯ ಸದಸ್ಯರ ಮಧ್ಯದ ಗೊಂದಲಕ್ಕೆ ಕಾರಣವಾಗಿ ಪರ ಮತ್ತು ವಿರೋಧವಾದ ಅಭಿಪ್ರಾಯ ವ್ಯಕ್ತವಾಗಿ ಆಡಳಿತಾ ರೂಢ ಪಕ್ಷದವರು ರದ್ದುಪಡಿಸುವಂತೆ ಲಿಖಿತ ಹೇಳಿಕೆಯನ್ನು ನೀಡಿದರೆ ರದ್ದುಪಡಿಸಬಾರದು ಎಂದು ವಿರೋಧ ಪಕ್ಷದ ಸದಸ್ಯರು ಲಿಖಿತ ಹೇಳಿಕೆಯನ್ನು ಸಭಾಧ್ಯಕ್ಷರಿಗೆ ನೀಡಿದರು.
ಚರ್ಚೆ ಗಂಭೀರತೆಯನ್ನು ಪಡೆದು ಸದಸ್ಯರು ಪರಸ್ಪರ ಕಿತ್ತಾಡಿಕೊಂಡು ಏಕವಚನದಲ್ಲಿ ಮಾತನಾಡಿದ್ದು ಇಡೀ ಸಭೆ ಗೊಂದಲದ ಗೂಡಾಗಿತ್ತು.
ಚರ್ಚೆಯಲ್ಲಿ ರಾಜು ಕುಂಬಿ ಬಸವರಾಜ್ ಓದೋನವರ ಮಹೇಶ ಹೊಗೆ ಸೊಪ್ಪಿನ ರಾಮು ಗಡದವರ ಸಿಕಂದರ್ ಕಣಕೆ ಮುಸ್ತಾಖ್ಹಮದ್ ಶಿರಹಟ್ಟಿ ಪೂರ್ಣಿಮಾ ಪಾಟೀಲ್ ಪೂಜಾ ಕರಾಟೆ ವಾಣಿ ಹತ್ತಿ ಜಯಕ್ಕ ಕಳ್ಳಿ, ವಿಜಯ ಕರಡಿ ಸಾಹೇಬ್ ಜಾನ್ ಹವಾಲ್ದಾರ ಮಹದೇವಪ್ಪ ಅಣ್ಣಿಗೇರಿ, ಅಶ್ವಿನಿ ಅಂಕಲಕೋಟಿ, ಪ್ರವೀಣ್ ಬಾಳಿಕಾಯಿ ಪಾಲ್ಗೊಂಡಿದ್ದರು.
ಸಭೆ, ವೇದಿಕೆ ಮೇಲೆ ಉಪಾಧ್ಯಕ್ಷ ಫಿರ್ದೂಷ ಆಡೂರು ಮುಖ್ಯ ಅಧಿಕಾರಿ ಮಹೇಶ ಹಡಪದ ಅಭಿಯಂತರ ವೀರೇಂದ್ರ ಸಿಂಗ್ ಕಾಟೆವಾಲೆ ಇದ್ದರು.
ಕಲಾಪದಲ್ಲಿ ಕಂದಾಯ ಅಧಿಕಾರಿ ಶಿವಾನಂದ ಅಜ್ಜಣ್ಣವರ ವ್ಯವಸ್ಥಾಪಕಿ ಮಂಜುಳಾ ಹೂಗಾರ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್ ಮುದುಗಲ್ಲ ಹನುಮಂತ ನಂದಣ್ಣನವರ ಇದ್ದರು.