ಬೃಹತ್ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ
ಹುಬ್ಬಳ್ಳಿ,ಸೆ.4: ಖ್ಯಾತ ಉದ್ಯಮಿ ಎಂ.ಡಬ್ಲ್ಯೂ.ಬಿ. ಸಮೂಹ ಸಂಸ್ಥೆಗಳ ಮಾಲೀಕರು, ಪತಂಜಲಿ ವೆಲ್ ನೆಸ್, ಸಂಚಾಲಕರಾದ ರಮೇಶ ಜಿ ಬಾಫನಾ ಅವರ 60ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಒWಃ ಮುಖ್ಯ ಕಚೇರಿಯಲ್ಲಿ ಎಂ.ಡಬ್ಲುಬಿ ಚಾರಿಟೇಬಲ್ ಟ್ರಸ್ಟ್ ಹುಬ್ಬಳ್ಳಿ ಹಾಗೂ ರಾಷ್ಟ್ರೋತ್ತಾನ ರಕ್ತ ಕೇಂದ್ರ ಹುಬ್ಬಳ್ಳಿ ಇವರ ಸಹಯೋಹದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬಿಚ್ಚಗಲ್ ವಿರಕ್ತ ಮಠದ ಪೀಠಾಧಿಪತಿಗಳು, ಎರಡೆತ್ತಿನ ಮಠ ಮಹಾಸ್ವಾಮಿಗಳು’ ಭಾವರಲಾಲ ಜಿ ಆರ್ಯ ಕರ್ನಾಟಕ ರಾಜ್ಯ ಪ್ರಭಾರಿ ಪತಂಜಲಿ ಯೋಗಪೀಠ ಹಾಗೂ ಇಸ್ಕಾನ್ ಸಂಸ್ಥೆ ಧಾರವಾಡದ ಅಕ್ಷೋಭ್ಯದಾಸ್ ಸಾನಿಧ್ಯ ವಹಿಸಿದ್ದರು.
ಅತಿಥಿಗಳಗಿ ರಾಷ್ಟ್ರೋತ್ತಾನ ರಕ್ತ ಕೇಂದ್ರದ ದತ್ತಮೂರ್ತಿ ಕುಲಕರ್ಣಿ, ವಿನಯ ಎ.ಸಿ.ಪಿ. ಟ್ರಾಫಿಕ್ ಆಗಮಿಸಿದ್ದರು. ಎಂ.ಡಬ್ಲ್ಯೂ.ಬಿ. ಸಮೂಹದ ಚೇರ್ಮನ್ ಉಕ್ಚಂದ್ ಬಾಫ್ನ, ನಿರ್ದೇಶಕರು ಗೌತಮ್ ಬಾಫ್ನ, ರಾಕೇಶ್ ಬಾಫ್ನ, ಮುಕೇಶ್ ಬಾಫ್ನ, ಹಿತೇಶ್ ಬಾಫ್ನ, ನಿಖಿಲ್ ಮೆಹ್ತಾ, ರಿಷಬ್ ಬಾಫ್ನ, ಯುವರಾಜ್ ಬಾಫ್ನ ಸುಭಾಷ್ ಸಿಂಗ್ ಅಜ್ಜಪ್ಪ ಬೆಂದಿಗೇರಿ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 60ಕ್ಕೂ ಹೆಚ್ಚು ಆಸಕ್ತರು ಉತ್ಸಾಹ ಮತ್ತು ಸಾಮಾಜಿಕ ಕಳಕಳಿಯಿಂದ ರಕ್ತದಾನ ಮಾಡಿದರು ಸುಮಾರು 100ಕ್ಕೂ ಹೆಚ್ಚು ಹಾಗೂ ಎಂ.ಡಬ್ಲ್ಯೂ.ಬಿ. ಸಮೂಹ ದ ಎಲ್ಲ ಸಿಬ್ಬಂದಿ ಬಾಂದವರಿಗೂ ಸಹಿತ ಆರೋಗ್ಯ ತಪಾಸಣೆ ನಡೆಸಲಾಯಿತು.