ದೇವದಾಸಿ ಮಹಿಳೆಯರ ಬೇಡಿಕೆಗಳು ಈಡೇರಿಸುವಂತೆ ಆಗ್ರಹ
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.04: ದೇವದಾಸಿ ಮಹಿಳೆಯರ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘದ ಬಳ್ಳಾರಿ ಜಿಲ್ಲಾ ಸಮಿತಿಯು ಇಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು. ಮನವಿಯಲ್ಲಿ ಪ್ರಮುಖ ಹಕ್ಕೊತಾಯಗಳನ್ನು ಮಾಡಲಾಗಿದೆ.
ಹಕ್ಕೊತಾಯಗಳು
ಕಳೆದ 2024ರ ರಾಜ್ಯ ಬಜೆಟ್ ನಲ್ಲಿ ದೇವದಾಸಿ ಮಹಿಳೆಯರಿಗೆ ಹೆಚ್ಚಳ ಮಾಡಿದ್ದು ಸೇರಿ ಇದುವರೆಗೂ ಮಾಸಿಕ ಪಿಂಚಣಿ ನೀಡುವುದು ಕುಟುಂಬಗಳ ನಿರ್ವಹಣೆಗೆ ತೊಂದರೆಯಾಗಿದೆ ಈ ಕೂಡಲೇ ಮಾಸಿಕ ಪಿಂಚಣಿ ಬಾಕಿ ಸಮೇತವಾಗಿ ಬಿಡುಗಡೆ ಮಾಡಬೇಕು, ಪ್ರತಿ ತಾಲೂಕಿನಲ್ಲಿ ದೇವದಾಸಿ ಮಹಿಳೆಯರು 50 ರಿಂದ 60 ವರ್ಷ ವಯಸ್ಸಾಗಿದ್ದು ದೇವದಾಸಿ ಮಹಿಳೆಯರು( N P C I )ಮಾಡಿಸುವಾಗ ಕೆಲವು ದೇವದಾಸಿ ಮಹಿಳೆಯರಿಗೆ ಬ್ಯಾಂಕಿನಲ್ಲಿ ಹೆಬ್ಬೆಟ್ಟಿನ ಗುರುತು ಬರುತ್ತಿಲ್ಲ ಎಂದು ಹೇಳುತ್ತಾರೆ
2020 ರಿಂದ ಬರದೇ ಇರುವ ಪೆನ್ಷನ್  ದೇವದಾಸಿ ಮಹಿಳೆಯರಿಗೆ ನಾಲ್ಕು ವರ್ಷದ ಪೆನ್ಷನ್ ಜಮಾ ಮಾಡಬೇಕು, ಜಿಲ್ಲಾ ಖನಿಜ ನಿಧಿ ಹಣದಿಂದ ದೇವದಾಸಿ ಮಹಿಳೆಯರಿಗೆ ನಿವೇಶನಕ್ಕಾಗಿ ಭೂಮಿಯನ್ನು ಖರೀದಿ ಮಾಡಬೇಕು ದೇವದಾಸಿ ಮಹಿಳೆಯರಿಗೆ 80×80 ಜಾಗ ನೀಡಿ 6 ಲಕ್ಷ ರೂಪಾಯಿ ವರೆಗೂ ಮನೆಯನ್ನು ಕಟ್ಟುವುದಕ್ಕೆ ನೀಡಬೇಕು ಉಳಿದ ಜಾಗದಲ್ಲೇ ಹೈನುಗಾರಿಕೆ ಇತರೆ ಜೀವನ ಉಪಾಯಕ್ಕಾಗಿ ಐದು ಲಕ್ಷ ಸಹಾಯಧನ ನೀಡಬೇಕು 2017 ರಿಂದ ದೇವದಾಸಿ ಮಹಿಳೆಯರು ಮನೆಗಳನ್ನು ಕಟ್ಟಿಕೊಳ್ಳುವುದಕ್ಕೆ ಅರ್ಜಿ ಹಾಕಿದ್ದು ಆದರೆ ಮನೆಗಳು ಬಂದಿಲ್ಲ ಮನೆಗಳನ್ನು ಕಟ್ಟಿಕೊಳ್ಳುವುದಕ್ಕೆ ಆದೇಶ ನೀಡಬೇಕು 4.ಸರ್ವೆ ಪಟ್ಟಿಯಿಂದ ಕೈ ಬಿಟ್ಟ ದೇವದಾಸಿ ಮಹಿಳೆಯರನ್ನು ಸರ್ವೆ ಮಾಡಬೇಕು ಸರ್ವೆ ಮಾಡುವ ಸಂದರ್ಭದಲ್ಲಿ ವಯಸ್ಸಿನ ಮಿತಿಯನ್ನು ತೆಗೆದು ಹಾಕಬೇಕು
2020 ರಲ್ಲಿ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಸರ್ವೆ ನಂಬರು 378 ರಲ್ಲಿ 6 ಎಕರೆ ಭೂಮಿ ನೀಡಿದ್ದು 3.10 ಹದ್ದು ಬಸ್ ಆಗಿದೆ ಆದರೆ ದೇವದಾಸಿ ಮಹಿಳೆಯರಿಗೆ ನಿವೇಶನ ಹಂಚಿಕೆ ಆಗಿರುವುದಿಲ್ಲ ಕೂಡಲೇ ನಿವೇಶನ ಹಂಚಿಕೆ ಮಾಡಬೇಕು, ಮಾಜಿ ದೇವದಾಸಿ ಮಹಿಳೆಯರು ಸರ್ಕಾರದ ಪಟ್ಟಿಯಲ್ಲಿರುವ ಎಲ್ಲಾ ದೇವದಾಸಿ ಮಹಿಳೆಯರಿಗೆ ದೃಢೀಕರಣ ಪತ್ರ ನೀಡಬೇಕು ಸಂಡೂರು ತಾಲೂಕಿನ, .2019 —20 ನೇ ಸಾಲಿನ ಆದಾಯ ಉತ್ಪನ್ನ ಚಟುವಟಿಕೆ ಅಡಿಯಲ್ಲಿ ಸಾಲ ಮತ್ತು ಸಹಾಯಧನ ಫಲಾನುಭವಿಗಳು ಸಂಡೂರು ತಾಲೂಕಿನ ನಾಲ್ಕು ದೇವದಾಸಿ ಮಹಿಳೆಯರಿಗೆ 1 ಲಕ್ಷ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿರುವುದೆಲ್ಲ ಇದನ್ನು ಪರಿಶೀಲಿಸಿ ತನಿಖೆ ನಡೆಸಬೇಕು, .
ಮಾಜಿ ದೇವದಾಸಿ ಮಹಿಳೆಯರು ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಜಿ ಹಾಕಿದ್ದು ಇಲ್ಲಿವರೆಗೂ ಬೋರ್ವೆಲ್ ಹಾಕಿಲ್ಲ ಕೂಡಲೇ ಬೋರ್ವೆಲ್ ಹಾಕಬೇಕು, ಮಾಜಿ ದೇವದಾಸಿ ಮಹಿಳೆಯರಿಗೆ ಸಾಲ ಸೌಲಭ್ಯ ಕನಿಷ್ಠ 5 ಲಕ್ಷ ವರೆಗೆ ಸಾಲ ನೀಡಬೇಕು ದೇವದಾಸಿ ಮಹಿಳೆಯರ ಮಕ್ಕಳ ಮದುವೆ ಸಹಾಯದನಕ್ಕೆ ಅರ್ಜಿ ಹಾಕಿದ ಆರು ತಿಂಗಳ ಒಳಗಾಗಿ ಹಣ ಬಿಡುಗಡೆ ಮಾಡಬೇಕು, ಸುಧಾ ಚಿದ್ರಿ ಬಳ್ಳಾರಿ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಉಪನಿರ್ದೇಶಕರ ಕಛೇರಿಯಲ್ಲಿ ಆ ದೀನ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದು ಇವರಿಗೆ ಹೆಚ್ಚುವರಿಯಾಗಿ  ಯೋಜನಾಧಿಕಾರಿಯಾಗಳು ದೇವದಾಸಿ ಪುನರ್ವಸತಿ ಯೋಜನೆ ಬಳ್ಳಾರಿ ಮತ್ತು ವಿಜಯನಗರ ನಿಯೋಜನೆ ಮಾಡಿರುವುದು ಸರಿ ಇಲ್ಲ ಯೋಜನಾಧಿಕಾರಿಗಳು ದೇವದಾಸಿ ಪುನರ್ವಸತಿ ಯೋಜನೆ ಬಳ್ಳಾರಿ ಜಿಲ್ಲೆಗೆ ಬೇರೆಯವರನ್ನು ನಿಯೋಜನೆ ಮಾಡಬೇಕು ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸಿದ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರು ಈರಮ್ಮ, ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ, ಸಂಡೂರು ತಾಲೂಕು ಕಾರ್ಯದರ್ಶಿ ಹೆಚ್.ದುರುಗಮ್ಮ, ಬಳ್ಳಾರಿ ತಾಲೂಕು ಅಧ್ಯಕ್ಷರು ಅಂಜಿನಪ್ಪ, ಕುಗುಗೋಡು ತಾಲೂಕು ಅಧ್ಯಕ್ಷರು ಯಂಕಮ್ಮ ವೀರೇಶ್ ಕುರುಗೋಡು ತಾಲೂಕು ಕಾರ್ಯದರ್ಶಿ ಹುಲಿಗೆಮ್ಮ ಕಂಪ್ಲಿ ತಾಲೂಕು ಅಧ್ಯಕ್ಷರು ಸೇರಿದಂತೆ ಅನೇಕರು ಇದ್ದರು.