ಮಕ್ಕಳ ಪೌಷ್ಠಿಕತೆ ನೀಗಲು ಚಿಕ್ಕೆ ಮೊಟ್ಟೆ ಬಾಳೆಹಣ್ಣು
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.04: ಮಕ್ಕಳಲ್ಲಿನ ಅಪೌಷ್ಟಿಕತೆ ನೀಗಿಸಲು  ಸೇಂಗಾ ಚೆಕ್ಕಿ,ಮೊಟ್ಟೆ ಹಾಗೂ ಬಾಳೆಹಣ್ಣು ಪ್ರಮುಖ ಪಾತ್ರ ವಹಿಸುತ್ತದೆಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದ್ದಾರೆ.
ಅವರು ಇಂದು
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಯಿಂದ ಎಂಟನೇ ತರಗತಿ ಮಕ್ಕಳಿಗೆ ಸರ್ಕಾರದ ಆದೇಶದಂತೆ ಸೇಂಗಾ ಚೆಕ್ಕಿ ವಿತರಿಸಿ ಮಾತನಾಡಿದರು.
ಬೆಳಿಗ್ಗೆ ರಾಗಿ ಮಾಲ್ಟ್ ಹಾಲು, ಮಧ್ಯಾಹ್ನ ಮೊಟ್ಟೆ ಜೊತೆ ಬಿಸಿಯೂಟ, ಸೇಂಗಾ ಚೆಕ್ಕಿ ಹಾಗೂ ಬಾಳೆ ಹಣ್ಣು ತಪ್ಪದೇ ಸೇವಿಸಬೇಕು.ಇದರಿಂದ
ಮಕ್ಕಳಲ್ಲಿ ಕಂಡುಬರುತ್ತಿರುವ ದೈಹಿಕ ಬಳಲಿಕೆ,ಅನಾರೋಗ್ಯ, ದೃಷ್ಟಿ ದೋಷ ಹೋಗಲಾಡಿಸಬಹುದು.
ಆದ್ದರಿಂದ ಮಕ್ಕಳು ಮೊಟ್ಟೆ, ಸೇಂಗಾ ಚೆಕ್ಕಿ, ಬಾಳೆಹಣ್ಣು ಸೇವಿಸುವುದರಿಂದ ದೈಹಿಕ ಬಲವರ್ಧನೆಗೊಳ್ಳುತ್ತದೆ.
ನೆನಪಿನ ಶಕ್ತಿ ಹೆಚ್ಚುತ್ತದೆ. ಕಲಿತ ಕಲಿಕೆ ನೆನಪಾರದೆ ಹೆಚ್ಚು ಸಮಯ ಉಳಿಯುತ್ತದೆ. ರೋಗಮುಕ್ತ ಜೀವನ ಸಾಗಿಸಲು ಸಹಕಾರಿ ಎಂದು ಹೇಳಿದರು.
ಶಿಕ್ಷಕರಾದ ಶ್ವೇತಾ, ಶಶಮ್ಮ, ರಾಮಾಂಜನೇಯ,ಗುರುಪ್ರಸಾದ್, ವಿಜಯ ಮುಂಡ್ರಿಗಿ,ಮುಖ್ಯ ಅಡಿಗೆಯವರಾದ ಗೌರಮ್ಮ, ರತ್ನಮ್ಮ, ಸುಂಕಮ್ಮ,ಈರಮ್ಮ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಕೆ.ಎಸ್. ಅನುಷ ಮುಂತಾದವರು ಉಪಸ್ಥಿತರಿದ್ದರು.