ಅಕ್ಷರ ಜ್ಞಾನಕ್ಕೆಅಭಿನಯ ಆನಂದಕ್ಕೆ- ಮುಲ್ಲಂಗಿ ನಂದೀಶ್
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.04: ಸ್ಥಳೀಯ ಪಟೇಲ್ ನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸ ಮಾ ಹಿ ಪ್ರಾ ಶಾಲೆ ಪಟೇಲನಗರದಲ್ಲಿ  ಉದ್ಘಾಟಿಸಿ ಮಾತನಾಡಿದ ಮಹಾಪೌರ ಮುಲ್ಲಂಗಿ ನಂದೀಶ್ ರವರು ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಅಕ್ಷರ ಕಲಿಕೆ ಒಂದೇ ಮುಖ್ಯವಲ್ಲ ಮಕ್ಕಳಲ್ಲಿ ಹುದುಗಿರುವ ಅಪ್ರತಿಮ ಪ್ರತಿಭೆ ಅನಾವರಣಗೊಂಡು ಸಮಾಜಮುಖಿಯಾಗಿ ಜೀವಿಸಲು ಮುಖ್ಯವಾದದ್ದು, ಅಕ್ಷರ ಜ್ಞಾನಕ್ಕೆಅಭಿನಯ ಆನಂದಕ್ಕೆ  ಎಂದು ತಿಳಿಸಿದರು
ಬಳ್ಳಾರಿ ತಾಲ್ಲೂಕು ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪೊಂಪನಗೌಡ ಬಿ  ಮಾತನಾಡುತ್ತಾ, ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳೂ ಕೂಡ ಶ್ರೇಷ್ಠ ಪ್ರಶಸ್ತಿ ಮುಖ್ಯ ಅಲ್ಲ ಪ್ರತಿಭೆ ಮುಖ್ಯ ಎಂದು ತಿಳಿಸಿದರು
ಕ್ಲಸ್ಟರ್ ನ ಸಿ ಆರ್ ಪಿ ಗಳಾದ ಎ ಎರ್ರಿಸ್ವಾಮಿ
“ಆಡಿ ಬಾ ನನ್ನ ಕಂದ ಅಂಗಾಲ ತೊಳೆದೇನ ತೆಂಗಿನ ಕಾಯಿ ತಿಳಿ ನೀರು  ತಕ್ಕೊಂಡು ಬಂಗಾರ ಮಾರೆ ತೊಳೆದೇನ” ಜಾನಪದ ವಾಕ್ಯದೊಂದಿಗೆ
ಮಕ್ಕಳು ಪಠ್ಯದ ಜೊತೆಗೆ ಪಟ್ಟೇತರ ಚಟುವಟಿಕೆ ಮನಕ್ಕೆ ಮುದ ನೀಡುತ್ತದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಪಟೇಲ್ ನಗರ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಸುಜಾತ ಬಿ ಆರ್ ಪಿ ಶ್ರೀಮತಿ ಜ್ಯೋತಿ ಸಿ ಆರ್ ಪಿ ಗಳಾದ ಲವಕುಮಾರ್, ಮೊಹಮದ್ , ಮಲ್ಲಿಕಾರ್ಜುನ, ಸರಕಾರಿ ಪ್ರೌಢಶಾಲೆ ಕಕ್ಕಬೇವಿನಹಳ್ಳಿ ಮುಖ್ಯ ಗುರುಗಳಾದ ಆನಂದ, ಪಟೇಲ್ ನಗರ ಕ್ಲಸ್ಟರ್ನ ಎಲ್ಲಾ ಮುಖ್ಯಗುರುಗಳು ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು ಮುಖ್ಯ ಗುರುಗಳಾದ ವೀರಭದ್ರ ಆಚಾರ್ ನಿರೂಪಿಸಿದರು. ಅಶೋಕ ರೆಡ್ಡಿ ಸ್ವಾಗತಿಸಿದರು, ತಿಪ್ಪನಗೌಡ ಮುಖ್ಯ ಗುರುಗಳು ವಂದಿಸಿದರು