ಬಳ್ಳಾರಿ ಎಪಿಎಂಸಿಗೆ ಆಡಳಿತಾಧಿಕಾರಿ ನೇಮಕ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.04: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಸಮಿತಿಗೆ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಅವರನ್ನು ಕೇಷಿ ಮಾರುಕಟ್ಟೆ ಸಚಿವಾಲಯ ನೇಮಕ ಮಾಡಿದೆ.
ಈವರೆಗೆ ಎಪಿಎಂಸಿ ಅಧ್ಯಕ್ಷರಾಗಿ ಕಟ್ಟೆಮನೆ ನಾಗೇಂದ್ರ ಮತ್ತು ಇತರೇ 14 ಜನ ನಿರ್ದೇಶಕರು ಸರ್ಕಾರದಿಂದ ನಾಮ ನಿರ್ದೇಶನಗೊಂಡಿದ್ದರು.
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಎರೆಡು ವರ್ಷಗಳ ಅವಧಿಗೆ ನೇಮಕ ಮಾಡಿದ್ದರಿಂದ ಈ ಅವಧಿ ಮುಗಿದಿದೆ. ಸರ್ಕಾರ ಮತ್ತೊಮ್ಮೆ ನೇಮಕ ಮಾಡಬೇಕಿದೆ. ಸಧ್ಯ ಡಿಸಿಯವರ ಮಾರ್ಗದರ್ಶನದಂತೆ ಕಾರ್ಯದರ್ಶಿಯವರು ಎಪಿಎಂಸಿ ಆಡಳಿತವನ್ನು ನಡೆಸಿಕೊಂಡು ಹೋಗಲಿದ್ದಾರಂತೆ.
ಹೊಸ ನೇಮಕದ ವಿವಾದ:
ಹೊಸದಾಗಿ  ಆಡಳಿತ ಮಂಡಳಿಗೆ ತಕ್ಷಣ ನೇಮಕಕ್ಕೆ ಕೆಲ ಸಮಸ್ಯೆಗಳು ಇವೆ. ಈವರೆಗೆ ಬಳ್ಳಾರಿಯ ಎಪಿಯಂಸಿ ಮಾರುಕಟ್ಟೆ ಆಡಳಿತದೊಂದಗೆ ಇದ್ದ ಸಂಡೂರು ಮಾರುಕಟ್ಟೆಗೆ ಪ್ರತ್ಯೇಕ ಆಡಳಿತ ಮಂಡಳಿ ರಚಿಸುವ ಪ್ರಕ್ರಿಯೆ ನಡೆದಿದೆ.
ಇನ್ನು ಕಂಪ್ಲಿ ಶಾಸಕ ಗಣೇಶ ನಮ್ಮ‌ಕುರುಗೋಡು ತಾಲೂಕಿಗೂ ನಾಲ್ಕು ನಿರ್ದೇಶಕ ಸ್ಥಾನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರಂತೆ.
ಇದಲ್ಲದೆ. ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ವಾಲ್ಮೀಕಿ ನಿಗಮದ ಹಗರಣದಲ್ಲಿ ಜೈಲು ಸೇರಿರುವುದರಿಂದ ಅವರ ಅನುಮತಿ ಇಲ್ಲದೆ ಹೊಸ ಆಡಳಿತ ಮಂಡಳಿಗೆ ನಿರ್ದೇಶಕರ ನೇಮಕ ವಿಳಂಬವಾಗುವ ಸಾಧ್ಯತೆ ಇದೆ.