ಟಿವಿ, ಪೋನ್ ಸೌಲಭ್ಯ ಕೇಳಿದದರ್ಶನ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.04: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಇಲಗಲಿನ ಸೆಮನಟ್ರಲ್ ಜೈಲಿನ ವಿಶೇಷ ಭದ್ರತಾ ಕೋಣೆಯಲ್ಲಿರುವ ನಟ ದರ್ಶನ್, ತಮ್ಮ‌ಕೋಣೆಗೆ ಟಿವಿ ಮತ್ತು ಪತ್ನಿ ಜೊತೆ ಮಾತನಾಡಲು ಪೋನ್ ಸೌಲಭ್ಯ ಕೇಳಿದ್ದಾರೆಂದು ಜೈಲಿನ ಸೂಪರಿಂಟೆಂಡೆಂಟ್ ಲತಾ ಅವರು ಹೇಳಿದ್ದಾರೆ.
ಸಂಜೆವಾಣಿಯೊಂದಿಗೆ ಮಾತನಾಡಿರುವ ಅವರು ಜೈಲಿನ‌ನಿಯಮಗಳ ಪ್ರಕಾರ ಕಾನೂನಿನಲ್ಲಿ ಅವಕಾಶ ಇರುಮತೆ ಟಿವಿ ಸೌಲಭ್ಯ ಕೇಳಿದ್ದಾರೆ.
ಮೇಲಾಧಿಕಾರಿಗಳ ಜೊತೆ ಚರ್ಚೆ ಮಾಡಿ ಈ ಸೌಲಭ್ಯ ಒದಗಿಸಲಿದೆ. ಖಾಸಗೀ ಚಾನಲ್ ಗಳು ಸಹ ಇದರಲ್ಲಿ ಲಭ್ಯ ಆಗಲಿವೆ ಎಂದಿದ್ದಾರೆ.
ಸೆಲ್ ನಲ್ಲಿ ಏಕಾಂಗಿಯಾಗಿರುವ ದರ್ಶನ್ ಗೆ ಇನ್ನು  ಮುಂದೆ ಪುಸ್ತಕಗಳ ಜೊತೆ ಟಿವಿ ಜೊತೆಯಾಗಲಿದೆ. ಇದಲ್ಲದೆ ಪತ್ನಿ ಜೊತೆ ಮಾತನಾಡಲು ಪೋನ್ ಸೌಲಭ್ಯ ಕೇಳಿದ್ದಾರಂತೆ. ಜೈಲಿನ ಇತರೇ ಕೈದಿಗಳಿಗೆ ಇರುವ ಸೌಲಭ್ಯದಂತೆ. ಅವರಿಗೂ ವಾರದಲ್ಲಿ ಮೂರು ದಿನ. ಒಂದು ಬಾರಿಗೆ ಐದು ನಿಮಿಷದಂತೆ. ನಿಗಧಿತ ಸಂಬಂಧಿಕರ ಅಥವಾ ವಕೀಲರ  ಮೊಬೈಲ್ ಸಂಖ್ಯೆಗೆ ಮಾತ್ರ ಸಂಪರ್ಕ ನೀಡಲಿದೆ. ಸಧ್ಯ ನಟ ದರ್ಶನ್ ತಮ್ಮ ಪತ್ನಿ‌ ಅವರ ಮೊಬೈಲ್ ಗೆ ಮಾತನಾಡಲು ಅನುಮತಿ ಕೋರಿದ್ದಾರಂತೆ.
ನಿಯಮದಂತೆ ಮಾತ್ರ ಅವರಿಗೆ ಇತರೇ ಕೈದಿಗಳಂತೆ ಸೌಲಭ್ಯ ನೀಡಲಿದೆ ಬಿಟ್ಟು ವಿಶೇಷ ಸೌಲಭ್ಯ ಇಲ್ಲ. ಹೆಚ್ಚಿನದು ಏನಿದ್ದರು ಕೋರ್ಟ್ ನಿರ್ದೇಶನದಂತೆ ನಡೆಯಲಿದೆಂದು ಲತಾ ಅವರು ಹೇಳಿದ್ದಾರೆ.