ಕೊಡತಿ ಗ್ರಾಮದಲ್ಲಿ ಪ್ರತಿಭಾ ಕಾರಂಜಿ
ಕೆ.ಆರ್.ಪುರ,ಸೆ.೪-ಸಮೂಹ ಸಂಪನ್ಮೂಲ ಕೇಂದ್ರ ವತಿಯಿಂದ ಮಹದೇವಪುರ ಕ್ಷೇತ್ರದ ದೊಡ್ಡಕನ್ನಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭ ಕಾರಂಜಿ ಕಾರ್ಯವನ್ನು ಕೊಡತಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು.
ಶಾಲಾ ಮಕ್ಕಳಲ್ಲಿ ವಿಧ್ಯಾಭ್ಯಾಸದ ಜೊತೆಗೆ ಇತರೆ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಇಂದಿಲು ಸಮೂಹ ಸಂಪನ್ಮೂಲ ಕೇಂದ್ರ ವತಿಯಿಂದ ನಡೆಸಲಾಯಿತು.
ಕಾರ್ಯಕ್ರಮಕ್ಕೆ ನಿರ್ಮಾಪಕರಾದ ಕೊಡತಿ ಶಿವರಾಂ ರವರು ಚಾಲನೆ ನೀಡಿದರು,ಪ್ರತಿಭಾ ಕಾರಂಜಿ ಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಭರತನಾಟ್ಯ,ಕವಾಲಿ,ಜಾನಪದ ನೃತ್ಯ,ಚದ್ಮವೇಶ, ಚರ್ಚ ಸ್ಪರ್ದೆ, ಕವನ ಪದ್ಯವಚನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕನ್ನಲ್ಲಿ ಕ್ಲಸ್ಟರ್ ನ ೨೪ ಶಾಲೆಗಳ ೫೦೦ ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ.ಆರ್.ರಮೇಶ್, ಬಾಬು ರೆಡ್ಡಿ,ಶೃತಿ ಸತೀಶ್,ಅಶೋಕ್, ಸಿ ಆರ್ ಪಿ ಮಂಜುನಾಥ್, ಶಿಕ್ಷಕರಾದ ಸದಾನಂದ,ಮುಖ್ಯ ಶಿಕ್ಷಕಿ ವನಿತ ಸೇರಿದಂತೆ ಶಾಲಾ ಶಿಕ್ಷಕರು ಮಕ್ಕಳು ಉಪಸ್ಥಿತರಿದ್ದರು.