ಪತ್ರಿಕಾ ವಿತರಕರ ಕಡೆಗಣನೆ ಸಲ್ಲದು; ಸೌಲಭ್ಯ ‌ವಿತರಿಸಲು‌ ಮನವಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೪; ನಗರದಲ್ಲಿ ಪತ್ರಿಕಾ ವಿತರಕರಿಗೆ ಪತ್ರಿಕೆಯನ್ನು ವಿಂಗಡಿಸುವುದಕ್ಕೆ ಸರಿಯಾದ ಸೂಕ್ತ ಜಾಗವಿರುವುದಿಲ್ಲ ಜಿಲ್ಲಾಡಳಿತ ಇದರ ಬಗ್ಗೆ ಗಮನಹರಿಸಿ ಹರಿಸಬೇಕೆಂದು ಹಿರಿಯ ಪತ್ರಿಕಾ ವಿತರಕ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಸುಮಾರು 40 ಸಾವಿರ ಪತ್ರಿಕಾ ವಿತರಕರು ಇದ್ದಾರೆ. ಅವರಲ್ಲಿ ತುಂಬಾ ಜನ ಬಾಡಿಗೆ ಮನೆಯಲ್ಲಿ ಇದ್ದಾರೆ ಕಡು ಬಡತನದಲ್ಲಿ ಇದ್ದಾರೆ.ಅವರಿಗೊಂದು ದಿನವಾದರು ಸೂಕ್ತ ಸಹಕಾರ ನೀಡಬೇಕುಅವರಿಗೊಂದು ನೆಲೆ ಕಲ್ಪಸಿಕೊಡಬೇಕು ಪತ್ರಿಕಾ ವಿತರಕರು ಯಾರಿಗೂ ಬೇಡವಾದ ವಸ್ತುಗಳಾಗಿದ್ದಾರೆ.. ನಮ್ಮ ನೆನಪು ಸೆಪ್ಟೆಂಬರ್ 4 ರಂದು ಅತೀ ಉತ್ಸಾಹದಲ್ಲಿ ಬರುತ್ತೆ. ಕೇವಲ ಒಂದುದಿನ ಮಾತ್ರ ಯಾಕೆ. ನಾವು ಮುಂಜಾನೆ ಕತ್ತಲು ಗಾಳಿ ಎನ್ನದೆ ಸಮಾಜ ಸಮಗ್ರ ಸುದ್ದಿ ತಲುಪಿಸು ಕೆಲಸ ಮಾಡುತ್ತೀವಿ.ಪತ್ರಿಕೆ ಓದಿ ಬಿಸಾಡುವಂತೆ ನಮ್ಮ ಮರೆಯುತ್ತಾರೆ.ಕೋವಿಡ್ ಸಮಯದಲ್ಲಿ ನಾವು ಮಾಡಿದ ಕೆಲಸ ಯಾರಿಗೆ ಯಾಕೆ ನೆನಪಿಗೆ ಬರೋದಿಲ್ಲ ಮನೆ ಅಂಗಡಿ ಆಫೀಸ್ ಮುಚ್ಚಿದರು ಪತ್ರಿಕೆ ತಲುಪಿಸಿ ಕಲೆಕ್ಷನ್‌ ಮಾಡುವ ಕೆಲಸಕ್ಕೆ ನಾವು ಬ್ರೇಕ್ ಹಾಕಲಿಲ್ಲ.ಇಷ್ಟು ನಿಸ್ವಾರ್ಥದಿಂದ ಕೆಲಸ ಮಾಡುವ ನಮಗೆ ನ್ಯಾಯ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪತ್ರಿಕಾ ವಿತರಕರಿಗಾಗಿ10 ಕೋಟಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು,ಎಲೆಕ್ಟ್ರಿಕಲ್ ಬೈಕ್ ಉಚಿತವಾಗಿ ಪತ್ರಿಕಾ ವಿತರಕರಿಗೆ ನೀಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.