ಲಿಂ.ಶ್ರೀ ಶಂಕರ ಶಿವಾಚಾರ್ಯರ ಪುಣ್ಯರಾಧನೆ
ಗುಳೇದಗುಡ್ಡ,ಸೆ4 : ನಗರದ ಕುರುಹಿನಶೆಟ್ಟಿ ಸಮಾಜದಿಂದ ಸಮಾಜದ ಗುರುಗಳಾದ ಹುಬ್ಬಳ್ಳಿಯ ಶ್ರೀ ವೀರಭೀಕ್ಷಾವರ್ತಿಮಠದ ಲಿಂ.ಶ್ರೀ.ಜ. ಶಂಕರ ಶಿವಾಚಾರ್ಯ ಮಹಾಸ್ವಾಮಿಗಳ 18ನೇ ಪುಣ್ಯಾರಾಧನೆ ಕಾರ್ಯಕ್ರಮದ ನಿಮಿತ್ತ ಶ್ರೀಗಳ ಭಾವಚಿತ್ರ ಮೆರವಣಿಗೆ ಅದ್ದೂರಿಯಿಂದ ನಡೆಯಿತು.
ಬೆಳಗ್ಗೆ ಕತೃ ಗದ್ದುಗೆಗೆ ಮಹಾಭಿಷೆಕ ನಡೆಯಿತು. ಮುಂಜಾನೆ ಶಂಕರ ಶಿವಾಚಾರ್ಯರ ಭಾವಚಿತ್ರದ ಮೆರವಣಿಗೆಗೆ ನೀಲಕಮಠ ಮಠದ ಶ್ರೀ ಮಹೇಶ್ವರಪ್ಪ ನೀಲಕಂಠ ಮಠ ಅವರು ಚಾಲನೆ ನೀಡಿದರು.
ಮೆರವಣಿಗೆಯು ಮೇಲಿನಪೇಟೆಯ ಶ್ರೀ ನೀಲಕಂಠ ಮಠದಿಂದ ಪ್ರಾರಂಭಗೊಂಡು ಚೌಬಜಾರ, ಅರಳಿಕಟ್ಟಿ, ಪುರಸಭೆ, ಪವಾರ ಕ್ರಾಸ್ ಮೂಲಕ ಹಾಯ್ದು ಶ್ರೀ ನೀಲಕಂಠೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ನಂತರ ಶ್ರೀಗಳ ಭಾವಚಿತ್ರಕ್ಕೆ ಮಹಾಮಂಗಳಾರತಿ ನಡೆಯಿತು. ಮೆರವಣಿಗೆಯಲ್ಲಿ ಆರತಿ ಹಿಡಿದ ಸುಮಂಗಲೆಯರು, ಮಹಿಳಾ ಮಂಡಳಿ, ಸಮಾಜದ ಹಿರಿಯರು, ಯುವಕರು ಭಾಗವಹಿಸಿದ್ದರು. ಕರಡಿಮಜಲು ಸೇರಿದಂತೆ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಜರುಗಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.