ಕ್ರೀಡೆಯಲ್ಲಿ ಚಂದನ್ ಅಮೋಘ ಸಾಧನೆ
ಕೋಲಾರ,ಸೆ.೦೪: ನಗರ ಹೊರವಲಯದ ಹೊನ್ನೇನಹಳ್ಳಿ ಗ್ರಾಮದ ಚಂದನ್ ಎಸ್ ಬಿನ್ ಶಿವಕುಮಾರ್ ಡಿ ರವರು ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಟೇಬಲ್ ಟೆನಿಸ್, ಚೆಸ್, ಅಥ್ಲೆಟಿಕ್ಸ್ ನಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟ ಮತ್ತು ವಿಜ್ಞಾನ ವಸ್ತು ಪ್ರದರ್ಶನ, ಭಗವದ್ಗೀತಾ ಕಂಠಪಾಠ ಸ್ಪರ್ಧೆ, ಕರಾಟೆ ಫೈಟ್ ನಲ್ಲಿ ಬ್ರೌನ್ ಬೆಲ್ಟ್ ಹಾಗೂ ಕೆಲವು ಅಂಡರ್ ೧೨ ಕುಸ್ತಿ ಪಂದ್ಯಾವಳಿಗಳಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸಿದ್ದಾರೆ.
ಇವರ ಸಾಧನೆಗೆ ಜಿಲ್ಲಾ ಅಥ್ಲೇಟಿಕ್ಸ್ ಕ್ರೀಡಾ ಸಮಿತಿ ಹಾಗೂ ಹೊನ್ನೇನಹಳ್ಳಿ ಗ್ರಾಮದ ಹಿರಿಯರು ಮುಖ್ಯಸ್ಥರು ಅಭಿನಂದನೆಗಳನ್ನು ಕೋರಿದ್ದಾರೆ.