ಕ್ರೀಡೆಗಳಲ್ಲಿ ವಿದ್ಯಾರ್ಥಿಗಳ ಸಾಧನೆ
ಕೋಲಾರ,ಸೆ.೪- ತಾಲೂಕಿನ ಪದವಿ ಪೂರ್ವ ಕಾಲೇಜುಗಳ ೨೦೨೪ರ ತಾಲೂಕು ಕ್ರೀಡಾಕೂಟದಲ್ಲಿ ಕೋಲಾರದ ಮಹಿಳಾ ಸಮಾಜ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಕ್ರೀಡಾ ಸಾಧನೆಯನ್ನು ಮಾಡಿದ್ದು, ಕ್ರೀಡಾ ವಿಜೇತ ವಿದ್ಯಾರ್ಥಿಗಳನ್ನು ಮಹಿಳಾ ಸಮಾಜದ ಆಡಳಿತ ಮಂಡಳಿ ಮತ್ತು ಆಡಳಿತ ಅಧಿಕಾರಿ ನವೀನ ಎಂ ಹಾಗೂ ಉಪನ್ಯಾಸಕ ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ತಾಲೂಕು ಮಟ್ಟದ ಕ್ರೀಡೆಗಳಲ್ಲಿ ವೈಯಕ್ತಿಕ ವಿಭಾಗದಲ್ಲಿ ಮಹಿಳಾ ಸಮಾಜ ಕಾಲೇಜಿನ ವಿದ್ಯಾರ್ಥಿಗಳು ಡಿಸ್ಕಸ್ ಥ್ರೋ, ಹ್ಯಾಮರ್ ಥ್ರೋ, ಜಾವಲಿನ್ ಥ್ರೋ, ೮೦೦ ಮೀಟರ್ ಓಟ, ೪೦೦ ಮೀಟರ್ ಓಟ, ೧೦೦ ಮೀಟರ್ ಓಟ, ಹರ್ಡಲ್ಸ್, ಹಾಗೂ ಕರಾಟೆ, ಚೆಸ್‌ನಲ್ಲಿ ಬಾಲಕ ಬಾಲಕಿಯರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ ಹಾಗೂ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗುಂಪು ಕ್ರೀಡೆಗಳಲ್ಲಿ ಕಬ್ಬಡಿ ಕ್ರೀಡೆಯಲ್ಲಿ ಮಹಿಳಾ ಸಮಾಜದ ಕಾಲೇಜಿನ ಬಾಲಕರು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಮೇಲಾಟಗಳಲ್ಲಿ ಬಾಲಕಿಯರು ತಂಡ ಪ್ರಶಸ್ತಿಯನ್ನು ಸಹ ಪಡೆದಿರುತ್ತಾರೆ ಹಾಗೂ ಬಾಸ್ಕೆಟ್ ಬಾಲ್ ಮತ್ತು ಲಾಂಗ್ ಜಂಪ್ ಕ್ರೀಡೆಗಳಲ್ಲಿ ಬಾಲಕ ಬಾಲಕಿಯರು ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ಬೆಳಗಿದ್ದಾರೆ. ಕ್ರೀಡಾ ವಿಜೇತ ವಿದ್ಯಾರ್ಥಿಗಳನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.