ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
ತಾಳಿಕೋಟೆ :ಸೆ.೪: ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ತಾಳಿಕೋಟೆ ಪಟ್ಟಣದ ರಿಲಾಯನ್ಸ್ ಎಜ್ಯುಕೇಶನ್ ಸೋಸಾಯಿಟಿ ಅಡಿಯಲ್ಲಿ ನಡೆಯುತ್ತಿರುವ ರಿಲಾಯನ್ಸ್ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ವಿವಿಧ ಕ್ರೀಡೆಗಳಲ್ಲಿ ಜಯಶಾಲಿಯಾಗುವದರೊಂದಿಗೆ ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ರಿಲೇ ಆಟದಲ್ಲಿ ಪ್ರಥಮ ಸ್ಥಾನಗಳಿಸಿದ ಬಾಲಕಿಯರು ಕುಮಾರಿ. ನಿದಾ ಬೇಪಾರಿ, ಗುಲ್ಬಾಜ ಬೇಪಾರಿ, ಸಮೀರಾ ಬೇಪಾರಿ, ಕುಮಾರಿ.ಸನಾ ಹಡಗಿನಾಳ ಅದೇ ರೀತಿಯಾಗಿ ವೈಯಕ್ತಿಕ ಆಟದಲ್ಲಿ ಬಾಲಕಿ ಸಮೀರಾ ಬೇಪಾರಿ ೧೦೦ ಮೀಟರ ಓಟದಲ್ಲಿ ಪ್ರಥಮ ಸ್ಥಾನ, ಗುಲ್ನಾಜ ಬೇಪಾರಿ ೨೦೦ ಮೀಟರ ಓಟದಲ್ಲಿ ತೃತೀಯ ಸ್ಥಾನವನ್ನು ಗಳಿಸಿದ್ದಾರೆ. ಮತ್ತು ವೈಯಕ್ತಿಕ ಆಟದಲ್ಲಿ ಬಾಲಕರ ವಿಭಾಗದ ಕುಮಾರ.ಸೈಜಾದ ಕೋರವಾರ ಗುಂಡು ಎಸೆತದಲ್ಲಿ ದ್ವಿತಿಯ ಸ್ಥಾನವನ್ನು ಗಳಿಸಿದ್ದಾನೆ.
ಬಾಲಕ-ಬಾಲಕಿಯರು ತಾಳಿಕೋಟೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ-ದ್ವಿತೀಯ ಸ್ಥಾನಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಎ.ಎಸ್.ನಮಾಜಕಟ್ಟಿ, ಕಾರ್ಯದರ್ಶಿಯಾದ ಮೊಹಮ್ಮದಇಸಾಖ ನಮಾಜಕಟ್ಟಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ.ಬಿ.ಎ.ವಠಾರ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ.ಎಸ್.ಕೆ.ಚೋರಗಸ್ತಿ, ಸಹ-ಶಿಕ್ಷಕರಾದ ಜಿಲಾನಿ. ಆಯ್. ಸಂಗಾಪೂರ, ಶ್ರೀಮತಿ.ಎಚ್.ಎ.ಆರಬೋಳ, ಮತ್ತು ದೈಹಿಕ ಶಿಕ್ಷಕರಾದ ಸಿ.ಜಿ.ಗೌಡರ, ಮಕ್ಕಳ ಸಾಧನೆಗೆ ಸಂತಸವನ್ನು ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.