ಆಣದೂರಿನಲ್ಲಿ ಸ್ವಚ್ಚತಾ ಅಭಿಯಾನ
ಬೀದರ:ಅ.3:ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ ನಿಮಿತ್ಯ ಬೀದರ್ ತಾಲೂಕಿನ ಆಣದೂರ ಗ್ರಾಮದಲ್ಲಿ ಗ್ರಾಮ ವಿಕಾಸ ಟ್ರಸ್ಟ್ ಮತ್ತು ಸರ್ವಜ್ಞ ಪ್ರಾಥಮಿಕ, ಪ್ರೌಢಶಾಲೆ ಆಣದೂರ ಇವುಗಳ ಸಂಯುಕ್ತಾಶ್ರಯದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಶ್ರದ್ಧಾ ಕೇಂದ್ರಗಳಾದ ಬಸವ ಮಂಟಪ, ಲಕ್ಷ್ಮೀ ಮಂದಿರ, ಭವಾನಿ ದೇವಾಲಯ, ಬಸವೇಶ್ವರ ವೃತ್ತ, ಮಜೀದ್ ಇವುಗಳ ಸ್ವಚ್ಛತಾ ಕಾರ್ಯವನ್ನು ಗ್ರಾಮ ವಿಕಾಸ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಬಸವರಾಜ ಬಶೆಟ್ಟಿ ಆವರ ನೇತೃತ್ವದಲ್ಲಿ ಮಾಡಲಾಯಿತು.