ಹತ್ತು ಜನ ವಚನಕಾರ್ತಿಯರ ಕುರಿತು ಕವಿಗೋಷ್ಠಿ
ಬೀದರ್:ಅ.3: 12 ನೇ ಶತಮಾನದ ಶರಣರು ತಾವು ನುಡಿದಂತೆ ನಡೆದು ನಮ್ಮೆಲ್ಲರಿಗೂ ಇಂದಿಗೂ ಆದರ್ಶ ವ್ಯಕ್ತಿಗಳಾಗಿ ಕಂಗೊಳಿಸುತ್ತಿದ್ದಾರೆ ಎಂದು ಶ್ರೀ ಗುರುಸಿದ್ದಪ್ಪಾ ಬಿರಾದಾರ ಅವರು ನುಡಿದರು, ನಿನ್ನೆ ಸಂಜೆ ವಚನಾಮೃತ ಕನ್ನಡ ಸಂಂಘದಿಂದ ಆಯೋಜಿಸಲಾದ 10 ಜನ ವಚನಕಾರ್ತಿಯರ ಕುರಿತಾದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತಾನಾಡಿದರು.
ಜಗತ್ತಿನ ಎಲ್ಲಾ ಭಾಷೆಯ ಸಾಹಿತ್ಯಗಳಕಿಂತಲೂ ವಚನ ಸಾಹಿತ್ಯಕ್ಕೆ ಒಂದು ಗೌರವದ ಸ್ಥಾನ ಇದೆ ಎಂದು ನುಡಿಯುತ್ತಾ ಇಂತಹ ಅಮೂಲ್ಯವಾದ ಸಾಹಿತ್ಯದ ಸಾರವನ್ನು ವಚನಾಮೃತ ಕನ್ನಡ ಸಂಘ ಜನಮನಕ್ಕೆ ಮುಟ್ಟಿಸುತ್ತಿರುವ ಕಾರ್ಯ ಅಭಿನಂದನೀಯ ಎಂದು ಹೇಳಿದರು.
ಮುಖ್ಯ ಅತಿಧಿಗಳಾಗಿ ಆಗಮಿಸಿ ಮಾತನಾಡಿದ ಡಾ|| ಜಗದೇವಿ ಮೈನಾ
ಳೆಯವರು 33 ಜನ ವಚನಾಕಾರ್ತಿಯರು ತಮ್ಮ ವಚನಗಳ ಮುಖಾಂತರ ಮಾನವ ಕುಲದ ಸಂಬಂಧಗಳ ಗಟ್ಟಿಗೊಳಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಕಸಗುಡಿಸುವ ಕೆಲಸ ಮಾಡುವ ಸತ್ಯಕ್ಕ ದಾರಿಯಲ್ಲಿ ಹೊನ್ನು ಬಿದ್ದರು ನೋಡಲಾರೆ ಮುಟ್ಟಿದರಾಗೆ ಎಂದು ಹೇಳಿದ ಮಾತು ಉಲ್ಲೇಖಿಸಿ ಅಂದಿನ ಶರಣರು ಹೇಗೆ ಸತ್ಯದೆಡೆಗೆ ಹೆಜ್ಜೆ ಇಟ್ಟು ಬದುಕಿದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದಕೊಂಡು ಮಾತನಾಡಿದ ಪ್ರೊ|| ಸಿದ್ರಾಮಪ್ಪಾ ಮಾಸಿಮಾಡೆಯವರು ಬೀದರ ಜಿಲ್ಲಯ ಎಲ್ಲ ಎಳೆ ಮಕ್ಕಳಿಗೂ ಅನುಭವಿಗಳಿಗೂ ವೇದಿಕೆ ಇದಗಿಸಿಕೊಟ್ಟು ವಚನ ಸಾಹಿತ್ಯ ಪ್ರತಿ ಮನೆಗೂ ತಲುಪಿಸುವ ಕಾರ್ಯ ಮಾಡುವೆವು ಎಂದು ಹೇಳಿದರು.
ಶ್ರೀ ಸುಭಾಷ ಮಾಸಿಮಾಡೆ ಹಾಗೂ ಶ್ರೀ ಅಶೋಕ ಬೋಗಾರ, ಶ್ರೀ ಶಂಭುಲಿಂಗ ವಾಲದೊಡ್ಡಿ, ಶ್ರೀ ಪ್ರವೀಣ ಅವರನ್ನು ಸನ್ಮಾನಿಸಲಾಯಿತು. ಕು. ಬಸವಭಕ್ತಿ ಮಾಶೆಟ್ಟೆ, ಶ್ರೀ ಎಸ್.ಎಸ್. ಹೊಡಮನಿ, ಶ್ರೀ ಹಂಸ ಕವಿ, ಶ್ರೀ ಬಾಲಾಜಿ ಕುಂಬಾರ, ಶ್ರೀ ನಾಗೇಶ ಸ್ವಾಮಿ, ಶ್ರೀಮತಿ ಶ್ರೀದೆವಿ ಸೋಮಶೆಟ್ಟಿ, ಶ್ರೀಮತಿ ಶಿಲ್ಪಾ ಮಜಗೆ, ಕು. ಭಕ್ತಿ ಪಾಟೀಲ 10 ಸಾಹಿತಿಗಳು ಕವಿತೆ ಓದಿದರು.
ಮೊದಲಿಗೆ ಪ್ರವೀಣ ಮ್ಯುಜಿಕ ಅಕಾಡೆಮಿಯ ಮಕ್ಕಳು ಒಳ್ಳೆಯ ರೀತಿಯಲ್ಲಿ ನಾಡಗೀತೆ ಹಾಡಿದರು, ಶ್ರೀಮತಿ ರೇಣುಕಾ ಎನ್.ಬಿ ಶಂಭುಲಿಂಗ ವಾಲದೊಡ್ಡಿ, ಶ್ರೀಕಾಂತ ಬಿರಾದಾರ ವಚನ ಗಾಯನ ಮಾಡಿದರು.
ಸ್ವಾಗತ ಬಸವರಾಜ ಬಿರಾದಾರ ನೆರವೇರಿಸಿದರೆ, ವಂದನಾರ್ಪಣೆ ಬಸ್ವರಾಜ ಮೂಳಗೆಯವರು ಮಾಡಿದರು. ಶ್ರೀ ಪರಮೇಶ್ವರ ಬಿರಾದಾರ ಅವರು ಸಂಚಾಲನೆ ಮಾಡಿದರು.
ಕಾರ್ಯಕ್ರಮದಲ್ಲಿ ಬಿ ಎಂ ಬಿರಾದಾರ, ಶಿದ್ರಾಮ ಸಪಾಟೆ, ಸತ್ಯಮೂರ್ತಿ, ಬಸಯ್ಯಾ ಸ್ವಾಮಿ, ಬಸವರಾಜ ಪಾಟೀಲ್, ಬಸವರಾಜ ರುದನೂರ, ಸಂತೋಷ ಮಂಗಳೂರೆ, ಸ್ವರೂಪರಾಣಿ ನಾಗೂರೆ, ಸುಮಿತ, ಡಾ|| ಸೂರ್ಯಕಾಂತ ಚಿದ್ರೆ, ಪದ್ಮರಾಜ ಅಜಿತಮಣೆಯವರು ಉಪಸ್ಥಿತರಿದ್ದರು.