ಬಿಕೆಐಟಿಯಲ್ಲಿ ವಿಜಯೋತ್ಸವ 2024 ನಾಳೆಯಿಂದ
ಭಾಲ್ಕಿ:ಅ.3: ಪಟ್ಟಣದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಭೀಮಣ್ಣ ಖಂಡ್ರೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲೊಜಿ ಕಾಲೇಜಿನಲ್ಲಿ ಅ.4 ರಿಂದ ಕಾಲೇಜ್ ತಾಂತ್ರಿಕ ಮತ್ತು ಸಾಂಸ್ಕøತಿಕ ಉತ್ಸವ 2024 (ಕಾಲೇಜ್ ಟೆಕ್ನೋ ಆಂಡ್ ಕಲ್ಚರಲ್ ಫೆಸ್ಟ್ 2024) ರ ನಿಮಿತ್ಯ ವಿಜಯೋತ್ಸವ 2024 ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಕೆಐಟಿ ಪ್ರಾಂಶುಪಾಲ ಡಾ| ಉದಯಕುಮಾರ ಕಲ್ಯಾಣ ತಿಳಿಸಿದ್ದಾರೆ.
ಪಟ್ಟಣದ ಬಿಕೆಐಟಿ ಕಾಲೇಜಿನಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಅ.4 ಮತ್ತು ಅ.5 ರಂದು ಎರಡು ದಿವಸಗಳ ಕಾಲ ಕಾಲೇಜಿನಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಜಯೋತ್ಸವ 2024 ಕಾರ್ಯಕ್ರಮ ಆಯೋಜಿಸಿದೆ. ಅ.4 ರಂದು ಹೊಸಬರ ಸಮ್ಮಿಳನ (ಫ್ರೇಶರ್ ಮೀಟ್) ಕಾರ್ಯಕ್ರಮಗಳು ಬೆಳಿಗ್ಗೆ 8 ಗಂಟೆಯಿಂದಲೇ ಪ್ರಾರಂಭಿಸಲಾಗುವುದು. ಪ್ರಾರಂಭದಲ್ಲಿ ಪ್ರೊ. ಕಾವೇರಿ, ಪ್ರೊ. ಗಾಯತ್ರಿ, ಪ್ರೋ. ಸಂದ್ಯಾರ ರವರ ಸಾರಥ್ಯದಲ್ಲಿ ರಂಗೋಲಿ ಸ್ಪರ್ಧೆ, ಪ್ರೊ| ಎಮ್.ಬಿ.ಪಾಟೀಲ, ಡಾ| ಅನೀಲ ಕೊಡಗೆ, ಪ್ರೊ| ಸುರೇಖಾ.ಎಸ್ ರವರ ಸಾರಥ್ಯದಲ್ಲಿ ಫ್ಲ್ಯಾಸ್ ಮೋಬ್, ಪ್ರೊ| ಜೀವರಾಜ.ಎಸ್, ಪ್ರೊ| ಜಯರಾಜ ರವರ ಸಾರಥ್ಯದಲ್ಲಿ ಕ್ಲೇ ಮಾಡಲಿಂಗ್, ಡಾ| ಕಲ್ಪನಾ ಚಿಕಟವಾರ, ಪ್ರೊ| ರಾಜಕುಮಾರ.ವಿ ರವರ ಸಾರಥ್ಯದಲ್ಲಿ ಪೇಂಟಿಗ್, ಪ್ರೊ| ನಾಗರಾಜ ಮತ್ತು ಪ್ರೋ| ಕಿರಣ ನೇತೃತ್ವದಲ್ಲಿ ಕಾಲೇಜ್, ಡಾ| ಅಖಿಲೇಶ.ಕೆ. ಪ್ರೋ| ಭಾಗ್ಯಶ್ರೀ ನೇತೃತ್ವದಲ್ಲಿ ಕಾರ್ಟೂನಿಂಗ್, ಪ್ರೊ| ಬಾಲಾಜಿ, ಪ್ರೋ| ಗುಂಡಪ್ಪಾ.ಬಿ ನೇತೃತ್ವದಲ್ಲಿ ಪಬ್ ಕಾರ್ಯಕ್ರಮಗಳನ್ನು ನಡಸಲಾಗುವುದು. ಈ ಎಲ್ಲಾ ಕಾರ್ಯಕ್ರಮಗಳಿಗೆ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ| ಅಂಕುಶ ಢೋಲೆ ಚಾಲನೆ ನೀಡುವರು.
ಅ.5 ರಂದು ಸಾಂಸ್ಕøತಿಕ ಉಡುಗೆ, ಪದವಿಪ್ರಧಾನ ದಿನ ಮತ್ತು ಸಾಂಸ್ಕøತಿಕ ರಾತ್ರಿ (ಎಥಿಕ್ ಡೇ, ಗ್ರ್ಯಾಜವೇಶನ್ ಡೇ ಮತ್ತು ಕಲ್ಚರಲ್ ನೈಟ್) ಕಾರ್ಯಕ್ರಮಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳೂ ಆದ ಸಂಸದ ಸಾಗರ ಈಶ್ವರ ಖಂಡ್ರೆ ಚಾಲನೆ ನೀಡುವರು. ಬೆಳಿಗ್ಗೆ 10 ಗಂಟೆ ಇಂದಲೇ, ಪ್ರೊ| ಎಬಿನೆಜರ್.ಇ ಮತ್ತು ಸಂತೋಷ.ಟಿ ನೇತೃತ್ವದಲ್ಲಿ ಇನ್ಟಾ ರೀಲ್ಸ್ ಕಾರ್ಯಕ್ರಮ, ಡಾ| ಬಸವರಾರ ಕಾವಡಿ ಮತ್ತು ಡಾ| ರಾಜಶೇಖರ ಮಠಪತಿ ಸಾರಥ್ಯದಲ್ಲಿ ಪಿಕ್ ಆಂಡ್ ಸ್ಪೀಕ್ ಡಿಬೆಟ್ ಕಾರ್ಯಕ್ರಮ, ಪ್ರೊ| ವಿಶಾಲ ಮೋರೆ, ಪ್ರೊ| ಬಸವರಾಜ.ಸಿ ನೇತೃತ್ವದಲ್ಲಿ ಕಂಪ್ಯೂಟರ್ ರೇಸಿಂಗ್ ಆಟಗಳು, ಡಾ| ಬಿ.ಸೂರ್ಯಕಾಂತ, ಪ್ರೊ| ಸುನೀಲ ಸಂಗಮೆ ಸಾರಥ್ಯದಲ್ಲಿ ಸ್ಪಾಟ್ ಫೋಟೊಗ್ರಫಿ, ಡಾ| ಎಸ್.ಬೆಳಮಗಿ, ಪ್ರೊ| ಆರತಿ ಬಿರಾದಾರ, ಪ್ರೊ| ಪ್ರಿಯಾಂಕಾ.ಕೆ ನೇತೃತ್ವದಲ್ಲಿ ಕ್ವಿಜ್, ಡಾ| ಗೀತಾಂಜಲಿ.ಎ, ಪ್ರೊ| ಪ್ರಶಾಂತ.ಎಮ ನೇತೃತ್ವದಲ್ಲಿ ಪೋಸ್ಟರ್ ಮೇಕಿಂಗ್, ಡಾ| ದಯಾನಂದ.ಕೆ, ಪ್ರೊ| ಅಂಬಿಕಾ, ಪ್ರೊ| ಐಶ್ವರ್ಯಾ ಸಾರಥ್ಯದಲ್ಲಿ ಟ್ರಸರ್ ಹಂಟ್ ಕಾರ್ಯಕ್ರಮಗಳು ಆಯೋಜಿಸಲಾಗಿದೆ.
ನಂತರ ಸಾಯಂಕಾಲ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಎಸ್.ಪಿ ಪ್ರದೀಪ ಗುಂಟಿ ಐಪಿಎಸ್, ತೆಲುಗು ಚಿತ್ರನಟ ದ್ವಾರಕೇಶ.ಪಿ ಉಪಸ್ಥಿತರಿರುವರು. ಪ್ರೊ| ಪ್ರಹ್ಲಾದ.ಎಸ್, ಡಾ| ಸಂಗಮೇಶ ಕಲ್ಯಾಣೆ, ಡಾ| ಪ್ರಶಾಂತ.ಎಸ್ ರವರ ಸಂಚಾಲಕತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆಯುವವು ಎಂದು ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಡಾ| ಬಿ.ಸೂರ್ಯಕಾಂತ ಇದ್ದರು.